Advertisement

ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ-6

11:49 AM Jan 05, 2019 | |

ಮುಂದುವರಿದುದು– ಮಧುಮೇಹದೊಂದಿಗೆ ಜೀವಿಸುವವರು ಕಣ್ಣನ ತೊಂದರೆಯನ್ನು ತಡೆಗಟ್ಟಲು ಅಥವಾ ಹಾನಿ ಕಡಿಮೆಗೊಳಿಸಲು ಯಾವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು?

Advertisement

ರಕ್ತದಲ್ಲಿನ ಗ್ಲುಕೋಸ್ ಅಂಶವನ್ನು ನಿಯಂತ್ರಣದಲ್ಲಿರಿಸಿಕೊಳ್ಳುವುದು ಕಣ್ಣಿನ ರಕ್ಷಣೆಗೆ ಅತ್ಯಗತ್ಯ. ಹಾಗೆ ಎಲ್ಲಾ ಮಧುಮೇಹಿಗಳು ಕನಿಷ್ಟ ವರ್ಷಕ್ಕೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ. ಇನ್ನು ಕಣ್ಣಿನ ವೈದ್ಯರು ಸೂಚಿಸಿದಂತೆ ಪರೀಕ್ಷೆ ಮಾಡಿಸಿಕೊಳ್ಳಲೇ ಬೇಕು. ನೇತ್ರ ತಜ್ಞರಲ್ಲಿ  ಹೋದರೆ ಕಣ್ಣಿನ ಪರೀಕೆಗೆ ದಿನವಿಡೀ ಬೇಕು ಹಾಗೂ ಆ ದಿನ ಓದಲು, ಮೊಬೈಲ್‌ ನೋಡಲು ಇತ್ಯಾದಿ ತೊಂದರೆಗಳಾಗುತ್ತವೆಂದು ಆಲಸ್ಯ ಮಾಡಿದರೆ ಶಾಶ್ವತ  ಅಂಧತ್ವ ಬರುವ ಸಾಧ್ಯತೆಗಳಿವೆ.

“ಕಣ್ಣಿನ ತೊಂದರೆಗಳ ಶೀಘ್ರ ಪತ್ತೆ ಹಾಗೂ ಚಿಕಿತ್ಸೆ ಅಂಧತ್ವ ತಡೆಗಟ್ಟುವ ದೂರದೃಷ್ಟಿ”ಮೂತ್ರಪಿಂಡದ ಹಾನಿಯನ್ನು ಪತ್ತೆ ಹಚ್ಚುವುದು ಹೇಗೆ?
ರಕ್ತದೊತ್ತಡದ ಪರೀಕ್ಷೆ, ಮೂತ್ರದಲ್ಲಿನ ಪ್ರೊಟೀನ್‌ ಪರೀಕ್ಷೆ, ಮೂತ್ರದಲ್ಲಿ ಮೈಕ್ರೋ ಅಲುºಮಿನ್‌ ಪರೀಕ್ಷೆ ಮಾಡಿ  ಪತ್ತೆ ಹಚ್ಚಲಾಗುವುದು, ಇದರೊಂದಿಗೆ ರಕ್ತದಲ್ಲಿನ ಹಾಗೂ ಕ್ರಿಯಾಟಿನಿನ್‌ ಪರೀಕ್ಷೆಯನ್ನೂ ಮಾಡಲಾಗುವುದು. ಸಾಮಾನ್ಯವಾಗಿ ಇದೇ ಹಂತದಲ್ಲಿ ಕಣ್ಣಿನ ತೊಂದರೆಯೂ ಕಂಡು ಬರುವುದರಿಂದ ಕಣ್ಣಿನ ಪರೀಕ್ಷೆಯನ್ನೂ ಮಾಡಲಾಗುತ್ತದೆ.

ಮೂತ್ರಪಿಂಡದ ಹಾನಿಗೆ ಚಿಕಿತ್ಸೆಯೇನು?
ಮೂತ್ರ ಪಿಂಡದ ಹಾನಿ ಶೀಘ್ರವಾಗಿ ಪತ್ತೆ ಹಚ್ಚಿದಲ್ಲಿ  ಸುಲಭವಾದ ಸೂಕ್ತ ಚಿಕಿತ್ಸೆ ಲಭ್ಯ. ಪತ್ತೆಹಚ್ಚುವುದು ನಿಧಾನವಾದಲ್ಲಿ ಚಿಕಿತ್ಸೆ ಸ್ವಲ್ಪ ಸಂಕೀರ್ಣವಾಗುವುದು. ಕೆಳಗಿನ ಕೆಲವೊಂದು ಅಂಶಗಳು ಚಿಕಿತ್ಸೆಯ ತಿರುಳು:
ಪಥ್ಯಾಹಾರ: ಪಥ್ಯಾಹಾರ ತಜ್ಞರ ಸಲಹೆಯಂತೆ ಕಡಿಮೆ ಉಪ್ಪು, ನೀರು ಮತ್ತು ಪ್ರೊಟೀನ್‌ (ತರಕಾರಿ ಪ್ರೊಟೀನ್‌ ಹೆಚ್ಚು ಸೂಕ್ತ) ಸೇವನೆ. ಹಣ್ಣುಗಳ ಸೇವನೆಯಲ್ಲೂ ಪಥ್ಯಾಹಾರ ತಜ್ಞರ ಸಲಹೆಯನ್ನು  ಚಾಚೂ ತಪ್ಪದೆ ಪಾಲಿಸುವುದು.

