ಮುಂಬಯಿ: ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಮೈದಾನ ದಲ್ಲಿ ಫುಟ್ಬಾಲ್ ಕ್ಲಬ್ ಆಫ್ ಮುಂಬೈಕರ್ ವಿರುದ್ಧ ನಡೆದ ಮುಂಬಯಿ ಡಿಸ್ಟಿÅಕ್ಟ್ ಫುಟ್ಬಾಲ್ ಅಸೋಸಿಯೇಶನ್ ವುಮೆನ್ಸ್ ಲೀಗ್ -2017 ಪಂದ್ಯದಲ್ಲಿ ಸ್ಪಾರ್ಕ್ಸ್ ಎಫ್‌ಸಿ ಪರ ಭರ್ಜರಿ ಪ್ರದರ್ಶನ ನೀಡಿದ ಸ್ಟೈಕರ್ ಜಾನ್ಹವಿ ಶೆಟ್ಟಿ
ಅವರು ತಂಡದ 5-1 ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಕನ್ನಡಿಗೆ ಕೀರ್ತಿ ತಂದಿದ್ದಾರೆ.
ಅಂತಾರಾಷ್ಟ್ರೀಯ ಸ್ಟಾರ್‌ಗಳಾದ ಅಬೀರ್ ಅರ್ಸಿವಾಲಾ ಮತ್ತು ಭಾಗ್ಯಶ್ರೀ ದಳ್ವಿ ಅವರೊಂದಿಗೆ ಆಡಿ ಸ್ಪೂರ್ತಿ ಪಡೆದ 12 ರ ಹರೆಯದ ಜಾನ್ಹವಿ ಶೆಟ್ಟಿ ಅವರು ಎರಡು ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಸಾಯ್ ಸಾಂಖೆ ಸ್ಪಾರ್ಕ್ಸ್ ಪರ 5 ನೇ ಹಾಗೂ ಗೆಲುವಿನ ಗೋಲು ಬಾರಿಸಿದರು. ಪರಾಜಿತ ತಂಡದ ಪರ ಪಂತ್ ಏಕೈಕ ಗೋಲು ಬಾರಿಸಿದರು.
ಇನ್ನೊಂದು ಪಂದ್ಯದಲ್ಲಿ ಕೆಂಕ್ರೆ ಎಫ್‌ಸಿ ತಂಡವು ಮುಂಬಯಿ ರಶ್ ಸಾಕರ್ ಅಕಾಡೆಮಿ ವಿರುದ್ಧ 3-1 ಅಂತರದಲ್ಲಿ ಗೆಲುವು ಸಾಧಿಸಿತು. ಬಾಡಿಲೈನ್ ಎಫ್‌ಸಿ ತಂಡವು ಫುಟ್ಬಾಲ್ ಲೀಡರ್ ಕ್ಲಬ್ ವಿರುದ್ಧ 3-1 ಅಂತರದಲ್ಲಿ ಗೆಲುವು ಸಾಧಿಸಿತು. ರೀನೀ ತಲಾಟಿ ಎರಡು ಗೋಲು ಮತ್ತು ಆರತಿ ಅರೋರಾ ಒಂದು ಗೋಲು ಬಾರಿಸಿ ಕೇಂಕ್ರೆ ಗೆಲುವಿನಲ್ಲಿ ಸಹಕರಿಸಿದರು. ಸಾಕರ್ ಅಕಾಡೆಮಿ ಪರ ಪ್ರಿಯಾಂಕಾ ಅಹಿರೋ ಏಕೈಕ ಗೋಲು ಹೊಡೆದರು.
ಜೂನಿಯರ್ ಇಂಟರ್‌ನ್ಯಾಷನಲ್ ಕರೆನ್‌ಪೈಸ್ ಎರಡು ಗೋಲು ಹೊಡೆಯುವ ಮೂಲಕ ಹಾಲಿ ಚಾಂಪಿಯನ್ ಬಾಡಿಲೈನ್ ಗೆಲುವು ದಾಖಲಿಸಿದರೆ, ನೇಹಾ ಟ್ಯೂರ್ ಗೋಲು ದಾಖಲಿಸುವ ಮೂಲಕ ಫುಟ್ಬಾಲ್ ಲೀಡರ್ ಟೂರ್ನಿಯಲ್ಲಿ ಜೀವಂತವಾಗಿರುವಂತೆ ಮಾಡಿದ್ದಾರೆ. ಇದೇ ವೇಳೆ ಟೂರ್ನಿಯ ಸಂಚಾಲಕ ಮತ್ತು ಬಿಪಿನ್ ಫುಟ್ಬಾಲ್ ಅಕಾಡೆಮಿಯ ಸಂಸ್ಥಾಪಕ, ಎಂಡಿಎಫ್‌ಎ ಸದಸ್ಯರ ಸುರೇಂದ್ರ ಕರ್ಕೇರ ಹಾಗೂ ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಜತೆ ಕಾರ್ಯದರ್ಶಿ, ಛತ್ರಪತಿ ಶಿವಾಜಿ ಪ್ರಶಸ್ತಿ ಪುರಸ್ಕೃತ ಜಯ ಶೆಟ್ಟಿ ಅವರು ಜಾಹ್ನವಿ ಅವರನ್ನು ಅಭಿನಂದಿಸಿದ್ದಾರೆ.