Advertisement
ಲಿಂಗಸುಗೂರು ತಾಲೂಕಿನ ತೊಂಡಿಹಾಳ ಗ್ರಾಮದ ಹೊರವಲಯದಲ್ಲಿ ನಂದವಾಡಗಿ ಏತ ನೀರಾವರಿ ಯೋಜನೆಗೆ ಗುರುವಾರಚಾಲನೆ ನೀಡಿ ಅವರು ಮಾತನಾಡಿದರು. ರೈತರ ಸಾಲಮನ್ನಾ ಮಾಡುವಂತೆ ಪ್ರಧಾನಿಗೆ ಮನವಿ ಮಾಡಿದ್ದೆ. ಆದರೆ, ನಿಯೋಗದಲ್ಲಿದ್ದ ಬಿಜೆಪಿಯ ಯಾವ ಮುಖಂಡರೂ ಈ ಕುರಿತು ಒತ್ತಾಯ ಮಾಡಲಿಲ್ಲ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ
ಸಾಲ ಮನ್ನಾ ಮಾಡುವುದಾದರೆ ಈಗಲೂ ನಾನು ಭೇಟಿಯಾಗಿ ಮನವಿ ಮಾಡಲು ಸಿದ್ಧ. ರೈತರ ವಿಚಾರದಲ್ಲಿ ನಾನು ಯಾರಿಗಾದರೂ ಕೈ ಮುಗಿಯುವೆ ಎಂದರು.
ಆರಂಭಿಸಿದ ಯೋಜನೆಗಳನ್ನು ಮುಗಿಸಿಯೇ ತೀರುತ್ತೇವೆ ಎಂದರು. ರಾಜ್ಯದ ರೈತರ ಅಲ್ಪಾವಧಿ ಸಾಲ 52 ಸಾವಿರ ಕೋಟಿ ರೂ.ನಷ್ಟಿತ್ತು. ನಾವು ಕೊಟ್ಟ ಮಾತಿನಂತೆ 8,165 ಕೋಟಿ ರೂ. ಮನ್ನಾ ಮಾಡಿದ್ದೇವೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ 42 ಸಾವಿರ ಕೋಟಿ ರೂ. ಮನ್ನಾ ಮಾಡುವಂತೆ ಪ್ರಧಾನಿಗೆ ಪತ್ರ ಬರೆದಿದ್ದೇನೆ ಎಂದರು. ನಮ್ಮ ಸರ್ಕಾರದ ಅವ ಧಿಯಲ್ಲಿ ಕೃಷ್ಣಾ ಮೇಲ್ದಂಡೆಯ ಎಲ್ಲ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ನಾಲ್ಕು ವರ್ಷಗಳಲ್ಲಿ ನೀರಾವರಿ ಯೋಜನೆಗಳಿಗೆ 40 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ. ಪ್ರಸಕ್ತ ವರ್ಷ 10ರಿಂದ 15 ಸಾವಿರ ಕೋಟಿ ರೂ. ಖರ್ಚು ಮಾಡುವ ಉದ್ದೇಶವಿದೆ. ನಾವು ಚುನಾವಣೆಗೆ ಬರುವ ಮುನ್ನ ನೀಡಿದ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದರು. ಅನ್ಯ ಸ್ಥಳದಲ್ಲಿಳಿದ ಸಿಎಂ ಕಾಪ್ಟರ್ ನಂದವಾಡಗಿ ಏತ ನೀರಾವರಿ ಯೋಜನೆ ಅಡಿಗಲ್ಲು ಸಮಾರಂಭಕ್ಕೆ ಸಿಎಂ ಸಿದ್ದರಾಮಯ್ಯ ಇದ್ದಂಥ ಹೆಲಿಕಾಪ್ಟರ್ ದಾರಿ ತಪ್ಪಿದ ಪ್ರಸಂಗ ನಡೆಯಿತು. ಕೊಪ್ಪಳದ ಗಿಣಿಗೇರಾದಿಂದ ತಾಲೂಕಿನ ಹಲಕಾವಟಿಗೆ ಗ್ರಾಮಕ್ಕೆ ಹೆಲಿಕಾಪ್ಟರ್ ಬರಬೇಕಿತ್ತು. ಆದರೆ, ಕಾಪ್ಟರ್ ಇಳಿಸಲು ಎರಡು