Advertisement

ಆದೇಶ ಕಟ್ಟುನಿಟ್ಟಾಗಿ ಪಾಲಿಸಿ

12:19 PM Apr 06, 2020 | Suhan S |

ಚಾಮರಾಜನಗರ:  ಕೋವಿಡ್ 19 ಹರಡದಂತೆ ಮುಂಜಾಗರೂಕತೆ ವಹಿಸುವ ಎಲ್ಲಾ ನಿರ್ದೇಶನಗಳನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೌಡಾಳಿತ ನಿರ್ದೇಶನಾಲಯದ ನಿರ್ದೇಶಕಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ಸೂಚಿಸಿದರು.

Advertisement

ನಗರದಲ್ಲಿ ಕೋವಿಡ್ 19 ತಡೆಗಾಗಿ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ನಡೆದ ಸಭೆಯಲ್ಲಿ ಮಾತನಾಡಿದಅವರು, ಕೋವಿಡ್‌-19 ತಡೆಯಲು ಸರ್ಕಾರ ಸೂಚಿಸಿರುವ ಎಲ್ಲಾ ಬಗೆಯ ಮುಂಜಾಗರೂಕತಾ ಕ್ರಮಗಳನ್ನು ಚಾಚೂ ತಪ್ಪದೆ ಅನುಷ್ಠಾನ ಮಾಡಬೇಕು, ಯಾವುದೇ ಪರಿಸ್ಥಿತಿ ನಿಭಾಯಿಸಲು ಆಸ್ಪತ್ರೆಗಳಲ್ಲಿ ಎಲ್ಲ ಸೌಲಭ್ಯಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು, ಮಾಸ್ಕ್, ಸ್ಯಾನಿಟೈಸರ್‌ ಇತರೆ ಸುರಕ್ಷತಾ ಸಾಧನಗಳು ಎಲ್ಲೆಡೆ ಲಭ್ಯವಾಗಬೇಕು ಎಂದು ತಿಳಿಸಿದರು.

ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡಬೇಕು. ಅವಶ್ಯಕ ವಸ್ತು ಗಳ ಸಾಗಣೆಗೆ ಯಾವುದೇ ಅಡಚಣೆಯಾಗಬಾರದು. ತರಕಾರಿ, ಹಣ್ಣು, ದಿನಸಿ ವಸ್ತುಗಳು ಸೇರಿದಂತೆ ದಿನಬಳಕೆ ಸಾಮಗ್ರಿಗಳಿಗೆ ಕೊರತೆಯಾಗ ಬಾರದು. ಕೃಷಿ ಚಟುವಟಿಕೆಗಳಿಗೆ ಅವಶ್ಯ ವಿರುವ ಪರಿಕರ ಒದಗಿಸುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಡಾ.ರವಿ, ಎಡೀಸಿ ಆನಂದ್‌, ಜಿಪಂ ಸಿಇಒ ನಾರಾಯಣರಾವ್‌, ಉಪ ವಿಭಾಗಾಧಿ ಕಾರಿ ನಿಖೀತಾ, ಡಿಎಚ್‌ಒ ಡಾ.ರವಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next