ಜೊತೆಗೆ ವಿದೇಶದಲ್ಲಿ ಉಚಿತ ಶಿಕ್ಷಣ ನೀಡುತ್ತಾ, ಜರ್ಮನಿಯ ಬಿಟ್‌ಬರ್ಗ್‌ನಲ್ಲಿ ಮಕ್ಕಳಿಗೆ ಭವಿಷ್ಯ ಕಟ್ಟಿಕೊಳ್ಳುವ ಸುವರ್ಣಾವಕಾಶವನ್ನು ಯು ಮುಂಬಾ ನೀಡಿದೆ. ಇದರೊಂದಿಗೆ ಇತರೆ ಫ್ರಾಂಚೈಸಿಗಳಿಗೆ ಮಾದರಿಯಾಗಿದೆ.
Advertisement
ಕನಸುಗಳ ಸಾಕಾರಕ್ಕಾಗಿ ಯು ಡ್ರೀಮ್: ಯು ಮುಂಬಾ ಫ್ರಾಂಚೈಸಿ ರೋನಿ ಸ್ಕಿವ್‌ವಾಲಾ ಯು ಡ್ರೀಮ್ ಸಂಸ್ಥೆ ಹುಟ್ಟು ಹಾಕಿದ್ದು ವೃತ್ತಿಪರ ಫುಟ್‌ಬಾಲ್ ಆಟಗಾರರನ್ನು ಹೊರ ತರುವ ಭಾರೀ ಸಂಕಲ್ಪ ಮಾಡಿದ್ದಾರೆ, ಇದಕ್ಕೆ ಟಾಟಾ ಟ್ರಸ್ಟ್ ಸಂಸ್ಥೆ ಸಾಥ್ ನೀಡುತ್ತಿದೆ.
ಡಾರ್ಟ್‌ಮಂಡ್ ಜರ್ಮನಿಯ ಖ್ಯಾತ ಫುಟ್‌ಬಾಲ್ ಕ್ಲಬ್ ತಂಡ. ಇಲ್ಲಿನ ಆಟಗಾರರೊಂದಿಗೆ ಕಲಿಯುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಆದರೆ ನಮ್ಮ ದೇಶದ ಪ್ರತಿಭಾನ್ವಿತರಿಗೆ ಇಂತಹದೊಂದು ಅವಕಾಶವನ್ನು ಯು ಡ್ರೀಮ್ಸ್ ಮಾಡಿಕೊಟ್ಟಿದೆ. 2015ರಲ್ಲಿ 45 ನಗರದಲ್ಲಿ ಪ್ರತಿಭಾನ್ವೇಷಣೆ: 15 ವರ್ಷ ವಯೋಮಿತಿಯೊಳಗಿನ ಭಾರತ ಫುಟ್‌ಬಾಲ್ ಪ್ರತಿಭೆಗಳನ್ನು ಯು ಡ್ರೀಮ್ ಮೊದಲ ಬಾರಿಗೆ ಹುಡುಕಲು ಆರಂಭಿಸಿದ್ದು 2015ರಲ್ಲಿ. ಮೊದಲ ಪ್ರಯತ್ನವಾಗಿ ದೇಶದ 46 ನಗರದ ಶಾಲೆಗಳಲ್ಲಿ ಫುಟ್ಬಾಲಿಗರನ್ನು ಅನ್ವೇಷಿಸಲಾಯಿತು. ಜರ್ಮನಿಯ ಖ್ಯಾತ ಕ್ಲಬ್ ತಂಡದ ಕೋಚ್‌ಗಳು ಹುಡುಕಾಟದಲ್ಲಿ ಪಾಲ್ಗೊಂಡರು. ಮೊದಲ ಸಲ 20ಕ್ಕೂ ಹೆಚ್ಚು ಯುವ ಆಟಗಾರರನ್ನು ಆಯ್ಕೆ ಮಾಡಲಾಯಿತು. ಇವರೆಲ್ಲರೂ ದೇಶದ ಸಿಬಿಎಸ್‌ಸಿ ಪಠ್ಯಕ್ರಮದ ವಿದ್ಯಾರ್ಥಿಗಳಾಗಿದ್ದಾರೆ.
