Advertisement
ಕಪಾಲಭಾತಿ ಪ್ರಾಣಾಯಾಮಬೆನ್ನು ನೇರ ಮಾಡಿ ಸುಖಾಸನದಲ್ಲಿ ಕುಳಿತುಕೊಳ್ಳುವುದು. ನಿಮ್ಮ ಅಂಗೈಯನ್ನು ತೊಡೆಯ ಮೇಲೆ ಆಕಾಶ ಮುಖವಾಗಿ ಇಟ್ಟು ಕೊಳ್ಳುವುದು. ಅನಂತರ ದೀರ್ಘ ಉಸಿರಾಟ ತೆಗೆದುಕೊಳ್ಳುವುದರಿಂದ ಈ ಸಮಸ್ಯೆಯನ್ನು ದೂರಗೊಳಿಸಬಹುದಾಗಿದೆ.
ಪದ್ಮಾಸನದಲ್ಲಿ ಕುಳಿತುಕೊಳ್ಳುವುದು. ಕಣ್ಣು ಮುಚ್ಚಿಕೊಂಡು ಹಣೆಯು ನೆಲವನ್ನು ತಾಕುವವರೆಗೂ ಮುಂದೆ ಬಾಗಿಸಬೇಕು. ಇದು ಬಾಯಿಯ ದುರ್ವಾಸನೆಯ ನಿರ್ಮೂಲನೆಗೆ ಸಹಕಾರಿಯಾಗಿದೆ. ಶೀತಲೀ ಪ್ರಾಣಾಯಾಮ
ನಾಲಗೆಯನ್ನು ಮುಂದಕ್ಕೆ ಚಾಚಿ ಬಾಯಿಯಿಂದ ಉಸಿರನ್ನು ತೆಗೆದುಕೊಂಡು ಮೂಗಿನ ಮೂಲಕ ಹೊರಬಿಡುವುದು.
Related Articles
ಪ್ರಾಣಾಯಾಮ ನಾಲಗೆಯನ್ನು ಹಲ್ಲುಗಳಿಗೆ ಒತ್ತರಿಸಿ ಉಸಿರನ್ನು ತೆಗೆದುಕೊಂಡು ಅನಂತರ ಬಾಯಿ ಮುಚ್ಚಿ ಮೂಗಿನ ಮೂಲಕ ಉಸಿರನ್ನು ಬಿಡುವುದು. ಈ ಅಭ್ಯಾಸವನ್ನು 5ರಿಂದ 10 ಸಲ ಮಾಡುತ್ತಾ ಬಂದರೆ ಈ ಸಮಸ್ಯೆಯನ್ನು ದೂರಗೊಳಿಸಬಹುದಾಗಿದೆ.
Advertisement
ಈ ದುರ್ವಾಸನೆ ಸಾಮಾನ್ಯವಾಗಿ ಎಲ್ಲರಲ್ಲಿಯೂ ಇರುತ್ತದೆ. ಏಕೆಂದರೆ ಒತ್ತಡ ಮತ್ತು ವಿಪರೀತ ಕೆಲಸದಿಂದ ಶರೀರದ ಸಮತೋಲನ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಈ ಎಲ್ಲ ಸಮಸ್ಯೆಗಳಿಗೆ ಯೋಗ ಸಹಕಾರಿಯಾಗುವುದರ ಜತೆಗೆ ಈ ಎಲ್ಲ ಸಮಸ್ಯೆಗಳಿಂದ ನಿಮ್ಮನ್ನು ಕಾಪಾಡುತ್ತದೆ. ಹಾಗೆಯೇ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.