ಕುಣಿಗಲ್: ‘ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ನಮ್ಮ ಮನೆಯಲ್ಲೇ ತಾನೇ ಸಾಕಿ ಸಲಹಿದ ಹಲವು ಕುರಿಗಳು ತನ್ನೆದುರಲ್ಲೇ ಸಾವನ್ನಪ್ಪಿದವು. ಗ್ರಾಮೀಣ ಪ್ರದೇಶದಲ್ಲಿ ಪಶು ವೈದ್ಯರ ಲಭ್ಯತೆ ಇದ್ದಿದ್ದರೆ ಯಾವ ರಾಸುಗಳೂ ಸಾಯಲ್ಲ. ದೇಶಕ್ಕೆ ಅನ್ನ ನೀಡುವ ರೈತಾಪಿ ಜನರ ಬೆನ್ನೆಲುಬಾದ ರಾಸುಗಳ ರಕ್ಷಣೆಗಾಗಿ ಪಶು ವೈದ್ಯನಾಗುವ ಕನಸಿದೆ.’
ಇದು ಕುಣಿಗಲ್ನ ಜ್ಞಾನ ಭಾರತಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ 600ಕ್ಕೆ 577 ಅಂಕ ಪಡೆದು ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿರುವ ಎಚ್. ವಿ.ಮಂಜೇಶ ಎಂಬ ವಿದ್ಯಾರ್ಥಿಯ ಕನಸು. ಜವಾಬ್ದಾರಿ ಆಗಲಿ:ರೈತರಿಗೆ ಕುರಿ, ಎಮ್ಮೆ, ಹಸುಗಳೇ ಜೀವನಾಧಾರ. ಹೈನುಗಾರಿಕೆಯಿಂದ ಹಿಡಿದು ಕೃಷಿ ಚಟುವಟಿಕೆಗಳಿಗೆ ಇವು ಆಧಾರಸ್ತಂಭ. ಆದರೆ, ಇವತ್ತಿನ ದಿನಗಳಲ್ಲಿ ಪಶುಗಳಿಗೆ ಸಾಕಷ್ಟು ರೋಗಗಳು ಕಾಣಿಸಿ ಕೊಳ್ಳುತ್ತಿವೆ. ರೋಗ ಕಾಣಿಸಿಕೊಂಡರೂ ರೈತರಿಗೆ ಕಾಯಿಲೆ ಅರಿ ವಾಗುವುದಿಲ್ಲ. ಪಶುಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಯಾಗಬೇಕು ಎನ್ನುವುದು ಮಂಜೇಶನ ಕಳಕಳಿ.
ಛಲವಿದ್ದರೆ ಸಾಧನೆ ಸುಲಭ:ಛಲವಿದ್ದರೆ ಏನು ಬೇಕಾದರೂ ಸಾಧನೆ ಮಾಡ ಬಹುದು ಎಂಬುದನ್ನು ಮಂಜೇಶ ತೋರಿಸಿಕೊಟ್ಟಿ ದ್ದಾನೆ. ಬಡತನದ ಬೇಗೆ ಯಲ್ಲಿ ಬೆಂದು ಪೈಸೆಯ ಬೆಲೆ ಅರಿತಿರುವ ವಿದ್ಯಾರ್ಥಿ ವಿಜ್ಞಾನ ವಿಭಾಗದಲ್ಲಿ ಅದ್ಬುತ ಸಾಧನೆ ಮಾಡಿ ಇತರೆ ವಿದ್ಯಾರ್ಥಿಗಳಿಗೆ ಮಾದರಿ ಯಾಗಿದ್ದಾನೆ.
ನಾನು ಪಶುವೈದ್ಯನಾಗುವ ಬಯಕೆ ಹೊಂದಿದ್ದೇನೆ. ಸಿಇಟಿ ಪರೀಕ್ಷೆಗಾಗಿ ಸಾಕಷ್ಟು ತಯಾರಿ ನಡೆಸುತ್ತಿದ್ದೇನೆ. ಹಾಗಾಗಿ, ಅದು ಈಡೇರುತ್ತದೆ ಎಂಬ ನಂಬಿಕೆ ಇದೆ ಎಂದು ವಿದ್ಯಾರ್ಥಿ ಎಚ್.ವಿ.ಮಂಜೇಶ ತಿಳಿಸಿದ್ದಾರೆ.
ಬದುಕು ಉಜ್ವಲವಾಗಲಿ: ಕಡಲೆಕಾಯಿ ವ್ಯಾಪಾರ ಮಾಡಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿರುವ ನಮ್ಮ ಕಾಲೇಜಿನ ವಿದ್ಯಾರ್ಥಿ ಮಂಜೇಶನ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಸದಾ ಓದಿನಲ್ಲಿ ಮುಂದಿದ್ದ ಮಂಜೇಶ ತಾನು ಬಿಡುವಿನ ವೇಳೆ ಸಂಸಾರ ನಿರ್ವ ಹಣೆಗಾಗಿ ಮಾಡುತ್ತಿದ್ದ ಕಡಲೇಕಾಯಿ ವ್ಯಾಪಾರದ ವಿಚಾರವನ್ನು ಫಲಿತಾಂಶ ಬಂದ ನಂತರ ತಿಳಿದು ಆಶ್ಚರ್ಯವಾಯಿತು. ಭವಿಷ್ಯದಲ್ಲಿ ಈತನ ಬದುಕು ಉಜ್ವಲವಾಗಲಿ ಎಂದು ಹಾರೈಸುತ್ತೇನೆಂದು ಪ್ರಾಚಾರ್ಯರಾದ ಕಪನಿಪಾಳ್ಯ ರಮೇಶ ತಿಳಿಸಿದ್ದಾರೆ.
● ಕೆ.ಎನ್.ಲೋಕೇಶ್