Advertisement

ಮಹಾತ್ಮರ ಆದರ್ಶ ಅನುಸರಿಸಿ

11:15 AM Sep 07, 2017 | Team Udayavani |

ಬೀದರ: ಮಹಾತ್ಮರ ಜಯಂತಿಗಳನ್ನು ಸರ್ಕಾರದಿಂದಲೇ ಆಚರಿಸುತ್ತಿರುವುದು ಅಭಿನಂದನಾರ್ಹ ಸಂಗತಿ. ಅಂತೆಯೇ ಮಹಾತ್ಮರ ಬದುಕಿನ ಆದರ್ಶ ಮೈಗೂಡಿಸಿಕೊಂಡು ನಡೆಯುವುದು ಅವಶ್ಯವಾಗಿದೆ ಎಂದು ಕೌಠಾ ಬಸವಯೋಗಾಶ್ರಮದ ಶ್ರೀ ಸಿದ್ಧರಾಮ ಶರಣರು ಬೆಲ್ದಾಳ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಬುಧವಾರ ನಗರದ ರಂಗಮಂದಿರದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರು ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶರಣರು ಮಾತನಾಡಿದರು.

ಯಾವುದೇ ಮಹಾಪುರುಷರು ಒಂದು ಸಮುದಾಯಕ್ಕಾಗಿ ಮಾತ್ರ ಇರುವುದಿಲ್ಲ. ಸಮಾಜದ ಒಳಿತಿಗಾಗಿ ಶ್ರಮಿಸುವ ಅವರನ್ನು ಒಂದು ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸಬಾರದು. ಅಂತಹ ಮಹನಿಯರ ಆಶಯಗಳನ್ನು ಸರಿಯಾಗಿ ತಿಳಿಸಿದಲ್ಲಿ ಸಮಾಜವು ಬದಲಾಗಿ ದೇಶ ಒಂದಾಗುವುದಲ್ಲದೇ ಸದೃಢ ಸಮಾಜ ನಿರ್ಮಾಣ
ಸಾಧ್ಯ ಎಂದು ಹೇಳಿದರು.

ನಾರಾಯಣಗುರುಗಳು ಸಮಾಜದಲ್ಲಿದ್ದ ಲೋಪಗಳನ್ನು ಸರಿಪಡಿಸಲು ಅವಿರತವಾಗಿ ಯತ್ನಿಸಿದ್ದರು. ಅವರು ಯಾವುದೇ ಜಾತಿ, ಭಾಷೆ ಮತ್ತು ಜನಾಂಗಕ್ಕೆ ಮಿತವಾಗದೇ ಜಗತ್ತಿಗೆ ಗುರುವಾಗಿದ್ದಾರೆ ಎಂದು ಬಣ್ಣಿಸಿದರು.

ಮನುಷ್ಯನ ಭಾವನೆಗಳು ವಿಶಾಲವಾಗಬೇಕು. ಶಿಕ್ಷಣವೇ ಅಭಿವೃದ್ಧಿ ಬೀಜವಾಗಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದಕ್ಕೆ ಒತ್ತು ನೀಡಬೇಕು. ಜನರು ನಿರುದ್ಯೋಗಿಯಾಗದೇ ಯಾವುದಾದರು ಉದ್ಯೋಗದಲ್ಲಿ
ತೊಡಗಿಸಿಕೊಳ್ಳಬೇಕು. ಇದರಿಂದ ಆರ್ಥಿಕ ಪ್ರಗತಿ ಕಾಣಲು ಸಾಧ್ಯ. ಹೆಣ್ಣು ಮಕ್ಕಳನ್ನು ಸ್ವಾವಲಂಬಿ ಜೀವನ ಸಾಗಿಸುವಂತಾಗಲು ಉತ್ತಮ ಶಿಕ್ಷಣ ಕಲ್ಪಿಸಬೇಕು ಎಂದು ಹೇಳಿದರು.

Advertisement

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಮ್‌ ಖಾನ್‌ ಮಾತನಾಡಿ, ಸಮಾಜದ ಏಳಿಗೆ ಕಾಳಜಿ
ಹೊಂದಿದ್ದ ನಾರಾಯಣಗುರು ಅವರ ಆಶಯಗಳನ್ನು ಈಡೇರಿಸಲು ಎಲ್ಲರೂ ಪ್ರಯತ್ನಿಸಬೇಕು. ಮಹನೀಯರ
ಆಶಯದಂತೆಯೇ ಸರ್ಕಾರ ಬಡವರ, ಕೆಳವರ್ಗದವರ ಏಳಿಗೆಗೆ ಹಲವು ಕಾರ್ಯಕ್ರಮ ರೂಪಿಸಿದ್ದು, ಜನರು
ಅವುಗಳ ಸದುಪಯೋಗ ಪಡೆಯಲು ಮುಂದಾಗಬೇಕು ಎಂದು ಹೇಳಿದರು.

ಉಪನ್ಯಾಸ ನೀಡಿದ ನಿವೃತ್ತ ತಾಂತ್ರಿಕ ಲೆಕ್ಕಪರಿಶೋಧಕ ಹುಸೇನಯ್ಯ ಸಿರ್ಸೆ, ತಿರುವನಂತಪುರದ ಚಂಪಂಗಿ ಎಂಬ
ಗ್ರಾಮದಲ್ಲಿ 1854ರ ಸೆ. 18ರಂದು ಬಡ ಕುಟುಂಬದಲ್ಲಿ ಜನಿಸಿದ ನಾರಾಯಣ ಗುರುಗಳು, ಉನ್ನತ ಶಿಕ್ಷಣ ಪಡೆಯಲು
ಸಾಧ್ಯವಾಗದಿದ್ದರೂ ತಂದೆಯಿಂದ ಸಂಸ್ಕೃತ ಭಾಷೆಯಲ್ಲಿ ಪರಿಣಿತಿ ಹೊಂದಿದ್ದರು. ಬಾಲ್ಯದಿಂದಲೇ ಧಾರ್ಮಿಕ
ವಿಷಯಗಳಲ್ಲಿ ಆಸಕ್ತಿ ಹೊಂದಿದ್ದರು. ನಾಲ್ಕು ವರ್ಷ ಕಠಿಣ ತಪಸ್ಸಿನ ಬಳಿಕ, ಸಾಮಾಜಿಕ ಲೋಪ ಸರಿಪಡಿಸಲು
ಮುಂದಾದರು. ಸಮಾಜದಲ್ಲಿ ಆಚರಣೆಯಲ್ಲಿದ್ದ ಮೌಢ್ಯಾಚರಣೆ ವಿರೋಧಿಸುತ್ತಿದ್ದ ಅವರು, ಅಸ್ಪೃಶ್ಯತೆ
ತೊಲಗಿಸಲು ಹೋರಾಡಿದರು ಎಂದು ಹೇಳಿದರು.

ಜಿಪಂ ಅಧ್ಯಕ್ಷೆ ಭಾರತಬಾಯಿ ಶೆರಿಕಾರ ಮಾತನಾಡಿದರು. ಸದಸ್ಯ ಸುಧಿಧೀರ ಕಾಡಾದಿ, ಜಿಲ್ಲಾಧಿಕಾರಿ ಡಾ| ಎಚ್‌.
ಆರ್‌. ಮಹಾದೇವ, ಸಹಾಯಕ ಆಯುಕ್ತ ಶಿವಕುಮಾರ ಶೀಲವಂತ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ
ಬಲಭೀಮ ಕಾಂಬಳೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next