Advertisement
ಉಪ್ಪು, ಎಣ್ಣೆಚಳಿಗಾಲದಲ್ಲಿ ಮಕ್ಕಳ ಆಹಾರದಲ್ಲಿ ಉಪ್ಪು ಮತ್ತು ಎಣ್ಣೆಯ ಅಂಶ ಅತ್ಯಂತ ಕನಿಷ್ಠ ಪ್ರಮಾಣದಲ್ಲಿರಲಿ. ಇವುಗಳು ಹೆಚ್ಚಾದರೆ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.
ಮಕ್ಕಳಿಗೆ ಪ್ರಿಯವಾಗುವ ಕ್ಯಾಂಡಿ, ಸಕ್ಕರೆ ಹೆಚ್ಚಿರುವ ಆಹಾರಗಳು ದೇಹದಲ್ಲಿ ಬಿಳಿ ರಕ್ತದ ಕಣಗಳು ಕಡಿಮೆಯಾಗುವಂತೆ ಮಾಡುತ್ತದೆ ಮಾತ್ರವಲ್ಲ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂದುವಂತೆ ಮಾಡುತ್ತದೆ. ಇದರಿಂದ ಮಕ್ಕಳು ಬಹುಬೇಗನೆ ವೈರಸ್, ಬ್ಯಾಕ್ಟೀರಿಯಾಗಳ ಸೋಂಕಿಗೆ ತುತ್ತಾಗುತ್ತಾರೆ. ಡೈರಿ ಉತ್ಪನ್ನಗಳು
ಇವುಗಳಲ್ಲಿ ಪ್ರಾಣಿಜನ್ಯ ಪ್ರೋಟೀನ್‌ಗಳು ಅಧಿಕವಾಗಿರುತ್ತದೆ. ಇದು ಜೊಲ್ಲು ಮತ್ತು ಕಫ ಹೆಚ್ಚಲು ಕಾರಣವಾಗುತ್ತದೆ. ಅಲ್ಲದೇ ಮಕ್ಕಳಿಗೆ ಆಹಾರ ನುಂಗಲು ಕಷ್ಟವಾಗಬಹುದು. ಹೀಗಾಗಿ ಚೀಸ್, ಕ್ರೀಮ್, ಕ್ರೀಮ್ ಬೆರೆಸಿದ ಸೂಪ್, ಹೆಚ್ಚು ಗಾಢವಾದ ಡೈರಿ ಉತ್ಪನ್ನಗಳು ಮಕ್ಕಳಿಗೆ ನೀಡದೇ ಇರುವುದು ಉತ್ತಮ.
ಹಾಲು, ಬೆಣ್ಣೆ, ಮೊಸರು, ಒಮೆಗಾ3 ಕೊಬ್ಬಿನಾಮ್ಲಗಳು ಆರೋಗ್ಯ ವೃದ್ಧಿಸಿದರೂ ಮಕ್ಕಳಲ್ಲಿ ಕಫ, ಜೊಲ್ಲು ರಸ ಹೆಚ್ಚಿಸುತ್ತವೆ. ಪ್ರಾಣಿಜನ್ಯ ಆಹಾರಗಳಿಂದ ಮಕ್ಕಳನ್ನು ದೂರವಿಡುವುದು ಉತ್ತಮ.
Related Articles
ದೇಹದಲ್ಲಿ ಅಲರ್ಜಿಯ ವಿರುದ್ಧ ಹೋರಾಡಲು ಸಹಾಯಕವಾದ ಹಿಸ್ಟಮಿನ್ ಮಯೋನ್ನೀಸ್‌ನಲ್ಲಿ ಅಧಿಕವಾಗಿರುತ್ತದೆ. ಆದರೆ ಚಳಿಗಾಲದಲ್ಲಿ ಇದನ್ನು ಸೇವಿಸುವುದರಿಂದ ಕಫ ಹೆಚ್ಚುತ್ತದೆ. ಇದರಿಂದ ಕೆಮ್ಮು ಉಂಟಾಗುತ್ತದೆ. ಹಿಸ್ಟಮೈನ್ ಹೆಚ್ಚಾಗಿ ಟೊಮ್ಯಾಟೊ, ಬೆಣ್ಣೆಹಣ್ಣು, ಬಿಳಿಬದನೆ, ಮಯೋನ್ನೀಸ್, ಅಣಬೆ, ಶಿರ್ಕಾ, ಮಜ್ಜಿಗೆ, ಉಪ್ಪಿನಕಾಯಿ, ಹುದುಗು ಬರಿಸಿದ ಮತ್ತು ಕೃತಕ ಆಹಾರಗಳಲ್ಲಿರುತ್ತದೆ.
Advertisement
ಮಾಂಸಾಹಾರಮಾಂಸದಲ್ಲಿ ಪ್ರೋಟೀನ್ ಪ್ರಮಾಣ ಅಧಿಕವಾಗಿರುತ್ತದೆ. ಇದು ಮಕ್ಕಳಲ್ಲಿ ಕಫದ ಸಾಂದ್ರತೆಯನ್ನು ಹೆಚ್ಚು ಮಾಡುತ್ತದೆ. ಇದರಿಂದ ಗಂಟಲಲ್ಲಿ ಕೆರೆತ, ಕೆಮ್ಮು ಆರಂಭವಾಗುತ್ತದೆ. ಸಂಸ್ಕರಿಸಿದ ಮಾಂಸ, ಮೊಟ್ಟೆ ಮಕ್ಕಳಿಗೆ ಚಳಿಗಾಲದಲ್ಲಿ ಸೂಕ್ತವಲ್ಲ. ಇದರ ಬದಲು ಮೀನು, ಸಾವಯವ ಮಾಂಸಗಳನ್ನು ಅಲ್ಪ ಪ್ರಮಾಣದಲ್ಲಿ ನೀಡಬಹುದು.