ಕಡೆ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ಇದರಿಂದ ಸಂವಹನ ಕೊರತೆಯಿಂದ ಹಲಕಾವಟಿಗಿ ಬದಲಿಗೆ ಲಿಂಗಸುಗೂರು ಪಟ್ಟಣದಲ್ಲಿ ಇಳಿದಿದೆ. ಬಹುತೇಕ ಭದ್ರತಾ ಸಿಬ್ಬಂದಿ ಹಲಕಾವಟಗಿಯಲ್ಲಿದ್ದ ಕಾರಣ ಕೆಲಕಾಲ ಗೊಂದಲವಾಗಿತ್ತು. ಬಳಿಕ ಪುನಃ ಟೇಕ್‌ಆಫ್ ಮಾಡಿ ಹಲಕಾವಟಗಿಗೆ ಕರೆ ತರಲಾಯಿತು. ಹೀಗಾಗಿ, ನಿಗದಿಗಿಂತ ಅರ್ಧ ಗಂಟೆ ತಡವಾಗಿ ಕಾರ್ಯಕ್ರಮ ಶುರುವಾಯಿತು. ಲಿಂಗಸುಗೂರಿನಲ್ಲಿ ಕಾಂಗ್ರೆಸ್ ಸಮಾವೇಶ
ಆಯೋಜಿಸಿದ್ದರಿಂದ ಹಲಕಾವಟಿಗಿಯಿಂದ ರಸ್ತೆ ಮೂಲಕ ತೆರಳಬೇಕಿದ್ದು, ಅಲ್ಲಿಂದಲೇ ನಿರ್ಗಮಿಸಲು ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ಪೈಲಟ್‌ಗೆ ಮಾಹಿತಿ ಇಲ್ಲದಿರುವುದು ಘಟನೆಗೆ ಕಾರಣ ಎನ್ನಲಾಗುತ್ತಿದೆ. ಪೊಲೀಸ್ ಇಲಾಖೆ ವೈಫಲ್ಯ ಕಂಡುಬಂದಿತು. ಮಳೆಗಾಗಿ ನಿತ್ಯ ಪ್ರಾರ್ಥಿಸುವೆ ಯೋಜನೆಗೆ ಚಾಲನೆ ನೀಡಿದ ಕೆಲ ಹೊತ್ತಿಗೆ ಮಳೆ ಬಂತು. ಇಂಥ ಕಾರ್ಯಕ್ರಮದಲ್ಲಿ ಮಳೆ ಬಂದಿರುವುದು
ಶುಭ ಸೂಚಕ. ಈ ವರ್ಷ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ. ನಾನು ಮಳೆಗಾಗಿ ನಿತ್ಯ ಪ್ರಾರ್ಥಿಸುತ್ತಿದ್ದೇನೆ. ಮಳೆ ಇಲ್ಲದ ಕಾರಣ ರಾಜ್ಯದ ಜಲಾಶಯಗಳು ಖಾಲಿಯಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ಮಳೆಯಾಗಿಲ್ಲ. ಮುಂದಿನ ದಿನಗಳಲ್ಲಿ
ಮಳೆ ಬರಲಿ ಎಂದು ಪ್ರಾರ್ಥಿಸೋಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
Related Articles
Advertisement
ಸ್ಥಳೀಯ ಪತ್ರಿಕೆಗಳಿಗೆ ಜಾಹೀರಾತು ಹಂಚಿಕೆ ವಿಚಾರದಲ್ಲಿ ಸರ್ಕಾರ ಕೈಗೊಂಡ ನಿರ್ಧಾರ ಖಂಡಿಸಿ ಸ್ಥಳೀಯ ಪತ್ರಿಕೆಗಳ ಸಂಪಾದಕರು ಮುಖಕ್ಕೆ ಬಿಳಿ ಬಟ್ಟೆ ಧರಿಸಿ, ಖಾಲಿ ಸಂಪಾದಕೀಯ ಪುಟ ಪ್ರದರ್ಶಿಸಿ ಪ್ರತಿಭಟಿಸಿದರು. ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿದ್ದಂತೆ ಎದ್ದು ನಿಂತ ಸಂಪಾದಕರು, ಪ್ರತಿಭಟನೆಗೆ ಮುಂದಾದರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನೆಕೈಬಿಡುವಂತೆ ಮನವೊಲಿಸಿದರು. ನಂದವಾಡಗಿ ಏತ ನೀರಾವರಿಗೆ ಚಾಲನೆ