– ರಕ್ತದೊತ್ತಡದ ನಿಯಂತ್ರಣ
– ಔಷಧ ಬದ್ಧತೆ
: ರಕ್ತದೊತ್ತಡದ ನಿಯಂತ್ರಣಕ್ಕೆ   ಗುಳಿಗೆಗಳು ಹಾಗೂ ಮಧುಮೇಹ ಇತ್ಯಾದಿ ತೊಂದರೆಗಳ ಇತರ ಗುಳಿಗೆಗಳು/ಚುಚ್ಚುಮದ್ದುಗಳನ್ನು ನಿಯಮಿತವಾಗಿ ತೆಗೆದುಕೊಳ್ಳುವುದು. ಇದು ಮೂತ್ರಪಿಂಡದ ಮುಂದಿನ ಹಾನಿಯನ್ನು ತಗ್ಗಿಸುತ್ತದೆ.
ರಕ್ತದೊತ್ತಡ ಹಾಗೂ ಮಧುಮೇಹದ ನಿಯಂತ್ರಣ: ರಕ್ತದೊತ್ತಡದ ನಿಯಂತ್ರಣಕ್ಕೆ ಗುಳಿಗೆಗಳು ಹಾಗೂ ಮಧುಮೇಹ ಇತ್ಯಾದಿ ತೊಂದರೆಗಳಿಗೆ ಇತರ ಗುಳಿಗೆಗಳು/ಚುಚ್ಚುಮದ್ದುಗಳನ್ನು ನಿಯಮಿತವಾಗಿ ತೆಗೆದುಕೊಳ್ಳುವುದು ಮತ್ತು ಔಷಧ ಬದ್ಧತೆಯಿಂದ ಮೂತ್ರಪಿಂಡದ ಮುಂದಿನ ಹಾನಿಯನ್ನು ತಗ್ಗಿಸಬಹುದು.
– ಮೂತ್ರಪಿಂಡದ ಹಾನಿ ತೀವ್ರವಾಗಿದ್ದಲ್ಲಿ  ಡಟಾಲಿಸಿಸ್‌  ಅಥವಾ ಮೂತ್ರಪಿಂಡದ ಕಸಿ ಮಾಡಲಾಗುವುದು.
ಮೂತ್ರಪಿಂಡದ ಹಾನಿ ತಗ್ಗಿಸಿಕೊಳ್ಳಲು ಮಧುಮೇಹದೊಂದಿಗೆ ಜೀವಿಸುವವರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೇನು?

Advertisement

ಮಧುಮೇಹದೊಂದಿಗೆ ಜೀವಿಸುವವರಲ್ಲಿ ಸುಮಾರು 20ರಿಂದ 25 ಶೇಕಡದಷ್ಟು ಜನ ಮೂತ್ರಪಿಂಡದ ಹಾನಿಯಿಂದ ಬಳಲುತ್ತಾರೆ. ಮೂತ್ರಪಿಂಡದ ಹಾನಿಯಿಂದಾಗಬಹುದಾದ ಸಂಭಾವ್ಯ ದೈಹಿಕ ನೋವು, ಸಾಮಾಜಿಕ, ಮಾನಸಿಕ ನರಳಾಟ ಮತ್ತು ಆರ್ಥಿಕ ಸಂಕಷ್ಟವನ್ನು ತಡೆಗಟ್ಟಲು ಈ ಕೆಳಗಿನ ಕೆಲವೊಂದು ಮುಂಜಾಗ್ರತೆಗಳು ಮೂತ್ರಪಿಂಡದ ಹಾನಿಯನ್ನು ತಡೆಗಟ್ಟಲು ಅಥವಾ ಮುಂದೂಡಲು ಅವಶ್ಯ.
– ರಕ್ತದಲ್ಲಿ  ಗ್ಲೂಕೋಸ್‌ ಅಂಶವನ್ನು ನಿಯಂತ್ರಣದಲ್ಲಿರಿಸುವುದು.
– ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುವುದು.
– ಧೂಮಪಾನಿಗಳಾಗಿದ್ದಲ್ಲಿ ಸಂಪೂರ್ಣವಾಗಿ ಧೂಮಪಾನವನ್ನು ನಿಲ್ಲಿಸುವುದು.
– ವೈದ್ಯರು ಶಿಫಾರಸ್ಸು ಮಾಡಿದ ಎಲ್ಲಾ ಔಷಧಗಳ ಬದ್ಧತೆ.
– ಮಧುಮೇಹಿಗಳು ಖಡ್ಡಾಯವಾಗಿ ವರ್ಷಕ್ಕೊಮ್ಮೆ ಮೂತ್ರದಲ್ಲಿ ಪ್ರೊಟೀನ್‌ ಅಂಶವನ್ನು ಪತ್ತೆ ಹಚ್ಚಲು ಮೂತ್ರ ಪರೀಕ್ಷೆ.
– ತಜ್ಞ ವೈದ್ಯರು ಶಿಫಾರಸ್ಸು ಮಾಡಿದ ಎಲ್ಲಾ ಪರೀಕ್ಷೆಗಳನ್ನು ಮಾಡಿಸುವುದು.