Related Articles
ಜರ್ಮನಿಯಲ್ಲಿರುವ ಭಾರತೀಯ ಆಟಗಾರರಿಗೆ ಲಕ್ಸೆಂಬರ್ಗ್, ಬೆಲ್ಜಿಯಂ, ಫ್ರಾನ್ಸ್, ಹಾಲೆಂಡ್ ಹಾಗೂ ಯುಕೆ ಕ್ಲಬ್ ತಂಡಗಳ ಜತೆಗೆ ಆಡುವ ಅವಕಾಶ ಸಿಗುತ್ತಿದೆ. ಜತೆಗೆ ಅಲ್ಲಿನ ಒಲಿಂಪಿಕ್ಸ್ ಕೋಚ್‌ಗಳಿಂದಲೂ ಸಲಹೆಗಳು ದೊರೆಯುತ್ತಿವೆ. 2016ರಲ್ಲಿ
40ಕ್ಕೂ ಹೆಚ್ಚಿನ ಮಕ್ಕಳನ್ನು ಯೋಜನೆ ಮೂಲಕ ಯು ಡ್ರೀಮ್ ಜರ್ಮನಿಗೆ ಕಳುಹಿಸಿಕೊಟ್ಟಿದೆ.
Advertisement
ದೇಶದಲ್ಲಿ ಫುಟ್‌ಬಾಲ್ ಕೇಂದ್ರ ಸ್ಥಾಪಿಸುವ ಕನಸು:ಯು ಡ್ರೀಮ್‌ಗೆ ಸದ್ಯ ದೇಶದಲ್ಲಿ ಮಿಜೋರಾಮ್, ಹರ್ಯಾಣ, ಮಣಿಪುರದಲ್ಲಿ ಯು ಡ್ರೀಮ್ ಫುಟ್‌ಬಾಲ್ ಅಕಾಡೆಮಿ ಸ್ಥಾಪಿಸುವ ಗುರಿಯನ್ನು ಹೊಂದಿದೆ. ಒಟ್ಟಾರೆ 2017-18ರಲ್ಲಿ 7 ಕೇಂದ್ರವನ್ನು ಸ್ಥಾಪಿಸುವ ಗುರಿ ನೀಡಲಾಗಿದೆ. ಇದು 3 ವರ್ಷದ
ಯೋಜನೆಯಾಗಿದೆ. ಒಟ್ಟು 600 ಕ್ರೀಡಾಪಟುಗಳು ಡ್ರೀಮ್ ಸೌಲಭ್ಯ ಪಡೆಯಲಿದ್ದಾರೆ. ಸುಮಾರು 70-100 ಮಂದಿ ಕೋಚ್‌ಗಳು ಇಲ್ಲಿ ತರಬೇತಿ ನೀಡಲಿದ್ದಾರೆ. ಯುವ ಆಟಗಾರರನ್ನು ಒಂದು ಹಂತದಲ್ಲಿ ತಯಾರಿ ಮಾಡಿ ಹೆಚ್ಚಿನ ಕೋಚಿಂಗ್‌ಗಾಗಿ ಇಲ್ಲಿಂದ ಜರ್ಮನಿಗೆ ಕಳುಹಿಸಲಾಗುತ್ತದೆ. ಕಬಡ್ಡಿ ಮಾತ್ರವಲ್ಲ ಫುಟ್‌ಬಾಲ್‌ನತ್ತಲೂ ಯು ಮುಂಬಾ ಗಮನ ಹರಿಸುತ್ತಿರುವುದು ಕ್ರೀಡೆಯ ಹಿತ ದೃಷ್ಟಿಯಿಂದ ಒಳ್ಳೆಯದು.
ಯು ಮುಂಬಾ ತಂಡದ ಫ್ರಾಂಚೈಸಿ ಇಂತಹದೊಂದು ಕೆಲಸ ಮಾಡುತ್ತಿರುವುದು ಶ್ಲಾಘನೀಯ.
ರವಿ ಶೆಟ್ಟಿ, ಯು ಮುಂಬಾ ಕೋಚ್ ಹೇಮಂತ್ ಸಂಪಾಜೆ