ಲಿಂಗಸುಗೂರು: ತಾಲೂಕಿನ ತೊಂಡಿಹಾಳ ಗ್ರಾಮದ ಹೊರವಲಯದದಲ್ಲಿ ಬಹುನಿರೀಕ್ಷಿತ ನಂದವಾಡಗಿ ಏತ ನೀರಾವರಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಗುರುವಾರ ಚಾಲನೆ ನೀಡಿದರು. ಜಿಲ್ಲೆಯ ಲಿಂಗಸುಗೂರು, ಮಾನ್ವಿ, ಮಸ್ಕಿ ಭಾಗ ಹಾಗೂ ಹುನಗುಂದ ತಾಲೂಕು ಸೇರಿ 102 ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ 1,530 ಕೋಟಿ ರೂ. ವೆಚ್ಚದ ಮಹತ್ವದ ಯೋಜನೆ ಇದಾಗಿದೆ. ಯೋಜನೆಯಿಂದ 89 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ. 207 ಕೋಟಿ ವೆಚ್ಚದ ಜಾಕ್‌ವೆಲ್ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಯೋಜನೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಂದವಾಡಗಿ ಯೋಜನೆ ಈ ಭಾಗದ ಬಹುದಿನಗಳ ಬೇಡಿಕೆಯಾಗಿತ್ತು. 2014ರಲ್ಲಿ ಈ ಯೋಜನೆ ಅನುಷ್ಠಾನದ ಬಗ್ಗೆ ಪ್ರಕಟಿಸಿದ್ದೆ. ಈಗ ಬೇಡಿಕೆ ಈಡೇರಿಸಿದ್ದೇವೆ. ನೀರಿನ ಲಭ್ಯತೆ ಇದ್ದಲ್ಲಿ ಎಲ್ಲಿಯೇ ಆದರೂ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ನೀರಾವರಿ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗೆ ಇಂದು ನಮ್ಮ ಸರ್ಕಾರ
ಚಾಲನೆ ನೀಡಿದೆ. ಆರಂಭದಲ್ಲಿ 6.2 ಟಿಎಂಸಿ ಅಡಿ ನೀರಿನ ಬೇಡಿಕೆಯಿತ್ತು. ಈಗ 3.75 ಟಿಎಂಸಿ ಅಡಿ ನೀರು ಒದಗಿಸಿದ್ದೇವೆ. ಆದರೆ, ಹೆಚ್ಚುವರಿ ನೀರು ಒದಗಿಸಲು ಬೇಕಾದ ಸಾಮರ್ಥ್ಯದ ಆಧಾರದಡಿ ಯೋಜನೆ ಅನುಷ್ಠಾನಗೊಳಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ನೀರು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಸಂಸದರಾದ ಸಂಗಣ್ಣ ಕರಡಿ, ಬಿ.ವಿ.ನಾಯಕ, ಲಿಂಗಸುಗೂರು ಶಾಸಕರಾದ ಮಾನಪ್ಪ ವಜ್ಜಲ್, ವಿಜಯಾನಂದ ಕಾಶಪ್ಪನವರ, ರಾಘವೇಂದ್ರ ಹಿಟ್ನಾಳ್ ಉಪಸ್ಥಿತರಿದ್ದರು.