Advertisement

ಉತ್ತಮ ಸ್ಥಳೀಯ ಕಚೇರಿಗಳಿಗೆ, ಸಾಧಕರಿಗೆ ವಾರ್ಷಿಕ ಪುರಸ್ಕಾರ ಪ್ರದಾನ

12:15 PM Sep 13, 2021 | Team Udayavani |

ಮುಂಬಯಿ, ಸೆ. 12: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ 88ನೇ ಮತ್ತು 89ನೇ ವಾರ್ಷಿಕ ಮಹಾಸಭೆ ಸೆ. 12ರಂದು ಬೆಳಗ್ಗೆ ಸಾಂತಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಅಧ್ಯಕ್ಷ ಹರೀಶ್‌ ಜಿ. ಅಮೀನ್‌ ಅಧ್ಯಕ್ಷತೆಯಲ್ಲಿ ಜರಗಿತು.

Advertisement

2019-2020ರ ಕಾಲಾವಧಿಯ ಮಹಾಸಭೆಯನ್ನು ಸರಕಾರದ ಕೊರೊನಾ ನಿಯಮಗಳ ಪ್ರಕಾರ ನಡೆಸಲಾಗದ ಕಾರಣ ಈ ವರ್ಷ 2019-2020 ಹಾಗೂ 2020-2021ನೇ ಸಾಲಿನ ಮಹಾಸಭೆ ಯನ್ನು ನಡೆಸಲಾಯಿತು. ವಿಧಿತಾ ಆನಂದ್‌ ಪೂಜಾರಿ ಅವರ ಪ್ರಾರ್ಥನೆಯೊಂದಿಗೆ ಮಹಾಸಭೆ ಪ್ರಾರಂಭಗೊಂಡಿತು. ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ್‌ ಎಸ್‌. ಕೋಟ್ಯಾನ್‌ ಸ್ವಾಗತಿಸಿದರು. ಗತ ವಾರ್ಷಿಕ ಮಹಾಸಭೆಯ ವರದಿ ಯನ್ನು ಗೌರವ ಜತೆ ಕಾರ್ಯದರ್ಶಿ
ಹರೀಶ್‌ ಜಿ. ಸಾಲ್ಯಾನ್‌ ವಾಚಿಸಿದರು.

ವರದಿಯನ್ನು ಸರ್ವಾನು ಮತದಿಂದ ಮಂಜೂರು ಮಾಡಲಾಯಿತು. 2020-21ನೇ ಸಾಲಿನ ಲೆಕ್ಕಪರಿಶೋಧಕರ ನ್ನಾಗಿ ಅಶ್ವಜಿತ್‌ ಹೆಜ್ಮಾಡಿ ಅವರನ್ನು ನೇಮಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಚಂದ್ರಶೇಖರ್‌ ಎಸ್‌. ಪೂಜಾರಿ ಅವರನ್ನು ಬಿಲ್ಲವ ಅಸೋಸಿಯೇಶನ್‌ ಅಧ್ಯಕ್ಷ ಹರೀಶ್‌ ಜಿ. ಅಮೀನ್‌ ಅವರು ಪುಷ್ಪಗುಚ್ಛ ನೀಡಿ ಗೌರವಿಸಿದರು. ಅಧ್ಯಕ್ಷ ಹರೀಶ್‌ ಜಿ. ಅಮೀನ್‌ ಅವರನ್ನು ಚಂದ್ರಶೇಖರ್‌ ಪೂಜಾರಿ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಮಾಜಿ
ಅಧ್ಯಕ್ಷರು, ಭಾರತ್‌ ಬ್ಯಾಂಕ್‌ನ ನಿರ್ದೇಶಕ ಮಂಡಳಿಯ ಸದಸ್ಯರು, ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ್‌ ಕೋಟ್ಯಾನ್‌ ಉಪಸ್ಥಿತರಿದ್ದರು.

ಉಪಾಧ್ಯಕ್ಷರಾದ ಶಂಕರ್‌ ಡಿ. ಪೂಜಾರಿ, ದಯಾನಂದ ಆರ್‌. ಪೂಜಾರಿ, ಶ್ರೀನಿವಾಸ್‌ ಆರ್‌. ಕರ್ಕೇರ, ಜತೆ ಕಾರ್ಯದರ್ಶಿ ಕೇಶವ ಕೆ. ಕೋಟ್ಯಾನ್‌, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್‌ ಜೆ. ಬಂಗೇರ, ಜತೆ ಕೋಶಾಧಿಕಾರಿ ಶಿವರಾಮ್‌ ಎಸ್‌. ಪೂಜಾರಿ, ಸದಾಶಿವ ಎ. ಕರ್ಕೇರ, ಮೋಹನ್‌ ಡಿ. ಪೂಜಾರಿ, ಜಯ ಎಸ್‌. ಸುವರ್ಣ. ಸೇವಾ ದಳಪತಿ ಗಣೇಶ್‌ ಕೆ. ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ವಿ. ಉಳ್ಳಾಲ್‌, ಸಮಿತಿ ಸದಸ್ಯರು, ಸ್ಥಳೀಯ ಸಮಿತಿಗಳಕಾರ್ಯಾಧ್ಯಕ್ಷರು, ವಿಶೇಷ ಆಮಂತ್ರಿತರು ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ಧರ್ಮೇಶ್‌ ಎಸ್‌. ಸಾಲ್ಯಾನ್‌ ವಂದಿಸಿದರು.

ಪುರಸ್ಕಾರ ಪ್ರದಾನ
ಕಳೆದ ವರ್ಷದ ಉತ್ತಮ ಕಾರ್ಯಕರ್ತರಿಗೆ ನೀಡುವ ಪುರಸ್ಕಾರವನ್ನು ಬಿಲ್ಲವರ ಅಸೋಸಿಯೇಶನ್‌ನ ಜತೆ ಕಾರ್ಯದರ್ಶಿ ಹರೀಶ್‌ ಜಿ. ಸಾಲ್ಯಾನ್‌ ಅವರಿಗೆ ನೀಡಿ ಗೌರವಿಸಲಾಯಿತು. ಉತ್ತಮವಾಗಿ ಕಾರ್ಯ ನಿರ್ವಹಿಸಿದ ಸ್ಥಳೀಯ ಪ್ರಾದೇಶಿಕ ಕಚೇರಿಗಳಿಗೆ ಪ್ರದಾನ ಮಾಡುವ ಗೌರವ ಪುರಸ್ಕಾರದಲ್ಲಿ ಬೊರಿವಲಿ ಸ್ಥಳೀಯ ಕಚೇರಿ ಪ್ರಥಮ, ಮೀರಾರೋಡ್‌ ಸ್ಥಳೀಯ ಕಚೇರಿ ದ್ವಿತೀಯ, ವಸಾಯಿ ಸ್ಥಳೀಯ ಕಚೇರಿ ತೃತೀಯ ಬಹುಮಾನ ಗಳಿಸಿದರೆ, ಭಿವಂಡಿ ಸ್ಥಳೀಯ ಕಚೇರಿ ಸಮಾಧಾನಕರ ಬಹುಮಾನ ಪಡೆದುಕೊಂಡಿತು.

Advertisement

ಚಿತ್ರ-ವರದಿ: ಸುಭಾಷ್‌ ಶಿರಿಯ

Advertisement

Udayavani is now on Telegram. Click here to join our channel and stay updated with the latest news.

Next