ಯುಎಇ: ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿ ಬಳಿಕ ಮತ್ತೆ ಕ್ರಿಕಟ್ ಗೆ ಮರಳುತ್ತಿದ್ದಾರೆ. ಕಳಪೆ ಫಾರ್ಮ್‌ನಿಂದ ಕಂಬ್ಯಾಕ್ ಮಾಡುವ ಸಾಧ್ಯತೆಯಿದ್ದು, ಪಾಕ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಲು ರೆಡಿಯಾಗಿದ್ದಾರೆ.
ಇತ್ತೀಚೆಗೆ ಇದೇ ವರ್ಷದ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಒಂದು ಟೆಸ್ಟ್, 2 ಏಕದಿನ ಹಾಗೂ 2 ಟಿ20 ಪಂದ್ಯದಲ್ಲಿ ಕೊಹ್ಲಿ ಕೇವಲ 76 ರನ್ ಗಳನ್ನು ಮಾತ್ರಗಳಿಸಿದ್ದರು. ಆ ಬಳಿಕ ಅವರು ವೆಸ್ಟ್ ಇಂಡೀಸ್, ಜಿಂಬಾಬ್ಬೆ ಸರಣಿಯಲ್ಲಿ ಕಾಣಿಸಿಕೊಂಡಿಲ್ಲ. ಕ್ರಿಕೆಟ್ ನಿಂದ ಕೆಲ ಸಮಯ ವಿಶ್ರಾಂತಿ ಪಡೆದುಕೊಂಡಿದ್ದರು. ಈಗ ಮತ್ತೆ ಕಂಬ್ಯಾಕ್ ಮಾಡುತ್ತಿದ್ದಾರೆ.
ಸ್ಟಾರ್ ಸ್ಪೋಟ್ಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಮಾನಸಿಕ ಆರೋಗ್ಯದ ಕುರಿತು ಹಾಗೂ ತಮ್ಮ ಕಷ್ಟದ ದಿನಗಳ ಬಗ್ಗೆ ಮಾತಾನಾಡಿದ್ದಾರೆ.
ಕಳೆದ 10 ವರ್ಷದಲ್ಲಿ ಇದೇ ಮೊದಲ ಬಾರಿಗೆ ನಾನು ಒಂದು ತಿಂಗಳು ಸಂಪೂರ್ಣವಾಗಿ ಬ್ಯಾಟ್ ಮುಟ್ಟಿಲ್ಲ. ನಾನು ನನ್ನ ಅಕ್ರಮಣ ಶೀಲ ಮನೋಭಾವವನ್ನು ನಕಲು ಮಾಡುತ್ತಿದ್ದೇನೆ ಎನ್ನುವುದನ್ನು ಅರಿತುಕೊಂಡೆ. ಇಲ್ಲ ನನ್ನಲ್ಲಿ ಅಕ್ರಮಣ ಶೀಲ ಮನೋಭಾವಯಿದೆ ಎಂದು ಮನವರಿಕೆ ಮಾಡಿಕೊಳ್ಳುತ್ತಿದ್ದೆ. ನನ್ನ ದೇಹ ಅದನ್ನು ನಿಲ್ಲಿಸು ಎಂದು ಹೇಳುತ್ತಿತ್ತು.ನನ್ನ ಮನಸ್ಸು ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳುತ್ತಿತ್ತು ಎಂದಿದ್ದಾರೆ.
ನನ್ನನು ನಾನು ಮಾನಸಿಕವಾಗಿ ಬಲಿಷ್ಠವೆಂದುಕೊಳ್ಳುತ್ತೇನೆ. ಆದರೆ ಎಲ್ಲದಕ್ಕೂ ಒಂದು ಮಿತಿಯಿರುತ್ತದೆ. ಆ ಮಿತಿಯನ್ನು ಗುರುತಿಸಿಕೊಳ್ಳಬೇಕು. ಇಲ್ಲದಿದ್ರೆ ಅದು ನಮಗೆ ಅನಾರೋಗ್ಯವಾಗಬಹುದು. ಈ ಸಮಯದಲ್ಲಿ ನಾನು ತುಂಬಾ ಕಲಿತ್ತಿದ್ದೇನೆ ಎಂದರು.
ಮಾನಸಿಕವಾಗಿ ನಾನು ಕುಗ್ಗಿದ್ದೆ ಎಂದು ಹೇಳಲು ನನಗೆ ಹಿಂಜರಿಕೆಯಿಲ್ಲ. ಇದು ಸಾಮಾನ್ಯ ವಿಷಯ. ಆದರೆ ಕೆಲವರು ಈ ಬಗ್ಗೆ ಮಾತಾನಾಡಲು ಹಿಂದೇಟು ಹಾಕುತ್ತಾರೆ. ಮಾನಸಿಕವಾಗಿ ಕುಗ್ಗಿದ್ದರೂ, ಎಲ್ಲರ ಮುಂದೆ ಬಲಿಷ್ಠವಾಗಿದ್ದೇವೆ ಎಂದು ತೋರಿಸುವುದು ದುರ್ಬಲವಾಗಿದ್ದೇವೆಂದು ಒಪ್ಪಿಕೊಳ್ಳುವುದಕ್ಕಿಂತ ಕೆಟ್ಟದ್ದು ಎಂದಿದ್ದಾರೆ.ಈ ಹಿಂದೆ ವಿರಾಟ್ ಕೊಹ್ಲಿಗೆ 2014 ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಮಾನಸಿಕ ಆರೋಗ್ಯ ಸಮಸ್ಯೆ ಎದುರುರಾಗಿತ್ತು.