ಕೊಚ್ಚಿನ್: ಕೇರಳದಲ್ಲಿ ವಿಪರೀತ ಫುಟ್ಬಾಲ್ ಆಸಕ್ತಿಯಿರುವುದು ಭಾರತೀಯರಿಗೆಲ್ಲ ಗೊತ್ತಿರುವ ಸಂಗತಿ. ಆದರೆ ವಿದೇಶೀಯರಿಗೂ ಗೊತ್ತಾ?
ಈ ಬಾರಿ ವಿಶ್ವಕಪ್ ಆರಂಭವಾಗುವ ಹೊತ್ತಿನಲ್ಲಿ ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಪುಲ್ಲವೂರ್ ನದಿಯ ಬಳಿ; ಬ್ರೆಝಿಲ್‌ನ ವಿಶ್ವವಿಖ್ಯಾತ ಆಟಗಾರ ನೇಮಾರ್ ಅವರ ಬೃಹತ್ ಕಟೌಟ್ ಒಂದನ್ನು ನಿಲ್ಲಿಸಲಾಗಿತ್ತು. ಅದನ್ನು ಫಿಫಾ ತನ್ನ ಟ್ವೀಟ್‌ನಲ್ಲಿ ಪ್ರಸ್ತಾಪ ಮಾಡಿತ್ತು. ಈಗ ಅದನ್ನು ಗಮನಿಸಿರುವ ನೇಮಾರ್, ಕೇರಳಿಗರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಸದ್ಯದ ವರ್ತಮಾನದ ಪ್ರಕಾರ ಬ್ರೆಝಿಲ್ ಮತ್ತು ಪೋರ್ಚುಗಲ್ ಕ್ವಾರ್ಟರ್ ಫೈನಲ್ ನಲ್ಲೇ ಸೋತಿರುವುದರಿಂದ ನೇಮಾರ್ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕಟೌಟ್ ಗಳನ್ನು ತೆಗೆಯಲಾಗಿದೆ. ಸದ್ಯ ಲಯೋನೆಲ್ ಮೆಸ್ಸಿ ಕಟೌಟ್ ಮಾತ್ರ ಉಳಿದುಕೊಂಡಿದೆಯಂತೆ.