ಹಾಸನ: ರಾಜ್ಯದಲ್ಲಿ ಅಪೌಷ್ಟಿಕತೆಯಿಂದನರಳುತ್ತಿರುವ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ನಿಟ್ಟಿನಲ್ಲಿ ಪೌಷ್ಟಿಕಾಂಶವುಳ್ಳ ಫುಡ್‌ಕಿಟ್‌ಗಳನ್ನು ವಿತರಿಸಲಾಗುವುದುಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಪ್ರಕಟಿಸಿದರು.
ಹಾಸನ ಜಿಪಂ ಸಭಾಂಗಣದಲ್ಲಿ ಜಿಲ್ಲಾಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮತ್ತುಶಾಸಕರನ್ನೊಳಗೊಂಡ ಸಭೆಯಲ್ಲಿ ಕೊರೊನಾ3ನೇ ಅಲೆ ತಡೆಯುವ ಹಾಗೂ ಎಸ್‌ಡಿಆರ್‌ಎಫ್ ಬಳಕೆ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ 3ನೇಅಲೆಯು ಮಕ್ಕಳ ಮೇಲೆ ಹೆಚ್ಚು ಪರಿಣಾಮಬೀರುವುದೆಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಅಪೌಷ್ಟಿಕತೆಯಿರುವಮಕ್ಕಳ ಬಗ್ಗೆ ಪ್ರತಿ ಹಳ್ಳಿಯಲ್ಲೂ ಸಮೀಕ್ಷೆ ನಡೆಸಿ ತೀವ್ರಅಪೌಷ್ಟಿಕತೆಯಿಂದ ನರಳುವ ಮಕ್ಕಳಿಗೆಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಪೌಷ್ಟಿಕಾಂಶವುಳ್ಳ ಆಹಾರದ ಸಾಮಗ್ರಿಗಳಕಿಟ್ ವಿತರಿಸಲಿದೆ. ಎಸ್‌ಡಿಆರ್‌ಎಫ್ನಿಂದಆಹಾರದಕಿಟ್ ವಿತರಣೆ ಮಾಡಲಾಗುವುದುಎಂದರು.
ಅರ್ಧ ಕೆ.ಜಿ.ನಂದಿನಿ ಹಾಲಿನ ಪುಡಿ,ನಂದಿನಿ ಬಿಸ್ಕೆಟ್, 200 ಗ್ರಾಂ ಬಾದಾಮಿ,ಮಲ್ಟಿ ವಿಟಮಿನ್ ಮಾತ್ರೆಗಳು ಮತ್ತು ಸಿರಪ್,ಎರಡು ಮಾಸ್ಕ್, ಸೋಪು ಕಿಟ್‌ನಲ್ಲಿರಲಿವೆ.ವೈದ್ಯರು ಮತ್ತು ಸಿಬ್ಬಂದಿ ತಂಡ ಹಳ್ಳಿಗಳಿಗೆಭೇಟಿ ನೀಡಿ ತೀವ್ರ ಅಪೌಷ್ಟಿಕತೆ ಹಾಗೂ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳ ಸಮೀಕ್ಷೆನಡೆಸಿ ಪಟ್ಟಿ ಸಿದ್ಧಪಡಿಸಬೇಕು ಎಂದರು.
ಎಲ್ಲ ವೈದ್ಯರಿಗೂ ಮಕ್ಕಳ ಚಿಕಿತ್ಸೆ ತರಬೇತಿ:ಕೊರೊನಾ 3ನೇ ಅಲೆ ಮಕ್ಕಳನ್ನು ಹೆಚ್ಚುಕಾಡಿದರೂಚಿಕಿತ್ಸೆಗೆವೈದ್ಯರಕೊರತೆಯುಂಟಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿಎಂಬಿಬಿಎಸ್ ಪದವಿ ಪಡೆದ ಎಲ್ಲ ವೈದ್ಯರಿಗೂ ಕೊರೊನಾ ಸಂದರ್ಭದಲ್ಲಿ ಮಕ್ಕಳಿಗೆ ಚಿಕಿತ್ಸೆನೀಡಲು3 ರಿಂದ5 ದಿನಗಳ ತರಬೇತಿ ಮಕ್ಕಳತಜ್ಞರಿಂದ ಕೊಡಿಸಲಾಗುವುದು. ಇನ್ನು 10ದಿನಗಳೊಳಗೆ ತರಬೇತಿ ಶಿಬಿರದ ವ್ಯವಸ್ಥೆಮಾಡಬೇಕು ಎಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೂ ಸಚಿವರು ಸೂಚನೆ ನೀಡಿದರು.
ಮಕ್ಕಳ ತಜ್ಞರ ತಂಡ ರಚಿಸಿ ಸಲಹಾ ಕೇಂದ್ರ ಸ್ಥಾಪನೆ: ವೈದ್ಯರಿಗೆ ತರಬೇತಿ ನೀಡುವುದರಜೊತೆಗೆ ಪ್ರತಿ ಜಿಲ್ಲಾ ಕೇಂದ್ರದಲ್ಲಿಯೂ 4ರಿಂದ 5 ಮಂದಿಯ ಮಕ್ಕಳ ತಜ್ಞರತಂಡವೊಂದನ್ನು ರಚಿಸಿ ಸಲಹಾ ಕೇಂದ್ರಸ್ಥಾಪನೆ ಮಾಡಲಾಗುವುದು. ಕೊರೊನಾಸಂದರ್ಭದಲ್ಲಿ ವೈದ್ಯರು ಮಕ್ಕಳ ಚಿಕಿತ್ಸೆಯಬಗ್ಗೆ ಈ ಕೇಂದ್ರದಿಂದ ದೂರವಾಣಿ ಮೂಲಕಮಾಹಿತಿ ಪಡೆದು ಗುಣಮಟ್ಟದ ಚಿಕಿತ್ಸೆನೀಡಲು ಸಾಧ್ಯವಾಗಲಿದೆ. ರಾಜ್ಯದ ಪ್ರತಿಜಿಲ್ಲೆಯಲ್ಲೂ ಇಂತಹ ವ್ಯವಸ್ಥೆಜಾರಿಯಾಗಲಿದೆ ಎಂದು ಸಚಿವ ಅಶೋಕ್ ಸ್ಪಷ್ಟಪಡಿಸಿದರು.