Advertisement
ಬರುತ್ತಿದೆ. ಇನ್ನು ಕೆಲವೆಡೆ ಫುಟ್‌ಪಾತ್ ಅಪಾಯವನ್ನು ಆಹ್ವಾನಿಸುತ್ತಿದ್ದು, ಸ್ಥಳೀಯಾಡಳಿತ ಇತ್ತ ಗಮನಹರಿಸಬೇಕಿದೆ.
Related Articles
Advertisement
ಫುಟ್‌ಪಾತ್ ಬಳಿ ಪೈಪ್ ರಾಶಿ
ನಗರದ ವಿವಿಧ ಭಾಗಗಳಲ್ಲಿ ಫುಟ್‌ಪಾತ್ ಬದಿಯಲ್ಲಿ ಗ್ಯಾಸ್ ಸರಬರಾಜು ಕಾಮಗಾರಿ ಉದ್ದೇಶದಿಂದ ಗೈಲ್ ಸಂಸ್ಥೆಯು ಬೃಹತ್ ಪೈಪ್‌ಗ್ಳನ್ನು ರಾಶಿ ಹಾಕಿದೆ. ಈ ಕುರಿತಂತೆ ಈಗಾಗಲೇ ಪಾಲಿಕೆ ಆ ಸಂಸ್ಥೆಗೆ ಎಚ್ಚರಿಕೆ ನೀಡಿದರೂ ಕ್ಯಾರೇ ಎನ್ನುತ್ತಿಲ್ಲ. ಪಾಲಿಕೆಯ ಎದುರು ಲಾಲ್‌ಬಾಗ್‌ನಿಂದ ಬಿಜೈವರೆಗೆ ಇತ್ತೀಚೆಗೆಯಷ್ಟೇ ವ್ಯವಸ್ಥಿತ ಫುಟ್‌ಪಾತ್ ಕಾಮಗಾರಿ ನಡೆದಿತ್ತು.
ರಸ್ತೆ ವಿಸ್ತರಣೆ ಜತೆಗೆ ಫುಟ್‌ಪಾತ್‌ಗೆ ಇಂಟರ್‌ಲಾಕ್ ಅಳವಡಿಸಲಾಗಿತ್ತು. ಆದರೆ ಫುಟ್‌ಪಾತ್ ಬದಿಯಲ್ಲಿ ಸದ್ಯ ಪೈಪ್‌ಗ್ಳನ್ನು ರಾಶಿ ಹಾಕಲಾಗಿದೆ. ಸೂಚನ ಫಲಕ ಕೂಡ ಫುಟ್‌ಪಾತ್ ಮೇಲೇ ಇದೆ. ಇದರಿಂದಾಗಿ ಸಾರ್ವಜನಿಕರು ನಡೆದುಕೊಂಡು ಹೋಗಲು ಪರದಾಡುವಂತಾಗಿದೆ. ಅದೇರೀತಿ, ನಗರದ ಎಂ.ಜಿ. ರಸ್ತೆಯಲ್ಲಿಯೂ ಪೈಪ್‌ಗ್ಳು ರಾಶಿ ಬಿದ್ದಿವೆ.
ಟೈಗರ್ ಕಾರ್ಯಾಚರಣೆಗೆ ಹೆದರಲ್ಲ :
ಫುಟ್‌ಪಾತ್‌ಗಳಲ್ಲಿ ಅನಧಿಕೃತವಾಗಿ ಅಂಗಡಿ, ತಳ್ಳುಗಾಡಿ ಇಟ್ಟು ವ್ಯಾಪಾರ ಮಾಡುವವರ ವಿರುದ್ಧ ಪಾಲಿಕೆ ಟೈಗರ್ ಕಾರ್ಯಾಚರಣೆ ನಡೆಸುತ್ತಿದೆ. ಈ ಹಿಂದೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅನೇಕ ಬಾರಿ ಈ ವಿಚಾರ ಚರ್ಚೆ ನಡೆಸಿ ಟೈಗರ್ ಕಾರ್ಯಾಚರಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ತೀರ್ಮಾನಿಸ ಲಾಗಿತ್ತು. ಆದರೆ ನಗರದ ಕೆಲವು ಪ್ರದೇಶದ ರಸ್ತೆ ಬದಿಗಳಲ್ಲಿ ಮಾತ್ರ ಪಾಲಿಕೆಯು ಕಾರ್ಯಾಚರಣೆ ನಡೆಸುತ್ತಿದೆ ಎಂಬ ಆಕ್ಷೇಪ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ. ಕೆಲವು ಕಡೆಗಳಲ್ಲಿ ಪಾಲಿಕೆ ಟೈಗರ್ ಕಾರ್ಯಾಚರಣೆ ನಡೆಸಿದರೂ ಮರುದಿನ ಅದೇ ಜಾಗದಲ್ಲಿ ಅನಧಿಕೃತ ವ್ಯಾಪಾರ ಸಾಗುತ್ತಿದೆ.
ಗೈಲ್ ಸಂಸ್ಥೆಯು ಗ್ಯಾಸ್ ಪೈಪ್‌ಲೈನ್ ಕಾಮಗಾರಿಗೆಂದು ಮಂಗಳೂರಿನ ಕೆಲವು ಕಡೆಗಳಲ್ಲಿ ರಸ್ತೆ ಬದಿ, ಫುಟ್‌ಪಾತ್ ಬದಿಗಳಲ್ಲಿ ಪೈಪ್‌ಗ್ಳನ್ನು ರಾಶಿ ಹಾಕಿರುವುದು ಗಮನಕ್ಕೆ ಬಂದಿದೆ. ಈ ವಿಷಯಕ್ಕೆ ಸಂಬಂಧಿಸಿ ಸಂಬಂಧಪಟ್ಟ ಇಲಾಖೆಗೆ ಈಗಾಗಲೇ ಸೂಚನೆ ನೀಡಿದ್ದೇವೆ. ಆದರೂ ಆ ಸಂಸ್ಥೆ ಪೈಪ್‌ಗ್ಳನ್ನು ತೆಗೆದಿಲ್ಲ. ಇದೀಗ ಮತ್ತೂಮ್ಮೆ ಅವರಿಗೆ ಎಚ್ಚರಿಕೆ ನೀಡಲಾಗುವುದು. -ಪ್ರೇಮಾನಂದ ಶೆಟ್ಟಿ,ಮನಪಾ ಮೇಯರ್