Advertisement

ಮೊಡವೆ ಬರದಿರಲು ಅನುಸರಿಸಿ ಈ ಅಭ್ಯಾಸ…

10:09 PM Aug 26, 2019 | mahesh |

ಚರ್ಮ ತಜ್ಞರ ಪ್ರಕಾರ ಮುಖದಲ್ಲಿ ಮೊಡವೆಗಳು ವಿಭಿನ್ನ ಕಾರಣಗಳಿಗೆ ಬೀಳುತ್ತವೆ. ತ್ವಚೆ ಹೆಚ್ಚು ಎಣ್ಣೆ ಉತ್ಪಾದಿಸಿ ಚರ್ಮದ ರಂಧ್ರಗಳನ್ನು ಮುಚ್ಚುವುದು, ಡೆಡ್‌ ಸ್ಕಿನ್‌ಗಳ ರಚನೆಗೆ ಕಾರಣವಾಗುವುದು ಹಾಗೂ ಚರ್ಮದಲ್ಲಿ ಬ್ಯಾಕ್ಟೀರಿಯಾ ಇರುವಿಕೆ ಸೇರಿದಂತೆ ವಿವಿಧ ಅಂಶಗಳಿಂದ ಮೊಡವೆಗಳು ಉಂಟಾಗುತ್ತವೆ. ಮೊಡವೆಗಳಿಂದ ಹೇಗೆ ಮುಕ್ತಿ ಪಡೆಯುವುದು ಎನ್ನುವ ಚಿಂತೆಯೇ? ಹಾಗದಾರೆ ಇಲ್ಲಿದೆ ಉಪಾಯ. ದಿನಚರಿಯಲ್ಲಿ ಈ ಅಭ್ಯಾಸಗಳನ್ನು ಸೇರಿಸಿಕೊಂಡರೆ ಮೊಡವೆಗಳಿಂದ ಮುಕ್ತಿ ಪಡೆದು ಸುಂದರ ಮುಖ ನಿಮ್ಮದಾಗಿಸಿಕೊಳ್ಳಬಹುದು. ಆ ಅಭ್ಯಾಸಗಳು ಯಾವುದು ಎಂಬ ಇಲ್ಲಿದೆ ಮಾಹಿತಿ.

Advertisement

ಮುಖವನ್ನು ಸ್ಪರ್ಶಿಸುವ ಎಲ್ಲ ವಸ್ತುಗಳನ್ನು ತೊಳೆಯಿರಿ
ನಿಮ್ಮ ಮುಖವನ್ನು ನಿಯಮಿತವಾಗಿ ಸ್ವರ್ಶಿಸುವ ಎಲ್ಲ ವಸ್ತುಗಳನ್ನು ಪ್ರತಿದಿನ ಶುಚಿಗೊಳಿಸಿ. ಈ ಪಟ್ಟಿಯಲ್ಲಿ ದಿಂಬುಗಳು, ಮೇಕಪ್‌ ಕುಂಚಗಳು ಮತ್ತು ಫೋನಿನ ಪರದೆಗಳು ಒಳಗೊಂಡಿರಲಿ.

ಸ್ಕ್ರಬ್‌ ಬಳಕೆ ತಪ್ಪಿಸಿ
ನಿಮ್ಮ ಚರ್ಮ ಮೊಡವೆಗಳಿಂದ ಕೂಡಿದ್ದರೆ ಸ್ಕ್ರಬ್‌ಗಳ ಬಳಕೆಯನ್ನು ನಿಲ್ಲಿಸಿ. ಅದರ ಮೇಲೆ ಸ್ಪಂಜನ್ನು ಬಳಸುವುದರಿಂದ ಮೊಡವೆಗಳು ಉಲ್ಬಣಗೊಳ್ಳುತ್ತವೆ.

ಕೂದಲು ಸ್ವಚ್ಛವಾಗಿರಲಿ
ಕೂದಲನ್ನು ನಿಯಮಿತವಾಗಿ ತೊಳೆಯುತ್ತಿರಿ. ಕೂದಲಿನ ಮೇಲೆ ಹೆಚ್ಚುವರಿ ಎಣ್ಣೆಯಿಲ್ಲದಂತೆ ನೋಡಿಕೊಳ್ಳಿ. ಸೂರ್ಯನ ನೇರವಾದ ಕಿರಣಗಳಿಂದ ಚರ್ಮವನ್ನು ರಕ್ಷಿಸುವ ಅತೀ ಮುಖ್ಯ. ಸನ್‌ಸ್ಕ್ರೀನ್‌ ಬಳಸುವುದು ಅಗತ್ಯ. ಜಿಡ್ಡಿಲ್ಲ ಸನ್‌ಸ್ಕ್ರೀನ್‌ಗಳನ್ನು ಬಳಸಿ. ಚರ್ಮದಲ್ಲಿ ಹೆಚ್ಚು ಜಿಡ್ಡಿದ್ದರೆ ಮೊಡವೆಗಳು ಹೆಚ್ಚು ಬೀಳುತ್ತವೆ.

2 ಬಾರಿ ಮುಖ ತೊಳೆಯಿರಿ
ಸೌಮ್ಯವಾದ ಕ್ಲೆನ್ಸರ್‌ ಮತ್ತು ಬೆಚ್ಚಗಿನ ನೀರಿನಲ್ಲಿ ಪ್ರತಿದಿನ ಎರಡು ಬಾರಿ ಮುಖ ತೊಳೆಯಿರಿ. ಇವುಗಳ ಅಧಿಕ ಬಳಕೆಯಿಂದ ದೂರವಿರಿ. ಏಕೆಂದರೆ ಇವು ಚರ್ಮವನ್ನು ಒಣಗಿಸುತ್ತವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next