Advertisement

ಫುಡ್ ಬೆಟರ್ ಬೆಸ್ಟ್

10:59 PM Aug 02, 2019 | Team Udayavani |

ಜಗತ್ತಿನ ಯಾವ ಭಾಗ ದಿಂದಲೇ ಬಂದಿರಲಿ, ಬೆಂಗಳೂರಿನಲ್ಲಿ ಅವರಿಗೆ ಊಟಕ್ಕೇನೂ ತೊಂದರೆ ಆಗುವುದಿಲ್ಲ. ಮುದ್ದೆಯೂಟ, ಗಂಜಿ ಊಟ, ಉತ್ತರ ಭಾರತೀಯ, ದಕ್ಷಿಣ ಭಾರತೀಯ, ಚೈನೀಸ್‌, ಇಟಾಲಿಯನ್‌, ಮೆಕ್ಸಿಕೊ ಹೀಗೆ ಬಹುತೇಕ ಎಲ್ಲ ಭಾಗಗಳ, ಎಲ್ಲ ವರ್ಗದ ಜನರ ಹೊಟ್ಟೆ ತಣಿಸುವ ಸಾವಿರಾರು ಹೋಟೆಲ್‌ಗ‌ಳು ನಗರದಲ್ಲಿವೆ. ಇಲ್ಲಿನ ಅದೆಷ್ಟೋ ಲಕ್ಷ ಜನರು, ದಿನನಿತ್ಯ ಹೋಟೆಲ್‌ ಊಟವನ್ನು ಅವಲಂಬಿಸಿದ್ದಾರೆ. ಶುಚಿ- ರುಚಿ ಯಿಂದ ಗ್ರಾಹಕರನ್ನು ತೃಪ್ತಿಪಡಿಸುತ್ತಿರುವ ಈ ಅನ್ನದಾತರನ್ನು ನೆನೆಯದೇ ಇರಲು ಸಾಧ್ಯವೇ?

Advertisement

ಬೃಹತ್‌ ಬೆಂಗಳೂರು ಹೋಟೆಲ್‌ಗ‌ಳ ಸಂಘದ ವತಿಯಿಂದ, ಬೆಂಗಳೂರಿನ ಉತ್ಕೃಷ್ಠ ಹೋಟೆಲ್‌ಗ‌ಳನ್ನು ಗುರುತಿಸಿ, ಗೌರವಿಸುವ ಕೆಲಸ ನಡೆಯುತ್ತಲಿದೆ. ಇದೇ ಮೊದಲ ಬಾರಿಗೆ, ಬಿಬಿಎಚ್‌ಎ ಆಹಾರ ಪ್ರಶಸ್ತಿಯನ್ನು ಘೋಷಿಸಿದ್ದು, ನವರತ್ನ ಎಂಬ ಒಂಬತ್ತು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

ಆಯ್ಕೆ ಹೇಗೆ?
ಹೋಟೆಲ್‌ಗ‌ಳು, ಈ ಸ್ಪರ್ಧೆಗೆ ತಮ್ಮ ಹೆಸರನ್ನು ನೋಂದಾಯಿ ಸಿ­ಕೊಳ್ಳಬೇಕು. ನಂತರ ಬೇರೆ ಬೇರೆ ಮಾನದಂಡಗಳ ಮೂಲಕ ಹೋಟೆಲ್‌ಗ‌ಳನ್ನು ಕೊನೆಯ ಸುತ್ತಿಗೆ ಆಯ್ಕೆ ಮಾಡಲಾಗುವುದು. ಆಯ್ಕೆ ಯಾದ ಪ್ರತಿ ಹೋಟೆಲ್‌ಗ‌ೂ ತೀರ್ಪುಗಾರರ ತಂಡ ಖುದ್ದಾಗಿ ಭೇಟಿ ನೀಡುತ್ತದೆ. ಆನಂತರ, ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.

ಬೆಂಗಳೂರಿನ ನಾಗಾಲೋಟದ ಬೆಳವಣಿಗೆಯಲ್ಲಿ ಹೋಟೆಲ್‌ಗ‌ಳ ಪಾತ್ರ ಬಹಳ ಮಹತ್ವದ್ದು. ಇಲ್ಲಿ ಎಲ್ಲ ವರ್ಗದ ಜನರ ಕೈಗೆಟಕುವ ಹೋಟೆಲ್‌ಗ‌ಳಿವೆ. ಈ ಉದ್ಯಮದಲ್ಲಿ ಉತ್ತಮ ಅಭ್ಯಾಸಗಳನ್ನು ಪಾಲಿಸುತ್ತಿರುವವರನ್ನು ಗುರುತಿಸುವುದು, ಗೌರವಿಸುವುದು ಹಾಗೂ ಉತ್ತೇಜಿಸುವುದು ನಮ್ಮ ಸಂಘದ ಉದ್ದೇಶ.
ಪಿ.ಸಿ. ರಾವ್‌, ಸಂಘದ ಅಧ್ಯಕ್ಷರು

ಯಾರ್ಯಾರಿಗೆ ಪ್ರಶಸ್ತಿ ಇದೆ?
ಅತ್ಯುತ್ತಮ ದರ್ಶಿನಿ ಮಾದರಿಯ ರೆಸ್ಟೋರೆಂಟ್‌.
ಅತ್ಯುತ್ತಮ ಕ್ಯಾಶುವಲ್‌ ಊಟ- ಸಸ್ಯಾಹಾರ.
ಅತ್ಯುತ್ತಮ ಕ್ಯಾಶುವಲ್‌ ಊಟ- ಮಾಂಸಾಹಾರ.
ಅತ್ಯುತ್ತಮ ಫೈನ್‌ ಡೈನಿಂಗ್‌
ಮಲ್ಟಿ ಕ್ವಿಸಿನ್‌.
ಅತ್ಯುತ್ತಮ ಸಿಹಿ-ಖಾರದ ತಿಂಡಿಗಳು.
ಅತ್ಯುತ್ತಮ ಬೇಕರಿ.
ಅತ್ಯುತ್ತಮ ಹೋಟೆಲ್‌
(ವಸತಿ ಸೌಲಭ್ಯ).
ಉದಯೋನ್ಮುಖ ಹೋಟೆಲ್‌ಗ‌ಳು.
ಜೀವಮಾನದ ಸಾಧನೆ ಪ್ರಶಸ್ತಿ.

Advertisement

ಎಲ್ಲಿ?: ಸರ್‌ ಎಂ.ವಿ. ಸಭಾಂಗಣ, ಎಫ್ಕೆಸಿಸಿಐ, ಕೆಂಪೇಗೌಡ ರಸ್ತೆ
ಯಾವಾಗ?: ಆಗಸ್ಟ್‌ 17, ಶನಿವಾರ
ಹೆಚ್ಚಿನ ಮಾಹಿತಿಗೆ: https://tinyurl.com/y6fkwzxu

Advertisement

Udayavani is now on Telegram. Click here to join our channel and stay updated with the latest news.

Next