Advertisement
ಆಸ್ಪತ್ರೆ, ಶಿಕ್ಷಣ ಸಂಸ್ಥೆ ಎದುರೇ ಅಪಾಯ!ನಗರದ ಕೆಲವೊಂದು ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳ ಎದುರೇ ಫುಟ್‌ಪಾತ್‌ಗಳು ಬಾಯ್ದೆರೆದು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಮುಖ್ಯವಾಗಿ ಬೆಂದೂರ್‌ವೆಲ್‌ನಿಂದ ಬಲ್ಮಠ ಕಡೆಗೆ ಬರುವ ಮಂಗಳೂರು ನರ್ಸಿಂಗ್ ಹೋಂ ಎದುರು ಮತ್ತು ಎ.ಜೆ. ಟವರ್ ಬಳಿ, ಮೇರಿಹಿಲ್, ಬಂದರು, ಕೊಡಿಯಾಲಬೈಲು ಸಹಿತ ಹಲವು ಕಡೆಗಳಲ್ಲಿ ಫುಟ್‌ಪಾತ್‌ನಲ್ಲಿ ಗುಂಡಿ ಬಿದ್ದು ಅಪಾಯ ಸೂಚಿಸುವಂತಿದೆ.
ನಗರದ ಬಹುತೇಕ ಫುಟ್‌ಪಾತ್‌ಗಳು ಅಲ್ಲಲ್ಲಿ ಗುಂಡಿಯಾಗಿದ್ದು, ಸಾರ್ವಜನಿಕರಿಗೆ ನಡೆಯಲು ಕಷ್ಟದ ಪರಿಸ್ಥಿತಿ ಇದೆ. ಫುಟ್‌ಪಾತ್‌ಗೆ
ಅಳವಡಿಸಿದ ಸ್ಲಾಬ್ ಮುರಿದು ಹೋಗಿದ್ದು, ಪಾದಚಾರಿಗಳಿಗೆ ಅಪಾಯ ಎದುರಾಗಿದೆ. ಇದೇ ಕಾರಣಕ್ಕೆ ಸಾರ್ವಜನಿಕರು ಫುಟ್‌ಪಾತ್ ಬಿಟ್ಟು ರಸ್ತೆಯಲ್ಲಿ ನಡೆಯುವುದು ಕಂಡುಬರುತ್ತಿದೆ. ಕೆಲವು ಕಡೆ ಅರ್ಧ ಭಾಗದವರೆಗೆ ಮಾತ್ರ ಫುಟ್‌ಪಾತ್ ಕೆಲಸ ಆಗಿದ್ದು, ಕಾಮಗಾರಿ ಉದ್ದೇಶಕ್ಕೆ ಫುಟ್‌ಪಾತ್ ಅನ್ನು ಅಗೆಯಲಾಗಿದೆ. ವಿಸ್ತರಣೆಯಾಗಬೇಕಿದೆ ಫುಟ್‌ಪಾತ್
ನಗರದ ಕೆಲವೊಂದು ಕಡೆಗಳಲ್ಲಿ ಫುಟ್‌ಪಾತ್ ಕೆಲಸ ಅರ್ಧಂಬರ್ಧ ಸಾಗಿದೆ. ಪಂಪ್‌ವೆಲ್‌ನಿಂದ ಕಂಕನಾಡಿಗೆ ಬರುವಾಗ ರಸ್ತೆಯ ಅರ್ಧ ಭಾಗದವರೆಗೆ ಫುಟ್‌ಪಾತ್ ಇದೆ. ಆದರೆ ಬಳಿಕ ಫುಟ್‌ಪಾತ್ ಮಾಯವಾಗಿದೆ. ಈ ಪ್ರದೇಶದಲ್ಲಿ ಹುಲ್ಲು, ಗಿಡ-ಗಂಟಿ ಬೆಳೆದಿದ್ದು, ಪಾದಚಾರಿಗಳಿಗೆ ಫುಟ್‌ಪಾತ್ ಕಾಣದೆ ರಸ್ತೆ ಮೇಲೆ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಈ ರಸ್ತೆಯಲ್ಲಿ ಸದಾ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ವಾಹನಗಳೂ ಅತ್ತಿಂದಿತ್ತ ಸಂಚರಿಸುತ್ತಿರುತ್ತದೆ.