Advertisement

ಆಸ್ಪತ್ರೆಗಳಿಗೆ ಗವಿಮಠದಿಂದ “ದಾಸೋಹ’

05:19 PM May 19, 2021 | Team Udayavani |

ಕೊಪ್ಪಳ: ದಾಸೋಹ, ಕಾಯಕಕ್ಕೆ ಹೆಸರಾದ ಗವಿಮಠವು ಸೋಂಕಿತರಿಗೆ ಆಕ್ಸಿಜನ್‌ ಆಸ್ಪತ್ರೆ, ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸುವ ಮೂಲಕ ಸಂಜೀವಿನಿಯಾಗುವ ಜತೆಗೆ ಜನರ ಹಸಿವು ನೀಗಿಸಲು ದಾಸೋಹ ಸೇವೆಗೂ ಮುಂದಾಗಿದೆ.

Advertisement

ಕಳೆದ ವರ್ಷ ಕೋವಿಡ್‌ ಸಂದರ್ಭದಲ್ಲೂ ಖಾಸಗಿ-ಸರ್ಕಾರಿ ಆಸ್ಪತ್ರೆಗಳಿಗೆ ನಿತ್ಯ ಊಟ ತಲುಪಿಸಿತ್ತು. ಈ ವರ್ಷವೂ ಮತ್ತೆ ದಾಸೋಹ ಸೇವೆ ಆರಂಭ ಮಾಡಿದೆ. ನಗರದಲ್ಲಿ ಸರ್ಕಾರಿ ಜಿಲ್ಲಾ ಕೋವಿಡ್‌ ಆಸ್ಪತ್ರೆ-ನಾಲ್ಕು ಖಾಸಗಿ ಕೋವಿಡ್‌ ಆಸ್ಪತ್ರೆಗಳಲ್ಲಿ ಸೋಂಕಿತರ ಆರೈಕೆಯಲ್ಲಿ ತೊಡಗಿರುವವರಿಗೆ ಹಾಗೂ ಸೋಂಕಿತರ ಸಂಬಂಧಿಕರಿಗೆ ಊಟದ ವ್ಯವಸ್ಥೆ ಮಾಡಿದೆ. ಕೋವಿಡ್‌ ಉಲ್ಬಣದ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಘೋಷಣೆಯಾದ ಪರಿಣಾಮ ನಗರ ಪ್ರದೇಶದಲ್ಲಿ ಕುಡಿಯಲು ನೀರೂ ಸಿಗದ ಪರಿಸ್ಥಿತಿ ಇದೆ. ಈ ವೇಳೆ ಸೋಂಕಿತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸುವ ಸಂಬಂಧಿಕರು ನಿತ್ಯ ಊಟಕ್ಕೆ ತೊಂದರೆ ಎದುರಿಸುವಂತಾಗಿದೆ.

ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಊಟ ಕೊಟ್ಟರೂ ಅವರ ಸಂಬಂಧಿ ಕರು ಅಥವಾ ಆರೈಕೆ ಮಾಡುವವರಿಗೆ ಊಟದ ಸಮಸ್ಯೆಯಾಗದಿರಲೆಂಬ ಕಾರಣಕ್ಕೆ ನಿತ್ಯ ಗವಿಮಠದಿಂದ 600-700 ಊಟದ ಪ್ಯಾಕೆಟ್‌ಗಳನ್ನು ಆಸ್ಪತ್ರೆಯ ಸ್ಥಳಕ್ಕೆ ಹೋಗಿ ವಿತರಿಸಲಾಗುತ್ತಿದೆ. ಸೋಂಕಿತರು ಆಟವಾಡಲು ಕೇರಂ ವ್ಯವಸ್ಥೆ: ಬಿ.ಎಸ್‌. ಗುಡಿ ಕುಟುಂಬವು ಗವಿಮಠದಲ್ಲಿನ ಸೋಂಕಿತರು ಸಮಯವನ್ನು ಖುಷಿಯಿಂದ ಕಳೆಯಲು, ಆರೋಗ್ಯವಂತ ಸೋಂಕಿತರು ಎಲ್ಲರೊಟ್ಟಿಗೆ ಬೆರೆಯಲು ಎರಡು ಕೇರಂ ಬೋರ್ಡ್‌ಗಳನ್ನು ಗವಿಮಠಕ್ಕೆ ನೀಡಿದೆ.

ಕೇರಂ ಆಟ ಆಡುವ ಮೂಲಕ ಅವರು ಸಮಯ ಖುಷಿಯಿಂದ ಕಳೆಯಲಿ ಎನ್ನುವುದು ಅವರ ಉದ್ದೇಶ. ಅಲ್ಲದೇ, ಪಗಡೆ ಆಟ, ಹಾವು-ಏಣಿ ಆಟ, ಹ್ಯಾಂಡ್‌ ಬಾಲ್‌ ಸೇರಿ ಇತರೆ ಆಟಿಕೆ ಸಾಮಗ್ರಿಗಳನ್ನೂ ಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next