Advertisement
ಮೂಲತಃ ನೇಪಾಲದವರಾದ ಚಂದ್ರ ಬಹದೂರ್ ಹಾಗೂ ಲಕ್ಷ್ಮೀ ದಂಪತಿ ಪುತ್ರನಾಗಿ ದುಬಾರೆ ಕಲ್ಲುಕೋರೆ, ಪಾಲಿಬೆಟ್ಟ ಎನ್ನುವ ಪುಟ್ಟ ಗ್ರಾಮದಲ್ಲಿ ಹುಟ್ಟಿ ಬೆಳೆದರು. ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾಗಲೇ ಚಾಮರಾಜನಗರದಲ್ಲಿ ನಡೆದ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಆಡಿ ಜಯ ಗಳಿಸಿದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರ್ಣಗೊಳಿಸಿ, ಪಾಲಿಬೆಟ್ಟದಲ್ಲಿಯೇ ತನ್ನ ಪದವಿ ಶಿಕ್ಷಣವನ್ನು ಮುಗಿಸಿ, ಪ್ರಸ್ತುತ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆಯುತ್ತಲಿದ್ದಾರೆ.
ಬಾಲ್ಯದಿಂದಲೂ ಫುಟ್ಬಾಲ್ ಆಟದಲ್ಲಿನ ಒಲವು ಅವರನ್ನು ಅಂಗಣದಲ್ಲಿ ಆಡಲು ಪ್ರೇರೆಪಿಸಿತ್ತು. ಅರ್ಜೆಂಟಿನಾ ತಂಡದ ಆಟಗಾರ ಲಿಯೋನೆಲ್ ಮೆಸ್ಸಿ ಮತ್ತು ಕೊಡಗು ಮಿಲಾನ್ಸ್ ಕ್ಲಬ್‌ನ ಆಟಗಾರ ಸಿರಾಜ್ ಮೆಸ್ಸಿ ಲಾಲ್ ಅವರು ಬಹದೂರ್ ಅವರ ಮೆಚ್ಚಿನ ಆಟಗಾರರು. 2017ರಲ್ಲಿ ವಿರಾಜಪೇಟೆಯಲ್ಲಿ ನಡೆದ ರಾಜ್ಯಮಟ್ಟದ ಫುಟ್ಬಾಲ್ ಟೂರ್ನಿಯಲ್ಲಿ ಗೆದ್ದಿದ್ದಾರೆ. 2018ರಲ್ಲಿ ಮಂಗಳೂರಿನಲ್ಲಿ ನಡೆದ ಫುುಟ್ಬಾಲ್ ಪಂದ್ಯಾವಳಿಯಲ್ಲಿ ಗೆಲುವು ದಾಖಲಿಸಿದ್ದು, ಅಲ್ಲದೆ ಆ ಟೂರ್ನಿಯಲ್ಲಿ ಲಾಲ್ ಬಹದೂರ್ ಗರಿಷ್ಠ ಗೋಲು ಹೊಡೆದು ತಂಡದ ಗೆಲುವಿನ ರೂವರಿಯಾಗಿದ್ದರು. ರಾಜ್ಯದೆಲ್ಲೆಡೆ ಗೆಲುವು
ಸೋಮವಾರಪೇಟೆಯ ಗೌಡ್ರಳ್ಳಿಯಲ್ಲಿ ನಡೆದ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಇವರ ತಂಡವು ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ರಾಜೀವ್ ಗಾಂಧಿ ಖೇಲ್ ಅಭಿಯಾನದ ವತಿಯಿಂದ ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಗೆಲುವು ತಮ್ಮದಾಗಿಸಿಕೊಂಡಿದ್ದರು. ಅಲ್ಲದೆ ಕೊಡಗು ಲೀಗ್ ಪರ ರಾಜ್ಯ ಮಟ್ಟದ ಫುಟ್ಬಾಲ್ ಟೂರ್ನಿಯಲ್ಲಿ ಗೆಲುವಿನ ನಗೆ ಬೀರಿದ್ದರು.
