Advertisement

ಬಾಗಲಕೋಟೆಯಲ್ಲಿ ಮೂರ್ತಿ ‌ಪ್ರತಿಷ್ಠಾಪನೆಗೆ ಬಂದ ನಿಜ ಆಂಜನೇಯ!

05:48 PM Jan 19, 2024 | Team Udayavani |

ಉದಯವಾಣಿ ಸಮಾಚಾರ
ಬಾಗಲಕೋಟೆ: ಇಲ್ಲಿನ ಮುಚಖಂಡಿ ಕ್ರಾಸ್‌ನ ಪಂಚಮುಖಿ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಗುರುವಾರ ನಡೆದ ಭವ್ಯ ಶೋಭಾಯಾತ್ರೆಯಲ್ಲಿ ಆಂಜನೇಯನ ವೇಷ ತೊಟ್ಟ ಕಲಾವಿದರು ಗಮನ ಸೆಳೆದರು. ನಗರದ ಕಿಲ್ಲಾದ ಕೊತ್ತಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯ ಬಳಿಕ ಶೋಭಾಯಾತ್ರೆ ಆರಂಭಗೊಂಡಿತು.

Advertisement

ಕೆರೂರಿನ ಚರಂತಿಮಠದ ಡಾ|ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಗದ್ದನಕೇರಿಯ ಮೌನೇಶ್ವರ ಪಿ. ಮಹಾಪುರುಷ ಸ್ವಾಮೀಜಿಗಳು ಶೋಭಾಯಾತ್ರೆಗೆ ಚಾಲನೆ ನೀಡಿದರು. ಕೊತ್ತಲೇಶ್ವರ ದೇವಾಲಯದಿಂದ ಆರಂಭಗೊಂಡ ಶೋಭಾಯಾತ್ರೆ, ನಗರದ ಪಂಕಾ ಮಸೀದಿ, ಪೊಲೀಸ್‌ ಗೇಟ್‌, ಎಂ.ಜಿ.ರಸ್ತೆ, ಬಸವೇಶ್ವರ ಸರ್ಕಲ್‌, ಕುಮಟಗಿ ಶೋರಂ, ವಾಸವಿ ಟಾಕೀಜ್‌, ಮಹಾವೀರ ರೋಡ, ಕೆರೂಡಿ ಆಸ್ಪತ್ರೆ ರಸ್ತೆ, ಕೆಂಪು ರಸ್ತೆ, ಮೂಲಕ ಹಾಯ್ದು ಮುಚಖಂಡಿ ಕ್ರಾಸ್‌ನ ಮಾರುತೇಶ್ವರ ದೇವಾಲಯಕ್ಕೆ ತಲುಪಿತು. ಮೆರವಣಿಗೆಯುದ್ದಕ್ಕೂ ಜೈ ಶ್ರೀರಾಮ, ಜೈ ಆಂಜನೇಯ ಘೋಷಣೆಗಳು ಮುಗಿಲು ಮುಟ್ಟಿದವು.

ಪ್ರಮುಖ ಬೀದಿಗಳಲ್ಲಿ ಕೇಸರಿಧ್ವಜ, ಸ್ವಾಗತ ಕಮಾನುಗಳು ರಾರಾಜಿಸಿದವು. ಮುಳುಗಡೆ ನಗರಿ ಬಾಗಲಕೋಟೆಯಲ್ಲಿ ಕಟೌಟ್‌, ಬ್ಯಾನರಗಳ ಹಬ್ಬದ ಕಳೆ ಸೃಷ್ಟಿಸಿದವು. ಮೆರವಣಿಗೆಯಲ್ಲಿ ಸಾವಿರಾರು ಮಹಿಳೆಯರು ಪೂರ್ಣ ಕುಂಭ ಹೊತ್ತು ಹೆಜ್ಜೆ ಹಾಕಿದರು. ಜಾಂಜ್‌ ಪತಾಕ್‌, ಡಿಜೆ, ಮದ್ದಳೆ, ಡೊಳ್ಳು ಕುಣಿತ ಆಕರ್ಷಿಸಿದವು.

ಆಂಜನೇಯನ ವೇಷಧಾರಿ ಕಲಾವಿದರು, ಮೆರವಣಿಗೆಗೆ ಹೊಸ ಕಳೆ ತಂದಿತು. ನಗರದ ಬಸವೇಶ್ವರ ವೃತ್ತಕ್ಕೆ ಮೆರವಣಿಗೆ ಸಮೀಪಿಸುತ್ತಿದ್ದಂತೆ ಜಯಘೋಷಗಳು ಪ್ರತಿಧ್ವನಿಸಿದವು. ಆಂಜನೇಯ ಭಕ್ತರು, ಪಟಾಕಿ ಸಿಡಿಸಿ ಭಕ್ತರು ಸಂಭ್ರಮಿಸಿದರು. ಬಾಲಕರು ರಾಮ, ಕೃಷ್ಣ, ಲಕ್ಷ್ಮಣ, ಸೀತಾದೇವಿ, ಹನುಮನ ವೇಷ ಧರಿಸಿದ ಮಕ್ಕಳು ಗಮನ ಸೆಳೆದರು.

ಬಸವೇಶ್ವರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಯುವ ಮುಖಂಡರಾದ ಮಲ್ಲಿಕಾರ್ಜುನ ಚರಂತಿಮಠ, ಸಂತೋಷ ಹೊಕ್ರಾಣಿ, ಜಿ.ಪಂ.ಮಾಜಿ ಅಧ್ಯಕ್ಷರಾದ ವೀಣಾ ಕಾಶಪ್ಪನವರ, ಬಾಯಕ್ಕ ಮೇಟಿ ಮುಂತಾದವರು ಭಗವಾಧ್ವಜ ಹಿಡಿದು ಡೊಳ್ಳು ವಾದನಕ್ಕೆ ಹೆಜ್ಜೆ ಹಾಕಿದರು.

Advertisement

ಮಾರುತೇಶ್ವರ ದೇವಸ್ಥಾನ ಸೇವಾ ಸಂಘದ ಅಧ್ಯಕ್ಷ ಬಸವರಾಜ ಕಟಗೇರಿ, ಮುಖಂಡರಾದ ಡಾ| ಶೇಖರ ಮಾನೆ, ವಿಜಯ ಸುಲಾಖೆ, ನಾಗರಾಜ ಹದ್ಲಿ, ಸಂಜೀವ ವಾಡಕರ್‌, ಗಣಪತಿಸಾ ದಾನಿ, ನಾರಾಯಣ ದೇಸಾಯಿ, ಶಿವು ಮೇಲಾ°ಡ, ರವಿ ಕುಟಮಗಿ, ಎಂ.ಆರ್‌.ಶಿಂಧೆ, ಅಶೋಕ ಮುತ್ತಿನಮಠ, ಅರುಣ ಲೋಕಾಪುರ, ಆನಂದ ಜಿಗಜಿನ್ನಿ, ಬಸವರಾಜ ಧರ್ಮಂತಿ, ಕಳಕಪ್ಪ ಬಾದೋಡಗಿ, ರಾಘವೇಂದ್ರ ನಾಗೂರ, ನರೇಂದ್ರ ಕುಪ್ಪಸ್ತ, ಗುರು ಅನಗವಾಡಿ, ಶರಣಪ್ಪ ಕೆರೂರ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next