ಮಧುಮೇಹದಿಂದ ಬಾಧಿತರಾದವರಿಗೆ ಮೂತ್ರಪಿಂಡದ 
ತೊಂದರೆಗಳು ಸಾಮಾನ್ಯ. ಮೂತ್ರಪಿಂಡದ ಹಾನಿ ಎಂದರೇನು?

ಸಾಮಾನ್ಯವಾಗಿ ಮೂತ್ರಪಿಂಡ ರಕ್ತವನ್ನು ಶುದ್ಧೀಕರಿಸಿ ರಕ್ತದೊತ್ತಡ, ಮೂಳೆಯ ಆರೋಗ್ಯ ಮತ್ತು  ಹೊಸ ಕೆಂಪುರಕ್ತ ಕಣಗಳನ್ನು ಉತ್ಪಾದಿಸಲು ಅತ್ಯವಶ್ಯ. ಪ್ರತಿದಿನ ಸುಮಾರು 150 ಲೀಟರ್‌ಗಳಷ್ಟು ರಕ್ತವನ್ನು ಶುದ್ಧೀಕರಿಸಿ ಅರ್ಧದಿಂದ ಎರಡು ಲೀಟರ್‌ಗಳಷ್ಟು ಮೂತ್ರವನ್ನು ವಿಸರ್ಜಿಸಲು ಸಹಕರಿಸುತ್ತದೆ. ಸಾಮಾನ್ಯವಾಗಿ ಮೂತ್ರಪಿಂಡಗಳು ರಕ್ತವನ್ನು ಶುದ್ಧೀಕರಿಸಿರುವುದರ ಜೊತೆಗೆ ರಕ್ತದೊತ್ತಡ, ಮೂಳೆಯ ಆರೋಗ್ಯ ಮತ್ತು ಹೊಸ ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತವೆ. ಪ್ರತಿದಿನ ಸುಮಾರು 150 ಲೀಟರ್‌ಗಳಷ್ಟು ರಕ್ತವನ್ನು ಶುದಿಧàಕರಿಸಿ 800ರಿಂದ 2000 ಮಿಲಿಗಳಷ್ಟು ಮೂತ್ರವನ್ನು ವಿಸರ್ಜಿಸಲು ಸಹಕರಿಸುತ್ತದೆ.

ಮಧುಮೇಹ ಇರುವವರಲ್ಲಿ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಅಧಿಕವಾಗಿ ಕಾಲಕ್ರಮೇಣವಾಗಿ ಸಣ್ಣ ರಕ್ತನಾಳಗಳ ಮೇಲೆ ಪರಿಣಾಮ ಬೀರಿ ಮೂತ್ರಪಿಂಡದ ಹಾನಿಯನ್ನುಂಟುಮಾಡುತ್ತದೆ. ಇದು ಮೂತ್ರಪಿಂಡದ ಕಾರ್ಯದ ಮೇಲೆ ಪ್ರಭಾವ ಬೀರಿ ರಕ್ತದ ಶುದ್ಧೀಕರಣದಲ್ಲಿ ವ್ಯತ್ಯಯವನ್ನುಂಟು ಮಾಡುತ್ತದೆ.

