Advertisement

ಖರ್ಗೆ,ಸಿದ್ದು ಸಿಎಂ ಆಗಲ್ಲ: ಈಶ್ವರಪ್ಪ

09:40 AM Dec 05, 2019 | Team Udayavani |

ಶಿವಮೊಗ್ಗ:ಮತ್ತೆ ಸಮ್ಮಿಶ್ರ ಸರ್ಕಾರ ಬರುತ್ತೆ ಖರ್ಗೆ, ಸಿದ್ದರಾಮಯ್ಯ ಸಿಎಂ ಆಗ್ತಾರೆ ಎಂದು ಕಾಂಗ್ರೆಸ್‌ನವರು ತಿರುಕನ ಕನಸು ಕಾಣುತ್ತಿದ್ದಾರೆ. ಮೊದಲು ಈ ಕನಸು ಕಾಣೋದು ಬಿಡಿ. ಇದ್ಯಾವುದೂ ನನಸಾಗೊಲ್ಲ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಖರ್ಗೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲ್ಲ. ರಾಜ್ಯದ ಜನ ಬಿಜೆಪಿ ಪರ ಇದ್ದಾರೆ. ಹೀಗಾಗಿ ಸರ್ಕಾರಕ್ಕೆ ಪೂರ್ಣ ಬಹುಮತ ಕೊಡುತ್ತಾರೆಂಬ ವಿಶ್ವಾಸವಿದೆ. ಮತ್ತೆ ಆಪರೇಷನ್‌ ಕಮಲ ಆಗಲಿದೆ ಎಂಬ ದಿನೇಶ್‌ ಗುಂಡೂರಾವ್‌ಗೆ ನಾಚಿಕೆ ಆಗಬೇಕು. ಬಿಜೆಪಿಯ ಒಬ್ಬ ಶಾಸಕರನ್ನಾದರೂ ಮುಟ್ಟುವ ಪ್ರಯತ್ನ ಮಾಡಲಿ ನೋಡೋಣ. ಕಾಂಗ್ರೆಸ್‌ ಶಾಸಕರ ಬಗ್ಗೆ ನಿಮಗೆ ನಂಬಿಕೆ ಇಲ್ಲ ಅಂದ್ರೆ ಅವರಿಗೆ ಯಾಕೆ ಟಿಕೆಟ್‌ ಕೊಟ್ರಿ. ನಿಮ್ಮ ಶಕ್ತಿಹೀನತೆ, ನಿಮ್ಮ ದೌರ್ಬಲ್ಯ ನೀವು ಒಪ್ಪಿಕೊಳ್ಳುತ್ತಿದ್ದೀರಿ. ನಾವು ಯಾಕೆ ಬಿಜೆಪಿ ಜೊತೆ ಹೋಗಬಾರದು ಅಂತಾ ಆ ಶಾಸಕರೇ ಮನಸ್ಸು ಮಾಡುತ್ತಿದ್ದಾರೆ. ಇದು ಆಪರೇಷನ್‌ ಕಮಲನಾ? ಕರ್ನಾಟಕದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಕಾಲ ಮುಗಿದಿದೆ. ಯಾವ ರೀತಿ ದೇಶದಲ್ಲಿ ಬಿಜೆಪಿ ಇದೆಯೋ, ಅದೇ ರೀತಿ ರಾಜ್ಯದಲ್ಲಿ ಸಂಪೂರ್ಣ ಬಿಜೆಪಿ ಇರಲಿದೆ ಎಂದರು.

ರಾಣಿಬೆನ್ನೂರು ಕಾಂಗ್ರೆಸ್‌ ಅಭ್ಯರ್ಥಿ ಕೋಳಿವಾಡ ಮನೆ ಮೇಲೆ ಐಟಿ ದಾಳಿ ಪ್ರಕರಣ ಬಗ್ಗೆ ಗೊತ್ತಿಲ್ಲ. ಯಾರ ಮನೆ ಮೇಲೆ ರೇಡ್‌ ಆಯ್ತು, ಏನು ಮಾಡಿದ್ರು ಅಂತಾ ನಾನು ನೋಡ್ತಾ ಕುಳಿತಿರಕ್ಕಾಗಲ್ಲ. ಚುನಾವಣಾ ಪ್ರಚಾರ ಪೂರ್ಣಗೊಂಡಿದೆ.

