Advertisement

ಅರ್ಚಕರಿಗೆ ಫುಡ್‌ಕಿಟ್‌ ವಿತರಣೆ

07:45 PM Jul 02, 2021 | Team Udayavani |

ಮದ್ದೂರು: ನರೇಗಾ ಯೋಜನೆಯಡಿಕರ್ತವ್ಯ ನಿರ್ವಹಿಸಿ ಬಂದಿರುವ ದುಡಿಮೆಹಣದಿಂದ ಸಂಕಷ್ಟದಲ್ಲಿರುವ 25ಕ್ಕೂ ಹೆಚ್ಚುಅರ್ಚಕ ಕುಟುಂಬಗಳಿಗೆ ಆಹಾರದ ಕಿಟ್‌ವಿತರಿಸುವ ಮೂಲಕ ಮಾನವೀಯತೆ ಮೆರೆದಿರುವ ಚಿತ್ರಕಲಾವಿದ ತೂಬಿನಕೆರೆ ಗೋವಿಂದು ಅವರ ಕಾರ್ಯಕ್ಕೆಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Advertisement

ಉಚಿತ ಜಾಗೃತಿ ಚಿತ್ರ ಕಲಾವಿದ ಗೋಡೆಬರಹಗಾÃ ‌ ñ ‌ೂಬಿನಕೆರೆ ಗೋವಿಂದುಅವರು ತಮ್ಮ ಪತ್ನಿ ಸುಶೀಲಮ್ಮರ ‌ಸವಿನೆನಪಿನ ಅಂಗವಾಗಿ ಪಟ್ಟಣ¨ ‌ಉಗ್ರನರಸಿಂಹಸ್ವಾಮಿ ದೇವಾಲಯದಆವರಣದಲ್ಲಿ ಆಯೋಜಿಸಿದ ª ಆಹಾರದಕಿಟ್‌ ವಿತÃ ‌ಣಾ ಕಾರ್ಯಕ್ರಮಕ್ಕೆ ಚಾಲನೆನೀಡಿ ಅವರು ಮಾತನಾಡಿದರು.

ನರೇಗಾ ಯೋಜನೆಯಡಿ ಬಂದಿರುವ 53ಸಾವಿರ ರೂ. ಹಣದಲ್ಲಿ ಸಂಕಷ್ಟದಲ್ಲಿರುವಕುಟುಂಬಗಳಿಗೆ ಅಗತ್ಯ ದಿನನಿತ್ಯದ ಸಾಮಗ್ರಿಹಾಗೂ ಸಾವಿರ ರೂ. ನಗದನ್ನು ವಿತರಿಸುತ್ತಿರುವುದಾಗಿ ಹೇಳಿದರು.ತಿಂಗಳ ಹಿಂದೆ ನರೇಗಾ ಯೋಜನೆಯಲ್ಲಿಕರ್ತವ್ಯ ನಿರ್ವಹಿಸಿ ಬಿಡುಗಡೆಗೊಂಡಿರುವ ವೇತನದಲ್ಲಿ ಕೊರೋನಾ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ವಿತರಿಸಲು ನೆರವಾಗಿರುವುದಾಗಿ ತಿಳಿಸಿದರಲ್ಲದೇ ಮುಂದಿನ ದಿನಗಳಲ್ಲಿ ಹತ್ತು ದಿನದ ದುಡಿಮೆ ಹಣವನ್ನು ಸಾಮಾಜಿಕ ಸೇವಾ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುವುದಾಗಿ ಹೇಳಿದರು.

ಸ್ಥಳೀಯ ಸಾರ್ವಜನಿಕರು ಕೊರೊನಾವೈರಸ್‌ ಬಗ್ಗೆ ಉದಾಸೀನ ಮನೋಭಾವ ಹೊಂದದೆ ಜಾಗೃತಿವಹಿಸಿ ಸಾಮಾಜಿಕ ಅಂತರಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮನವಿ ಮಾಡಿದರು. ಶಂಕರ್‌ರಾವ್‌, ರುಕ್ಮಿಣಿ,ಕೆಂಪರಾಜು, ಆನಂದ್‌, ರಮೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next