Advertisement

ಫ‌ುಟ್‌ಬಾಲ್‌: ಕರ್ನಾಟಕ ಮುಖ್ಯ ಸುತ್ತಿಗೆ

03:02 PM Jan 22, 2018 | Team Udayavani |

ಬೆಂಗಳೂರು: ಉದ್ಯಾನನಗರಿಯ ಬೆಂಗಳೂರು ಫ‌ುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಂತೋಷ್‌ ಟ್ರೋಫಿ ದಕ್ಷಿಣ ವಲಯ ಅರ್ಹತಾ ಫ‌ುಟ್‌ಬಾಲ್‌ ಕೂಟದಲ್ಲಿ ಕರ್ನಾಟಕ ತಂಡ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಕೂಟದ ಮುಖ್ಯ ಸುತ್ತಿಗೆ ಪ್ರವೇಶ ಪಡೆದುಕೊಂಡಿದೆ.

Advertisement

ಭಾನುವಾರ ಸಂಜೆ ನಡೆದ ಪಂದ್ಯದಲ್ಲಿ ಕರ್ನಾಟಕ 4-1 ಗೋಲುಗಳ ಅಂತರದಿಂದ ಸರ್ವಿಸಸ್‌ ತಂಡವನ್ನು ಪರಾಭವಗೊಳಿಸಿತು. ಇದರೊಂದಿಗೆ ರಾಜ್ಯ ತಂಡ ದಕ್ಷಿಣ ವಲಯ ಅರ್ಹತಾ ಕೂಟದ ಪಂದ್ಯದಲ್ಲಿ ಆಡಿದ ಮೂರೂ ಪಂದ್ಯದಲ್ಲಿ ಗೆದ್ದಂತಾಯಿತು. ಒಟ್ಟು 9 ಅಂಕ ಸಂಪಾದಿಸಿ ಅಂಕಪಟ್ಟಿಯ ಮೊದಲ ಸ್ಥಾನಿಯಾಗಿ ಮುಖ್ಯ ಸುತ್ತು ಪ್ರವೇಶಿಸಿತು. 2010ರಲ್ಲಿ ರಾಜ್ಯ ತಂಡ ಕೊನೆಯದಾಗಿ ಕೂಟದ ಕ್ವಾರ್ಟರ್‌ಫೈನಲ್‌ ಹಂತ ಪ್ರವೇಶಿಸಿತ್ತು. ಇದಾದ ಬಳಿಕ ರಾಜ್ಯ ತಂಡ ಮುಖ್ಯ ಸುತ್ತಿಗೆ ಪ್ರವೇಶಿಸಲು ವಿಫ‌ಲವಾಗಿತ್ತು.

ರಾಜ್ಯ ಆಟಗಾರರ ಅಬ್ಬರ: ಕರ್ನಾಟಕ ಪಂದ್ಯದ ಆರಂಭದಿಂದಲೇ ಅಬ್ಬರಿಸಲು ಆರಂಭಿಸಿತು. 10ನೇ ನಿಮಿಷದಲ್ಲಿ ತಂಡದ ಪರ ಎಸ್‌.ಕೆ. ಅಜರುದ್ದೀನ್‌ ಗೋಲು ದಾಖಲಿಸಿದರು. ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಪಂದ್ಯದ 47ನೇ ನಿಮಿಷದಲ್ಲಿ ಎಸ್‌.ರಾಜೇಶ್‌ ಗೋಲು ದಾಖಲಿಸಿ ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟರು. ಅಷ್ಟೇ ಅಲ್ಲ ರಾಜೇಶ್‌ 72ನೇ ನಿಮಿಷದಲ್ಲಿ ಮತ್ತೂಮ್ಮೆ ಸರ್ವಿಸಸ್‌ ಆಟಗಾರರನ್ನು ವಂಚಿಸಿ ಗೋಲು ದಾಖಲಿಸಿಯೇ ಬಿಟ್ಟರು. ಹೀಗಾಗಿ ಕರ್ನಾಟಕ ಗೋಲುಗಳ ಸಂಖ್ಯೆಯನ್ನು 3-0 ಅಂತರಕ್ಕೆ ಹೆಚ್ಚಿಸಿಕೊಂಡಿತು. ಅಲ್ಲಿ ತನಕ ಗೋಲುಗಳಿಸಲು ಒದ್ದಾಟ ನಡೆಸುತ್ತಿದ್ದ ಸರ್ವಿಸಸ್‌ ಪರ 86ನೇ ನಿಮಿಷದಲ್ಲಿ
ಲೈಶ್ರಾಮ್‌ಹಿರೋಜಿತ್‌ ಸಿಂಗ್‌ ಗೋಲು ಸಿಡಿಸಿ ತಂಡದ ಗೋಲಿನ ಅಂತರವನ್ನು 3-1ಕ್ಕೆ ತಗ್ಗಿಸಿದರು. ಆದರೆ 89ನೇ ನಿಮಿಷದಲ್ಲಿ ಸೊಲೈಮಲೈ ಗೋಲು ದಾಖಲಿಸುವುದರೊಂದಿಗೆ ಕರ್ನಾಟಕ 4-1ಕ್ಕೆ ಗೋಲಿನ ಅಂತರವನ್ನು ಹೆಚ್ಚಿಸಿಕೊಂಡು ಗೆಲುವಿನ ಗುರಿ ಮುಟ್ಟಿತು. 

Advertisement

Udayavani is now on Telegram. Click here to join our channel and stay updated with the latest news.

Next