Advertisement
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಧ್ಯೆ ಬರುವ ಸುಳ್ಯ ಮುಖ್ಯರಸ್ತೆ ಬದಿಯ ಪಾದಾಚಾರಿ ರಸ್ತೆಯಲ್ಲಿನ ಗುಂಡಿಗಳಿಂದ ಜನರು ವಾಹನ ಸಂಚರಿಸುವಲ್ಲೇ ನಡೆಯುವಂತಾಗಿದೆ. ಬೇರೆ ಸ್ಥಳವಿಲ್ಲದ ಕಾರಣ ವಾಹನಗಳ ಪಾರ್ಕಿಂಗ್ ಕೂಡ ಫುಟ್‌ಪಾತ್ ಮೇಲೆಯೇ ಮಾಡುತ್ತಿದ್ದು ಸಾರ್ವಜನಿಕರು ಎಲ್ಲಿ ಓಡಾಡಬೇಕು ಎಂಬ ಪ್ರಶ್ನೆ ಉದ್ಭವವಾಗಿದೆ. ಸುಳ್ಯ ಜ್ಯೋತಿ ವೃತ್ತದಿಂದ ಸರಕಾರಿ ಆಸ್ಪತ್ರೆ ಬಳಿವರೆಗೆ 2 ಕಡೆ, ಶ್ರೀರಾಂ ಪೇಟೆಯಿಂದ ಖಾಸಗಿ ಬಸ್ ನಿಲ್ದಾಣದವರೆಗೆ 2 ಕಡೆ ಹಾಗೂ ಪೊಲೀಸ್ ಠಾಣೆಯ ಬಳಿಯಿಂದ ಗಾಂಧಿ ನಗರದವರೆಗೆ ಅವ್ಯವಸ್ಥಿತ ಫುಟ್ ಪಾತ್ ಕಾಣ ಸಿಗುತ್ತದೆ. ಪಾದಾಚಾರಿಗಳು ಇಲ್ಲಿ ಸರ್ಕಸ್ ಮಾಡುತ್ತಾ ನಡೆದಾಡುವುದು ಅನಿವಾರ್ಯವಾಗಿದೆ. ಪ್ರವಾಸಿ ವಾಹನ ನಿಲ್ದಾಣದ ಮುಂಭಾಗದಲ್ಲಿ 20 ಮೀಟರ್ ದೂರ ಫುಟ್‌ಪಾತ್ ಇಲ್ಲ.
Related Articles
ರಾ.ಹೆ.ಸುಪರ್ದಿಯಲ್ಲಿ ಸದ್ಯ ಈ ರಸ್ತೆಯಿದ್ದು, ಇಲ್ಲಿನ ನೋವು ಅರ್ಥವಾದಂತಿಲ್ಲ. ಪರಿವಾರ ಕಾನದಿಂದ ಪೈಚಾರು ವರೆಗಿನ ರಸ್ತೆಯನ್ನು ಸ್ಥಳೀಯ ಆಡಳಿತಕ್ಕೆ ವಹಿಸಿದರೆ ಈ ಅವ್ಯವಸ್ಥೆಯನ್ನು ಸರಿ ಮಾಡಬಹುದು ಎನ್ನುವ ಮಾತು ಕೇಳಿ ಬಂದಿದೆ. ಜವಾಬ್ದಾರಿಯನ್ನು ನ.ಪಂ.ಗೆ ನೀಡಿದರೆ ವ್ಯವಸ್ಥೆ ಸರಿಪಡಿಸುವುದಲ್ಲೆ ಬ್ಯಾನರ್, ಜಾಹಿರಾತುಗಳ ಅಳವಡಿಕೆಗೆ ಅವಕಾಶ ಮಾಡಿಕೊಟ್ಟು ಆದಾಯವನ್ನೂ ಕಂಡುಕೊಳ್ಳಹುದಾಗಿದೆ. ಖಾಸಗಿಯವರು ಫುಟ್‌ಪಾತ್‌ಗೆ ಬೇಕಾದ ಸ್ಥಳ ಬಿಟ್ಟುಕೊಡಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
Advertisement
ಮನವಿ ಮಾಡಿದ್ದೇವೆ.ಫುಟ್‌ಪಾತ್ ಸರಿ ಮಾಡಲು ಯಾವುದೇ ಅನುದಾನಗಳಿಲ್ಲ. ಮುಖ್ಯ ರಸ್ತೆ ಯನ್ನು ನ.ಪಂ. ವ್ಯಾಪ್ತಿಗೆ ಬಿಟ್ಟು ಕೊಟ್ಟರೆ ನಾವು ಅಭಿವೃದ್ಧಿ ಮಾಡಬಹುದು. ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದ್ದೇವೆ.
-ವಿನಯ್ ಕುಮಾರ್ ಕಂದಡ್ಕ, ನ.ಪಂ. ಅಧ್ಯಕ್ಷರು – ಸುದೀಪ್ ರಾಜ್ ಕೋಟೆಮೂಲೆ