Advertisement
ಜಿಲ್ಲಾ ಪತ್ರಕರ್ತರ ಸಂಘವು ಶನಿವಾರ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿ, ಕೊರೊನಾ 2ನೇ ಅಲೆ ಹೆಚ್ಚು ಬಾಧಿಸಿದ ಸಂದರ್ಭಲ್ಲಿ ಸರ್ಕಾರ ದಿಂದಲೇ 50 ವೆಂಟಿ ಲೇಟರ್‌ಗಳು ಜಿಲ್ಲೆಗೆ ಬಂದವು. ಜಿಲ್ಲಾಡ ಳತವು ಮುಖ್ಯವಾಗಿ ಔಷಧಿ ಹಾಗೂ ಕೊರೊನಾ ಕೇರ್ ಸೆಂಟರ್‌ಗಳ ನಿರ್ವಹಣೆ ಮಾಡಿತ್ತು. ಆಸ್ಪತ್ರೆ ಆಥವಾ ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಾದ ಕೊರೊನಾ ಸೋಂಕಿತರಿಗೆ ಉಪಹಾರ, ಊಟಕ್ಕೆ ದಿನಕ್ಕೆ 230 ರೂ. ವೆಚ್ಚ ಮಾಡಲಾಯಿತು ಎಂದರು.
Related Articles
Advertisement
520 ಜನರಿಗೆ ಲಕ್ಷ ರೂ. ಪರಿಹಾರ: ರಾಜ್ಯ ಸರ್ಕಾರ ಕೋವಿಡ್ ದಿಂದ ಮೃತಪಟ್ಟ ಬಿಪಿಎಲ್ ಕುಟುಂಬ ಗಳಿಗೆ 1 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದು, 2020 ಡೆಸೆಂಬರ್ ವರೆಗೆ ಮೃತಪಟ್ಟವರ ಮಾಹಿತಿ ಕೇಳಿದೆ. ಈ ಸಂಬಂಧ ಜಿಲ್ಲೆಯ 520 ಕುಟುಂಬಗಳ ವಿವರವನ್ನು ನಿಗದಿತ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳು ಕೋವಿಡ್ ಸೋಂಕಿತರಿಂದ ಹೆಚ್ಚು ಬಿಲ್ ವಸೂಲಿ ಮಾಡಿವೆ ಎಂಬ ಆರೋಪದ ಬಗ್ಗೆ ತನಿಖೆ ನಡೆದಿದ್ದು 160 ಪ್ರಕರಣಗಳಲ್ಲಿ 10 ರಿಂದ 12 ಲಕ್ಷ ರೂ. ಹೆಚ್ಚು ಬಿಲ್ ವಸೂಲಿ ಮಾಡಿದ್ದನ್ನು ಪತ್ತೆಹಚ್ಚಿ ಸಂಬಂಧಿಸಿದವರಿಗೆ ವಾಪಸ್ ಕೊಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ಭೂ ಪರಿಹಾರ ನೀಡಲು ಕ್ರಮ: ಎತ್ತಿನಹೊಳೆ ಯೋಜನೆ 30 ಕಿ.ಮೀ. ನಾಲೆ ನಿರ್ಮಾಣಕ್ಕೆ ಭೂ ಸ್ವಾಧೀನದ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. 15 ರಿಂದ 20 ಗ್ರಾಮಗಳ ಭೂ ಮಾಲೀಕರಿಗೆ ಪರಿಹಾರ ನೀಡಲು ಆದೇಶ ನೀಡಲಾಗಿದೆ. ಕೆಲವರು ಹೆಚ್ಚು ಪರಿಹಾರ ಕೋರಿ ನ್ಯಾಯಾಲಯಕ್ಕೆ ಹೋಗುವವರಿದ್ದರೆ ಅಂತಹವರಿಗೆ ಸಲ್ಲಿಸ ತಕ್ಕ ಪರಿಹಾರದ ಮೊತ್ತವನ್ನು ನ್ಯಾಯಾಲಯದಲ್ಲಿಯೇ ಠೇವಣಿ ಇರಿಸಿ ಭೂ ಸ್ವಾಧೀನಕ್ಕೆ ಕ್ರಮಕೈಗೊಳ್ಳಲು ಜಲಸಂಪನ್ಮೂಲ ಸಚಿವರು ಸೂಚನೆ ನೀಡಿದ್ದಾರೆ. ಆದರೆ ನ್ಯಾಯಾಲಯಕ್ಕೆ ಠೇವಣಿ ಇರಿಸಿದ್ದರೆ ಆ ಮೊತ್ತವನ್ನು ಭೂ ಮಾಲೀಕರು ಪಡೆದು ಕೊಳ್ಳವ ಪ್ರಕ್ರಿಯೆ ವಿಳಂಬವಾಗಲಿದೆ. ಹಾಗಾಗಿ ಮತೊಮ್ಮೆ ನೊಟೀಸ್ ನೀಡಿ ಭೂ ಮಾಲೀಕರಿಗೆ ಮನವರಿಕೆ ಮಾಡಿಕೊಟ್ಟು ಪರಿಹಾರ ಪಡೆದುಕೊಳ್ಳುವಂತೆ ಮನವಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಯವರು ಹೇಳಿದರು. ಎತ್ತಿನಹೊಳೆ ಪೈಪ್ ಲೈನ್ ಹಾಗೂ ವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣಕ್ಕೆ ಅರಣ್ಯ ಇಲಾಖೆಯವರಿಂದ ಅಡ್ಡಿಯಿದ್ದರೆ ಸಭೆ ನಡೆಸಿ ಅಡಚಣೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದೂ ಸ್ಪಷ್ಟಪಡಿಸಿದರು.
