Advertisement

55 ವರ್ಷಗಳ ಬಳಿಕ ಮರುಕಳಿಸಿದ ಪರಿಸ್ಥಿತಿ: ಈ ವರ್ಷದ ಗಣರಾಜ್ಯ ದಿನಕ್ಕೆ ಮುಖ್ಯ ಅತಿಥಿ ಇಲ್ಲ

09:27 PM Jan 07, 2021 | Team Udayavani |

ನವದೆಹಲಿ: ಐವತ್ತೈದು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ರಕ್ತ ವರ್ಷದ ಗಣರಾಜ್ಯ ದಿನಕ್ಕೆ ಮುಖ್ಯ ಅತಿಥಿ ಇಲ್ಲದೆ ಕಾರ್ಯಕ್ರಮ ನಡೆಯುವ ಸಾಧ್ಯತೆಗಳು ಅಧಿಕವಾಗಿವೆ. ಬ್ರಿಟನ್‌ನಲ್ಲಿ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮುಖ್ಯ ಅತಿಥಿಯಾಗಬೇಕಾಗಿದ್ದ ಅಲ್ಲಿನ ಪ್ರಧಾನಿ ಬೋರಿಸ್‌ ಜಾನ್ಸನ್‌ ಭಾರತ ಪ್ರವಾಸವನ್ನು ಮಂಗಳವಾರ ರದ್ದು ಮಾಡಿದ್ದರು. ಹೆಚ್ಚಿನ ಎಲ್ಲಾ ರಾಷ್ಟ್ರಗಳಲ್ಲಿಯೂ ಸೋಂಕಿನ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಅವರ ಬದಲು ಬೇರೆ ರಾಷ್ಟ್ರದ ಮುಖ್ಯಸ್ಥರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸದೇ ಇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು “ದ ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

Advertisement

1966ರಲ್ಲಿ ಮೊದಲ ಬಾರಿಗೆ ಇಂಥ ಪರಿಸ್ಥಿತಿ ಉದಯವವಾಗಿತ್ತು. ಪ್ರಧಾನಿಯಾಗಿದ್ದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಆ ವರ್ಷದ ಜ.11ರಂದು ತಾಷ್ಕೆಂ‌ನಲ್ಲಿ ನಿಧನರಾಗಿದ್ದರು. 1966ರ ಜ.24ರಂದು ಇಂದಿರಾ ಗಾಂಧಿ ನೇತೃತ್ವದ ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿತ್ತು. ಹೀಗಾಗಿ, ಆ ವರ್ಷ ಮುಖ್ಯ ಅತಿಥಿಗಳಿಲ್ಲದೇ ಕಾರ್ಯಕ್ರಮ ನಡೆಸಲಾಗಿತ್ತು.

ಕೊರೊನಾ ಹಿನ್ನೆಲೆಯಲ್ಲಿ ಆ.15ರಂದು ಸ್ವಾತಂತ್ರ್ಯ ದಿನದ ಕಾರ್ಯಕ್ರಮವನ್ನೂ ಸೀಮಿತ ಆಹ್ವಾನಿತರ ನಡುವೆ ನಡೆಸಲಾಗಿತ್ತು.

ವ್ಯೂಹಾತ್ಮಕ ಮತ್ತು ರಾಜತಾಂತ್ರಿಕ ವಿಚಾರಗಳ ಜತೆಗೆ ನಿಗದಿತ ರಾಷ್ಟ್ರಗಳ ಜತೆಗೆ ಹೊಂದಿರುವ ವಾಣಿಜ್ಯಿಕ ವಿಚಾರಗಳೂ ಒಂದು ರಾಷ್ಟ್ರದ ಮುಖ್ಯಸ್ಥರನ್ನು ಗಣರಾಜ್ಯ ದಿನದ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸುವ ವಿಚಾರದಲ್ಲಿ ಅಡಗಿರುತ್ತದೆ. 2019ರಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಆಹ್ವಾನಿಸಲು ಉದ್ದೇಶಿಸಲಾಗಿತ್ತಾದರೂ, ಅವರು ಆಗಮಿಸಲಿರಲಿಲ್ಲ. ನಂತರ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್‌ ರಾಮಫೋಸಾ ಅವರನ್ನು ಆಹ್ವಾನಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next