Advertisement

ನಿಷೇಧ ಮುಕ್ತರೆಲ್ಲ ಆ್ಯಶಸ್‌ ಸರಣಿಗೆ

11:01 PM Jul 26, 2019 | Sriram |

ಮೆಲ್ಬರ್ನ್: ಬಾಲ್‌ ಟ್ಯಾಂಪರಿಂಗ್‌ ಪ್ರಕರಣದಿಂದ ನಿಷೇಧ ಮುಕ್ತರಾದ ಸ್ಟೀವನ್‌ ಸ್ಮಿತ್‌, ಡೇವಿಡ್‌ ವಾರ್ನರ್‌ ಮತ್ತು ಕ್ಯಾಮರೂನ್‌ ಬಾನ್‌ಕ್ರಾಫ್ಟ್ ಅವರೆಲ್ಲ ಆ್ಯಶಸ್‌ ಸರಣಿಗಾಗಿ ಆಸ್ಟ್ರೇಲಿಯ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ವಿಕೆಟ್‌ ಕೀಪರ್‌ ಟಿಮ್‌ ಪೇನ್‌ ತಂಡದ ನಾಯಕರಾಗಿದ್ದಾರೆ.

Advertisement

ಸರಣಿಯ ಮೊದಲ ಟೆಸ್ಟ್‌ ಆ. ಒಂದರಿಂದ ಎಜ್‌ಬಾಸ್ಟನ್‌ನಲ್ಲಿ ಆರಂಭವಾಗಲಿದೆ. ಇಂಗ್ಲೆಂಡ್‌ನ‌ಲ್ಲಿ 2001ರ ಬಳಿಕ ಆ್ಯಶಸ್‌ ಗೆಲ್ಲುವುದು ಆಸ್ಟ್ರೇಲಿಯದ ಗುರಿ. ಸದ್ಯ ಆ್ಯಶಸ್‌ ಟ್ರೋಫಿ ಆಸ್ಟ್ರೇಲಿಯ ಬಳಿ ಇದೆ.

ಆಸ್ಟ್ರೇಲಿಯ ತಂಡ:
ಟಿಮ್‌ ಪೇನ್‌ (ನಾಯಕ), ಡೇವಿಡ್‌ ವಾರ್ನರ್‌, ಕ್ಯಾಮರೂನ್‌ ಬಾನ್‌ಕ್ರಾಫ್ಟ್, ಮಾರ್ಕಸ್‌ ಹ್ಯಾರಿಸ್‌, ಉಸ್ಮಾನ್‌ ಖ್ವಾಜಾ, ಸ್ಟೀವನ್‌ ಸ್ಮಿತ್‌, ಟ್ರ್ಯಾವಿಸ್‌ ಹೆಡ್‌, ಮಿಚೆಲ್‌ ಮಾರ್ಷ್‌, ಮ್ಯಾಥ್ಯೂ ವೇಡ್‌, ಪ್ಯಾಟ್ರಿಕ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಜೋಶ್‌ ಹ್ಯಾಝಲ್‌ವುಡ್‌, ಮಾರ್ನಸ್‌ ಲಬುಶೇನ್‌, ನಥನ್‌ ಲಿಯೋನ್‌, ಮೈಕಲ್‌ ನೆಸರ್‌, ಜೇಮ್ಸ್‌ ಪ್ಯಾಟಿನ್ಸನ್‌, ಪೀಟರ್‌ ಸಿಡ್ಲ್.

Advertisement

Udayavani is now on Telegram. Click here to join our channel and stay updated with the latest news.

Next