ಮೂತ್ರಪಿಂಡದ ಹಾನಿಯ ಲಕ್ಷಣಗಳೇನು?
ಪ್ರಾರಂಭಿಕವಾಗಿ ಮೂತ್ರಪಿಂಡದ ಹಾನಿ ಸಂಭವಿಸಿದಾಗ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ ಆದರೆ ಈ ಕೆಳಗಿನ ಕೆಲವೊಂದು ಅಂಶಗಳು ಸೂಕ್ಷ್ಮ ಸೂಚನೆಗಳಾಗಿರುತ್ತವೆ.

– ಮೂತ್ರದಲ್ಲಿ ಪ್ರೊಟೀನ್‌ ಅಂಶ ಕಂಡುಬರುವುದು.
– ಹೆಚ್ಚಿನ ರಕ್ತದೊತ್ತಡ
– ಉತ್ಸಾಹ ಇಲ್ಲದಿರುವುದು ಹಾಗೂ ಸುಸ್ತು
– ಬೆನ್ನು ನೋವು
– ನಿದ್ರೆಯಲ್ಲಿ ವ್ಯತ್ಯಾಸ
– ಪಾದ, ಮೊಣಕಾಲುಗಳಲ್ಲಿ  ಊತ
– ಕಾಲಿನ ಸೆಳೆತ
– ಪದೇ ಪದೆ ಮೂತ್ರ ವಿಸರ್ಜನೆ
– ವಾಕರಿಕೆ ಮತ್ತು ವಾಂತಿ
ಮಧುಮೇಹದೊಂದಿಗೆ ಜೀವಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಪ್ರತಿ ವರ್ಷಕ್ಕೊಮ್ಮೆ  ಮೂತ್ರದಲ್ಲಿನ ಪ್ರೋಟೀನ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹಾಗೆಯೇ ವಿಶೇಷವಾಗಿ ತಜ್ಞ ವೈದ್ಯರು ಸೂಚಿಸಿದಂತೆ ಇತರ ಪರೀಕ್ಷೆಗಳನ್ನು ಮಾಡಿಸುವುದರಿಂದ ಮೂತ್ರಪಿಂಡದ ಹಾನಿಯ ಶೀಘ್ರ ಪತ್ತೆ ಸಾಧ್ಯ. ಮೂತ್ರಪಿಂಡದ ಹಾನಿಯನ್ನು ಪತ್ತೆ ಹಚ್ಚದೆ ಚಿಕಿತ್ಸೆಗೊಳಗಾಗದಿದ್ದಲ್ಲಿ ಮೂತ್ರದಲ್ಲಿ ಪ್ರೋಟೀನ್‌ ಅಂಶ ಹರಿದು ಹೋಗಿ ದೇಹದಲ್ಲಿ  ನೀರಿನ ಅಂಶ ಅಧಿಕವಾಗಿ ನಿಧಾನವಾಗಿ ಮೂತ್ರಪಿಂಡದ ವೈಫ‌ಲ್ಯವಾಗುವ  ಸಾಧ್ಯತೆಗಳಿರುತ್ತದೆ.ನಿಧಾನವಾಗಿ ಮೂತ್ರಪಿಂಡದ ವೈಫ‌ಲ್ಯವಾಗುವ ಸಾಧ್ಯತೆಗಳಿರುತ್ತವೆ.

ಮೂತ್ರಪಿಂಡದ ಹಾನಿಗೆ ಪ್ರಮುಖವಾದ ಅಪಾಯಕಾರಿ ಅಂಶಗಳು ಮತ್ತು ಕಾರಣಗಳಾವುವು?
ಮಧುಮೇಹ ಪ್ರಥಮ ಏಕೈಕ ಅಪಾಯಕಾರಿ ಅಂಶ ಇದರೊಂದಿಗೆ ರಕ್ತದೊತ್ತಡ ಧೂಮಪಾನ, ವೈದ್ಯರ ಶಿಫಾರಸ್ಸು ಇಲ್ಲದೆ ಗುಳಿಗೆಗಳನ್ನು ತೆಗೆದುಕೊಳ್ಳುವುದು ಇತ್ಯಾದಿ ಪ್ರಮುಖವಾದ ಇತರ ಕಾರಣಗಳು ಮತ್ತು ಅಪಾಯಕಾರಿ ಅಂಶಗಳು.

ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ 
ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: 
ಡಾ| ಶಶಿಕಿರಣ್‌  ಉಮಾಕಾಂತ್‌, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಮೆಡಿಸಿನ್‌ ವಿಭಾಗ, ಡಾ| ಟಿ.ಎಂ.ಎ. ಪೈ ಆಸ್ಪತ್ರೆ ಉಡುಪಿ.
ಚಿತ್ರ : ರವಿ ಆಚಾರ್ಯ, ಬ್ರಹ್ಮಾವರ

Advertisement

Udayavani is now on Telegram. Click here to join our channel and stay updated with the latest news.

Next