Advertisement

ಮಗುವಿಗೊಂದು ಮರ-ಶಾಲೆಗೊಂದು ವನ

07:05 AM May 29, 2018 | |

ಬೆಂಗಳೂರು: ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಮಗುವಿಗೊಂದು ಮರ- ಶಾಲೆಗೊಂದು ವನ ವಿಶೇಷ ಕಾರ್ಯಕ್ರಮ ಅನುಷ್ಠಾನಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

Advertisement

ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 2018-19ನೇ ಸಾಲಿನ ಶೈಕ್ಷಣಿಕ ವರ್ಷದ ವಿಶ್ವ ಪರಿಸರ ದಿನಾಚರಣೆಯಿಂದಲೇ(ಜೂನ್‌ 5) ಮಗುವಿಗೊಂದು ಮರ- ಶಾಲೆಗೊಂದು ವನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. 

ಆಗಸ್ಟ್‌ ಕೊನೆಯವರೆಗೂ ಪ್ರತಿ ವಿದ್ಯಾರ್ಥಿ ಅಥವಾ ವಿದ್ಯಾರ್ಥಿ ತಂಡದಿಂದ ಭವಿಷ್ಯಕ್ಕೆ ಉಪಯುಕ್ತವಾಗುವ ನೆರಳು ಹಾಗೂ ಫ‌ಲ ನೀಡುವ ಗಿಡವನ್ನು ನೆಟ್ಟು ಪೋಷಿಸಲು ಬೇಕಾದ ಕ್ರಮ ತೆಗೆದುಕೊಳ್ಳಲು ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ.

ಶಾಲಾವರಣದಲ್ಲಿ ಹೂವಿನ ಗಿಡ, ಅಲಂಕಾರಿಕ ಗಿಡ ಅಥವಾ ಔಷಧ ಗಿಡವನ್ನು ನೆಟ್ಟು ಶಾಲೆಯ ಸೊಬಗನ್ನು ಹೆಚ್ಚಿಸಬಹುದು. ಮೈದಾನ ಹೊರತುಪಡಿಸಿ, ಶಾಲೆಗೆ ಸೇರಿದ ನಿರುಪಯುಕ್ತ ಭೂಮಿಯಲ್ಲಿ ತೆಂಗು, ಮಾವು, ಹಲಸು, ನೇರಳೆ, ಸೀಬೆ, ದಾಳಿಂಬೆ, ಬೇವು, ಅರಳಿ, ಹೊಂಗೆ, ಸಂಪಿಗೆ, ಅಶೋಕ ಮೊದಲಾದ ಸಸಿಗಳನ್ನು ಸಮೀಪದ ಅರಣ್ಯ ಇಲಾಖೆಯಿಂದ ಪಡೆದು, ನೆಡುವುದು. ಶಾಲೆಗಳಲ್ಲಿ ಅಗತ್ಯ ಭೂಮಿ ಇದ್ದರೆ ಶಾಲಾ ಕೈತೋಟ ನಿರ್ಮಿಸಿ, ಅದರ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸಲು ಶಾಲಾ ಮುಖ್ಯಶಿಕ್ಷಕರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳಿಗೆ  ಇಲಾಖೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next