Advertisement

ಡಬ್ಟಾವಾಲಾರಿಂದ ಕೋವಿಡ್‌ ಆಸ್ಪತ್ರೆಗಳಲ್ಲಿ ಆಹಾರ ವಿತರಣೆ

01:21 PM May 10, 2021 | Team Udayavani |

ಮುಂಬಯಿ: ಕೊರೊನಾ 2ನೇ ಅಲೆಯು ಜನರಿಗೆ ಸವಾಲುಗಳನ್ನು ಒಡ್ಡುತ್ತಲೇ ಇರುವುದರಿಂದ, ಮುಂಬಯಿ ಡಬ್ಟಾವಾಲರು ಅಗತ್ಯವಿರುವವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

Advertisement

ಲಾಕ್‌ಡೌನ್‌ನಿಂದ ಆರ್ಥಿಕವಾಗಿ ಕಷ್ಟಪಡುತ್ತಿರುವವರಿಗೆ ಮುಂಬಯಿಯ ಡಬ್ಟಾವಾಲರು ಕೋವಿಡ್‌ ಆರೈಕೆ ಕೇಂದ್ರಗಳು ಮತ್ತು ಕೋವಿಡ್‌ ಆಸ್ಪತ್ರೆಗಳಲ್ಲಿ ಆಹಾರವನ್ನು ವಿತರಿಸುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ನಾವು ಹಣಕಾಸಿನ ತೊಂದರೆಗಳನ್ನು ಎದುರಿಸುತ್ತಿದ್ದರೂ ಸಹ ನಾವು ಯಾವಾಗಲೂ ವಿವಿಧ ಕೋವಿಡ್‌ ಆರೈಕೆ ಕೇಂದ್ರಗಳು ಮತ್ತು ಆಸ್ಪತ್ರೆಗಳಿಗೆ ಆಹಾರವನ್ನು ನೀಡುತ್ತಿದ್ದೇವೆ ಎಂದು ಮುಂಬಯಿ ಡಬ್ಟಾವಾಲ ಸಂಘದ ವಕ್ತಾರ ವಿಬ್ಬು ಕಾಲ್ಡೋಕೆ ತಿಳಿಸಿದ್ದಾರೆ.

ಯಾವುದೇ ಪರಿಸ್ಥಿತಿ ಇರಲಿ ನಾವು ಮಾನವೀಯತೆಯನ್ನು ಉಳಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಕೆಲವು ಡಬ್ಟಾವಾಲಾಗಳು ಈ ಕಾರಣಕ್ಕೆ ಸ್ವಯಂ ಪ್ರೇರಣೆಯಿಂದ ಕೊಡುಗೆ ನೀಡುತ್ತಾರೆ ಮತ್ತು ಅವರು ತಮ್ಮ ಟ್ರಸ್ಟ್‌ನಿಂದ ಆರ್ಥಿಕ ಸಹಾಯವನ್ನು ಪಡೆಯುತ್ತಾರೆ ಎಂದು ಕಾಲ್ಡೋಕೆ ಹೇಳಿದ್ದಾರೆ.

ಬಿಕೆಸಿ, ಮಲಬಾರ್‌ ರೋಡ್‌ ಮತ್ತು ನಾನಾ ಚೌಕ್‌ನ ಮೂರು ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ನಾವು ಆಹಾರವನ್ನು ವಿತರಿಸುತ್ತೇವೆ. ಕೊರೊನಾ ಆಸ್ಪತ್ರೆಗಳ ಹೊರಗೆ ಆಹಾರ ಪ್ಯಾಕೆಟ್‌ಗಳನ್ನು ವಿತರಿಸುತ್ತೇವೆ. ಕೆಇಎಂ ಆಸ್ಪತ್ರೆಯ ಹೊರಗೆ ಪ್ರತಿದಿನ ಕನಿಷ್ಠ 50 ಪ್ಯಾಕೆಟ್‌ಗಳನ್ನು ವಿತರಿಸಲಾಗುತ್ತದೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next