Advertisement

ಹದಿಹರೆಯದವರಿಗೆ ಆಹಾರ ಮತ್ತು ಪೌಷ್ಟಿಕಾಂಶಗಳು

11:50 AM May 25, 2019 | Sriram |

ಮುಂದುವರಿದುದು- ಆಹಾರ ಸೇವನೆಯ ಅಸಹಜತೆಗಳು
ಹದಿಹರೆಯದ ಬಾಲಕಿಯರು ಬಾಹ್ಯರೂಪ ಮತ್ತು ದೇಹದ ಗಾತ್ರ -ಆಕಾರದ ದೃಷ್ಟಿಯಿಂದ ತಮ್ಮ ಆಹಾರ ಶೈಲಿಯನ್ನು ರೂಪಿಸಿಕೊಳ್ಳುತ್ತಾರೆ. ಇದೇ ವೇಳೆ ಬಾಲಕರು ದೇಹದಾಡ್ಯì ಮತ್ತು ಒಟ್ಟಾರೆ ಆರೋಗ್ಯದ ಬಗ್ಗೆ ಗಮನ ಹೊಂದಿರುತ್ತಾರೆ. ಮೂರು ವಿಧದ ಆಹಾರ ಸೇವನೆಯ ಅಸಹಜತೆಗಳನ್ನು ಗುರುತಿಸಲಾಗಿದೆ – ಅನೊರೆಕ್ಸಿಯಾ ನವೊìಸಾ, ಬುಲಿಮಿಯಾ ನವೊìಸಾ ಮತ್ತು ಬಿಂಜ್‌ ಈಟಿಂಗ್‌ ಡಿಸಾರ್ಡರ್‌.

Advertisement

ಅನೀಮಿಯಾ
ಸ್ನಾಯು ಹೆಚ್ಚಳದಿಂದಾಗಿ ಹದಿಹರೆಯದಲ್ಲಿ ದೇಹಕ್ಕೆ ರಕ್ತದ ಅಗತ್ಯ ವೃದ್ಧಿಸುತ್ತದೆ. ಇದರಿಂದ ಕಬ್ಬಿಣಾಂಶದ ಅಗತ್ಯವೂ ಹೆಚ್ಚಾಗುತ್ತದೆ. ಋತುಸ್ರಾವ ಸಂದರ್ಭದಲ್ಲಿ ಹೆಚ್ಚು ರಕ್ತ ನಷ್ಟವಾಗುವುದರಿಂದಾಗಿ ಹದಿಹರೆಯದ ಬಾಲಕಿಯರು ಕಬ್ಬಿಣಾಂಶ ಕೊರತೆಗೆ ತುತ್ತಾಗುವ ಸಾಧ್ಯತೆ ಇನ್ನಷ್ಟು ಹೆಚ್ಚು.

ಇದರ ಜತೆಗೆ, ಹದಿಹರೆಯದ ಕ್ರೀಡಾಳುಗಳು ಮತ್ತು ಮಾಂಸಾಹಾರಿಗಳಲ್ಲದ ಹದಿಹರೆಯದವರು ಕೂಡ ರಕ್ತಹೀನತೆಗೆ ತುತ್ತಾಗುವ ಅಪಾಯವನ್ನು ಹೊಂದಿರುತ್ತಾರೆ. ಆಹಾರ ಸೇವಿಸುವ ಪ್ರಮಾಣ ಕಡಿಮೆ ಇರುವುದರಿಂದಾಗಿ ಹದಿಹರೆಯದ ಅನೇಕರು ನಿತ್ರಾಣಗೊಂಡಿರುತ್ತಾರೆ. ಮಿದುಳು ಮತ್ತು ದೇಹದ ಎಲ್ಲ ಅಂಗಾಂಗಗಳು ಮತ್ತು ಅಂಗಾಂಶಗಳಿಗೆ ಆಮ್ಲಜನಕ, ಶಕ್ತಿಯನ್ನು ಸರಬರಾಜು ಮಾಡುವುದಕ್ಕಾಗಿ ಕಬ್ಬಿಣಾಂಶವು ನಮ್ಮ ದೇಹದಲ್ಲಿಡೀ ಅಗತ್ಯವಾಗಿರುತ್ತದೆ.

ಅಪೌಷ್ಟಿಕತೆ
ಆದಿವಾಸಿ ಹದಿಹರೆಯದವರಲ್ಲಿ ಕೈಗೊಂಡ ಅಧ್ಯಯನವು ತೋರಿಸಿಕೊಟ್ಟಿರುವಂತೆ, ಆರ್‌ಡಿಎಗೆ ಹೋಲಿಸಿದರೆ ಅವರಲ್ಲಿ ಆಹಾರ ಮತ್ತು ಪೌಷ್ಟಿಕಾಂಶ ಸೇವನೆಯ ಕೊರತೆ ಇದೆ. ಸೂಕ್ಷ್ಮ ಪೌಷ್ಟಿಕಾಂಶಗಳಾದ ಕಬ್ಬಿಣಾಂಶ, ವಿಟಮಿನ್‌ ಎ, ರಿಬೊಫ್ಲೇವಿನ್‌ ಮತ್ತು ಫ್ರೀ ಫೋಲಿಕ್‌ ಆ್ಯಸಿಡ್‌ ವಿಚಾರದಲ್ಲಿ ಈ ಕೊರತೆ ಇನ್ನಷ್ಟು ಹೆಚ್ಚು ಇದೆ. ಹದಿಹರೆಯದಲ್ಲಿ ದೇಹಕ್ಕೆ ಹೆಚ್ಚು ಪ್ರಮಾಣದಲ್ಲಿ ಸೇರಬೇಕಾದ ಮುಖ್ಯ ಪೌಷ್ಟಿಕಾಂಶಗಳು ಎಂದರೆ ಶಕ್ತಿ, ಪ್ರೊಟೀನ್‌, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶ.

ಹದಿಹರೆಯದಲ್ಲಿ ಪೌಷ್ಟಿಕಾಂಶವನ್ನು ಹೆಚ್ಚಿಸಲು ಆರೋಗ್ಯಪೂರ್ಣ
ಆಹಾರಗಳ ಆಯ್ಕೆ ಮಾಡಿಕೊಳ್ಳಲು ಹದಿಹರೆಯದವರನ್ನು
ಪ್ರೋತ್ಸಾಹಿಸಬೇಕು. ಆರೋಗ್ಯಪೂರ್ಣ ಊಟ ಉಪಾಹಾರಗಳ ನಡುವೆ ಆರೋಗ್ಯಯುತ ತಿನಿಸುಗಳನ್ನು ಸೇವಿಸುವುದು ಹೆಚ್ಚುವರಿ ಪೌಷ್ಟಿಕಾಂಶ ಮತ್ತು ಕ್ಯಾಲೊರಿಗಳನ್ನು ಪಡೆಯಲು ಉತ್ತಮ ಮಾರ್ಗ. ವ್ಯಾಯಾಮ
ಮಾಡುವುದನ್ನು ಕೂಡ ಪ್ರೋತ್ಸಾಹಿಸಬೇಕು. ಸಾಮಾಜಿಕ ಚಟುವಟಿಕೆಗಳನ್ನು ಯೋಜಿಸಿಕೊಳ್ಳಬೇಕು.

Advertisement

-ಮುಂದುವರಿಯುವುದು

Advertisement

Udayavani is now on Telegram. Click here to join our channel and stay updated with the latest news.

Next