ಚತುಷ್ಪಥ ರಸ್ತೆಗೆ ನೆರವುಹಾಸನ- ಸಕಲೇಶಪುರ ನಡುವೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಮರಳು, ಜಲ್ಲಿ ಮತ್ತಿತರ ಸಾಮಗ್ರಿಗಳ ಪಡೆದುಕೊಳ್ಳಲು ಜಿಲ್ಲಾಡಳಿತ ದಿಂದ ಎಲ್ಲ ನೆರವು ನೀಡಲಾಗಿದೆ. ಆದರೆ ಗುತ್ತಿಗೆದಾರರು ಕಾಮಗಾರಿ ಯನ್ನು ಚುರುಕಾಗಿ ನಿರ್ವಹಿಸುತ್ತಿಲ್ಲ. ಸೇತುವೆಗಳ ನಿರ್ಮಾಣವನ್ನೂ ಇನ್ನೂ ಮಾಡಿಲ್ಲ. ಹಾಗೆಯೇ ಹಾಸನದ ರೈಲ್ವೆ ಮೇಲ್ಸೆತುವ ಕಾಮಗಾರಿಯೂ ವಿಳಂಬವಾಗಿದೆ. ರೈಲ್ವೆ ಇಲಾಖೆಯವರು ಸ್ಪಂದಿಸುತ್ತಿಲ್ಲ ಎಂಬ ದೂರಿದೆ. ವಿಧಾನಸಭಾ ಅಧಿವೇಶನ ಮುಗಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಹೇಳಿದರು. ಲಸಿಕೆ ಅಭಿಯಾನ : ಜಿಲ್ಲೆಯಲ್ಲಿ ಶೇ.115 ಸಾಧನೆ
ಹಾಸನ: ಜಿಲ್ಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೋವಿಡ್ ಬೃಹತ್ ಲಸಿಕಾ ಮೇಳದಲ್ಲಿ ಶೇ.115 ರಷ್ಟು ಸಾಧನೆಯಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಲಸಿಕೆ ನೀಡಿದ ಜಿಲ್ಲೆಗಳ ಪೈಕಿ ಹಾಸನ ಜಿಲ್ಲೆಯ 5ನೇ ಸ್ಥಾನ ಪಡೆದಿದೆ. ಜಿಲ್ಲೆಯಲ್ಲಿ 80, 000 ಮಂದಿಗೆ ಕೊರೊನಾ ಲಸಿಕೆ ಹಾಕುವ ಗುರಿಯಿತ್ತು. ಆದರೆ 92, 000 ಹೆಚ್ಚು ಮಂದಿಗೆ ಲಸಿಕೆ ನೀಡುವ ಮೂಲಕ ಶೇ.115 ರಷ್ಟು ಗುರಿ ಸಾಧನೆಯಾಗಿದೆ. ರಾತ್ರಿ 8 ಗಂಟೆವರೆಗೂ ಲಸಿಕೆ ಹಾಕುವ ಅಭಿಯಾನ ನಡೆಯಿತು ಎಂದು ಜಿಲ್ಲಾ ರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ತಿಳಿಸಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಶೇ.135 ಗುರಿ ಸಾಧನೆಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ನಂತರ ಶಿವಮೊಗ್ಗ, ರಾಮನಗರ, ಧಾರವಾಡದ ನಂತರ ಹಾಸನ ಜಿಲ್ಲೆ ಸ್ಥಾನ ಪಡೆದಿದೆ ಎಂದು ಹೇಳಿದರು.