Advertisement

ಸುಂದರವಾದ ಭ್ರಕುಟಿಗಾಗಿ…

06:00 AM Sep 21, 2018 | |

ಅಯ್ಯೋ, ಆ ಪಾರ್ಲರ್‌ನೊಳು ನನ್ನ ದಪ್ಪ ಹುಬ್ಬನ್ನು ಕಿತ್ತು ಸಣ್ಣಗೆರೆ ಥರಾ ಮಾಡಿದ್ದಾಳೆ’ ಅನ್ನೋದು ಹುಡುಗಿಯರ ಸಾಮಾನ್ಯ ಗೋಳಾಟ. ಹುಬ್ಬಿನ ಒಂದೆರಡು ಕೂದಲು ಆಚೀಚೆ ಆದರೂ ಮನಸ್ಸಿಗೆ ಕಸಿವಿಸಿ ಆಗುತ್ತೆ. ಇನ್ನು ಕೆಲವರಿಗೆ ಹುಬ್ಬಿನಲ್ಲಿ  ದಟ್ಟ ಕೂದಲೇ ಇರುವುದಿಲ್ಲ. ದಿನಾ ಪೆನ್ಸಿಲ್‌ನಿಂದ ಹುಬ್ಬು ತೀಡುವ ಕೆಲಸ ಜೊತೆಯಾಗಿರುತ್ತದೆ. ಅಂಥವರಿಗೆ ಹುಬ್ಬಿನ ಕೂದಲನ್ನು ದಟ್ಟವಾಗಿಸಲು ಇಲ್ಲಿ ಕೆಲವು ಸಲಹೆಗಳಿವೆ.

Advertisement

ಆಲಿವ್‌ ಆಯಿಲ್‌
ಆಲಿವ್‌ ಎಣ್ಣೆಯಲ್ಲಿ “ಎ’ ಮತ್ತು “ಇ’ ವಿಟಮಿನ್‌ ಹೇರಳವಾಗಿದ್ದು , ಅದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಒಂದೆರಡು ಹನಿ ಎಣ್ಣೆಯನ್ನು ತೆಗೆದುಕೊಂಡು, ನಿಧಾನವಾಗಿ ಹುಬ್ಬಿಗೆ ಮಸಾಜ್‌ ಮಾಡಿದರೆ, ಹುಬ್ಬು ದಟ್ಟವಾಗಿ, ಕಪ್ಪಾಗಿ ಕಂಗೊಳಿಸುತ್ತದೆ.

ಕೊಬ್ಬರಿ ಎಣ್ಣೆ
ಕೊಬ್ಬರಿ ಎಣ್ಣೆಯನ್ನು ತಲೆಗೂದಲಿಗೆ, ಮುಖದ ಚರ್ಮಕ್ಕೆ ಹಚ್ಚುವುದು ಗೊತ್ತೇ ಇದೆ. ಹುಬ್ಬಿಗೆ ಕೊಬ್ಬರಿ ಎಣ್ಣೆ ಹಚ್ಚುವುದರಿಂದ ಚರ್ಮ ತೇವಗೊಂಡು ಕೂದಲಿನ ಬೆಳವಣಿಗೆ ಹೆಚ್ಚುತ್ತದೆ. ಪ್ರತಿ ರಾತ್ರಿ ಹುಬ್ಬಿಗೆ ಎಣ್ಣೆ ಹಚ್ಚಿ ಬೆಳಗ್ಗೆ ಎದ್ದು ಮುಖ ತೊಳೆಯಿರಿ.

ಹರಳೆಣ್ಣೆ
ಜಿಡ್ಡು ಜಿಡ್ಡಾಗಿ ಕಮಟು ವಾಸನೆ ಬರುವ ಹರಳೆಣ್ಣೆಯಿಂದ ದೂರ ಓಡುವವರೇ ಹೆಚ್ಚು. ಆದರೆ, ಈ ಹರಳೆಣ್ಣೆ ಕೂದಲನ್ನು ಕಪ್ಪಾಗಿಸುವುದಷ್ಟೇ ಅಲ್ಲ, ಸದೃಢವನ್ನಾಗಿಸುತ್ತದೆ. ಪ್ರೊಟೀನ್‌ ಅಂಶ ಅಧಿಕವಾಗಿರುವ ಹರಳೆಣ್ಣೆ ಹಚ್ಚಿದರೆ ಹುಬ್ಬಿನ ಕೂದಲು ಮಿರಮಿರ ಮಿಂಚುತ್ತದೆ.

ಬಾದಾಮಿ ಎಣ್ಣೆ
ಈ ಎಣ್ಣೆ ಚರ್ಮವನ್ನು ಮೃದುವಾಗಿಸುವುದರ ಜೊತೆಗೆ, ಉದುರಿದ ಕೂದಲು ಮರುಹುಟ್ಟು ಪಡೆಯಲು ಸಹಾಯ ಮಾಡುತ್ತದೆ. ಹುಬ್ಬಿಗೆ ಬಾದಾಮಿ ಎಣ್ಣೆಯ ಮಸಾಜ್‌ ಮಾಡಿ, 2-3 ಗಂಟೆ ಬಿಟ್ಟು ಮುಖ ತೊಳೆಯಿರಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next