ಮುಂದಿನ ಮೂರೂವರೆ ವರ್ಷ ರಾಜ್ಯದಲ್ಲಿ ಸ್ಥಿರ ಸರ್ಕಾರ ಇರಬೇಕೋ, ಬೇಡವಾ ಎಂಬುದನ್ನು ಈ ಉಪಚುನಾವಣೆಯಲ್ಲಿ ರಾಜ್ಯದ ಜನ ತೀರ್ಮಾನ ಮಾಡ್ತಾರೆ. ಬಿಜೆಪಿಗೆ 15 ಸ್ಥಾನ ಗೆಲ್ಲುವ ಅವಕಾಶ ಜಾಸ್ತಿ ಇದೆ. ಆದರೆ 8 ಸ್ಥಾನಕ್ಕಿಂತ ಕಡಿಮೆ ಆಗಲ್ಲ. ಕೆಲವು ಕಡೆ ಫಿಪ್ಟಿ-ಫಿಪ್ಟಿ ಇದೆ. ಆದರೆ ರಾಜ್ಯದ ಜನ ಪೂರ್ಣ ಬಹುಮತ ನೀಡುತ್ತಾರೆ. ಮುಂದಿನ ಮೂರೂವರೆ ವರ್ಷ ಯಡಿಯೂರಪ್ಪ ಸಿಎಂ ಆಗಿ ಇರಲಿದ್ದಾರೆ ಎಂದರು.

ಸೋಲು ಮರೆತಿದ್ದರಿಂದ
ಮತ್ತೆ ಕನಸು ಕಾಣಿ¤ದಾರೆ
ಡಿ.9ರ ನಂತರ ಮತ್ತೆ ಮೈತ್ರಿ ಸರ್ಕಾರ ಎಂಬ ವಿಷಯದ ಬಗ್ಗೆ ಮಾತನಾಡಿದ ಈಶ್ವರಪ್ಪ ಖರ್ಗೆ ಅವರು ಕಲಬುರಗಿಯಲ್ಲಿ ಸೋತಿದ್ದು ಮರೆತಿದ್ದಾರೆ. ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತಿದ್ದು ಮರೆತಿದ್ದಾರೆ. ನಿಖೀಲ್‌ ಕುಮಾರಸ್ವಾಮಿ ಸೋತಿದ್ದನ್ನು ಕುಮಾರಸ್ವಾಮಿ ಮರೆತಿದ್ದಾರೆ. ಇವರೆಲ್ಲರಿಗೂ ಅಧಿ ಕಾರದಲ್ಲಿ ಇದ್ದು ಇದ್ದು ಹೀಗೆ ಆಗಿದೆ. ಖರ್ಗೆ ಸಿಎಂ ಮಾಡೋದಕ್ಕೆ ಸಿದ್ದರಾಮಯ್ಯ ಅವರನ್ನು ಒಪ್ಪಿಸುತ್ತಿದ್ದಾರೆ ಅಂತಾ ಪತ್ರಿಕೆಯಲ್ಲಿ ನೋಡಿದೆ. ಮೊದಲು ಎಷ್ಟು ಕ್ಷೇತ್ರದಲ್ಲಿ ಡಿಪಾಸಿಟ್‌ ಉಳಿಸಿಕೊಳ್ಳುತ್ತೀರಾ ಅನ್ನುವುದನ್ನು ನೋಡಿ. ಆ ಮೇಲೆ ಲೆಕ್ಕಾಚಾರ ಮಾಡಿ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಮಾಡಿ ಒಂದೂವರೆ ವರ್ಷ ರಾಜ್ಯ ಹಾಳು ಮಾಡಿದ್ರಿ. ನಿಮ್ಮ ಶಾಸಕರೇ ಹೊರಗೆ ಬಂದ್ರು. ನಿಮ್ಮ ಸರ್ಕಾರ ಬಿಧ್ದೋಯ್ತು ಎಂದು ಈಶ್ವರಪ್ಪ ಲೇವಡಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next