Related Articles
ದೇವರು ಎಲ್ಲರಿಗೂ ಪ್ರತಿಭೆಯನ್ನು ಕೊಟ್ಟಿರುತ್ತಾನೆ. ಅದು ನಮ್ಮ ಶಿಸ್ತು, ಪರಿಶ್ರಮ, ಸಾರ್ಮಥ್ಯ ಅದನ್ನು ಸಾಧನೆಯಾಗಿ ರೂಪಿಸುತ್ತದೆ. ಫುಟ್ಬಾಲ್ ಆಟದಲ್ಲಿ ಎದುರಾಳಿ ತಂಡದ ಆಟಗಾರನ ಕಣ್ಣು ತಪ್ಪಿಸಿ ಚೆಂಡನ್ನು ಗುರಿಯ ಕಡೆಗೆ ಕೊಂಡು ಹೋಗುವ ಜಾಣ್ಮೆ ಇರಬೇಕು. ಪ್ರಸ್ತುತ ಇವರು ಕೊಡಿಗಿನ ರೋಜ್ ಕ್ಲಬ್‌ನಲ್ಲಿ ಆಡುತ್ತಿದ್ದಾರೆ. ಡಿಫೆಂಡರ್ ವಿಂಗ್ ಬ್ಯಾಕ್ ಆಟಗಾರರಾಗಿರುವ ಲಾಲ್ ಕೊಡಗು, ಮಂಡ್ಯ, ಮಂಗಳೂರು, ಮೈಸೂರು, ಬಿಜಾಪುರ ಮುಂತಾದ ಕಡೆಗಳಲ್ಲಿ ಆಟವಾಡಿ ನೀಡಿ ಗಮನ ಸೆಳೆದಿದ್ದಾರೆ.
Advertisement
ಜೀವನ ಎನ್ನುವುದು ಹರಿಯುವ ನೀರಿನ ಹಾಗೆ ಕೊನೆ ಇಲ್ಲದ ಪಯಣ. ಆ ಪಯಣದಲ್ಲಿ ನಮ್ಮ ಜತೆ ಶಾಶ್ವತವಾಗಿ ಯಾವುದೂ ಇರುವುದಿಲ್ಲ. ನಾವು ಮಾಡಿದ ಸಾಧನೆ ಮಾತ್ರ ಅಜರಾಮರ. ಹೀಗೆ ಕಷ್ಟ, ನೋವು, ಸೋಲುಗಳನ್ನು ತಮ್ಮ ಪ್ರತಿಭೆಯಿಂದ ಸರಿದೂಗಿಸಿದ ಲಾಲ್ ಬಹದೂರ್ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ತಮ್ಮ ಪ್ರತಿಭೆಯನ್ನು ಬೆಳಗಲಿ.
ಅಕಾಡೆಮಿ ಸ್ಥಾಪನೆಯ ಒಲವುಗುರುಗಳ, ಪೋಷಕರ ಪ್ರೋತ್ಸಾಹ, ಸಲಹೆ, ಸೂಚನೆ, ಮಾರ್ಗದರ್ಶನ ಈ ಸಾಧನೆಗೆ ಕಾರಣವಾಗಿದೆ. ಇವರು ಫುಟ್ಬಾಲ್ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ತ್ರೋಬಾಲ್‌ನಲ್ಲಿಯೂ ಜಿಲ್ಲಾಮಟ್ಟದಲ್ಲಿ ಆಡಿ ಗೆಲುವು ಗಳಿಸಿದ್ದರು. ಲಾಂಗ್ ಡ್ರೆçವ್, ಸಂಗೀತವು ಅವರಿಗೆ ಇಷ್ಟವಿದೆ. ತನ್ನ ಹುಟ್ಟೂರಾದ ನೇಪಾಳದಲ್ಲಿ ಫುಟ್ಬಾಲ್ ಅಕಾಡೆಮಿ ಪ್ರಾರಂಭಿಸಬೇಕೆನ್ನುವ ಇಂಗಿತ ಅವರದ್ದು. ಕೀರ್ತಿ ಪುರ
ಪತ್ರಿಕೋದ್ಯಮ ವಿದ್ಯಾರ್ಥಿನಿ, ಸಂತ ಫಿಲೊಮಿನಾ ಕಾಲೇಜು, ಪುತ್ತೂರು