Advertisement

ಮದುವೆ ಸಮಾರಂಭಗಳಲ್ಲಿ ಹಸಿರು ಶಿಷ್ಟಾಚಾರ ಅನುಸರಿಸಿ

07:00 AM Sep 10, 2017 | Team Udayavani |

ಕಾಪು: ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಮತ್ತು ದ್ರವತ್ಯಾಜ್ಯ ನಿರ್ವಹಣೆ ಸವಾಲಿನ ಕೆಲಸವಾಗಿದ್ದು ದಿನದಿಂದ ದಿನಕ್ಕೆ ಹೆಚ್ಚು ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತಿರುವ ಕಸವನ್ನು ಕಡಿಮೆ ಉತ್ಪತ್ತಿ ಮಾಡುವ ಹಿತದೃಷ್ಟಿಯಿಂದ ತಮ್ಮ ಮನೆಯಲ್ಲಿ ನಡೆಯಲಿರುವ ಮದುವೆ ಕಾರ್ಯಕ್ರಮದಲ್ಲಿ ಮತ್ತೆ ಮತ್ತೆ ಬಳಕೆ ಮಾಡುವ ವಸ್ತುಗಳನ್ನು ಉಪಯೋಗಿಸಲು ಪೋÅತ್ಸಾಹಿಸುವ ನಿಟ್ಟಿನಲ್ಲಿ ಕಾಪು ಪುರಸಭೆ ಯೋಜನೆ ರೂಪಿಸಿದೆ.

Advertisement

ಮದುವೆ ಸಮಾರಂಭ ಕಾರ್ಯಕ್ರಮಗಳಲ್ಲಿ ಪೇಪರ್‌ ಪ್ಲಾಟ್‌, ಪೇಪರ್‌ ಗ್ಲಾಸ್‌, ಪೆಟ್‌ ಬಾಟಲ್‌ಗ‌ಳು ಮತ್ತು ಪ್ಲಾಸ್ಟಿಕ್‌ ಲೋಟಗಳ ಸಂಪೂರ್ಣವಾಗಿ ಬಳಕೆಯನ್ನು ನಿಲ್ಲಿಸಿ, ಅವುಗಳ ಬದಲಿಗೆ ಉಪಾಹಾರ, ಊಟ ಸೇವನೆ ಮಾಡಲು ಬಾಳೆ ಎಲೆ, ಸೀrಲ್‌ ತಟ್ಟೆ, ನೀರು ಕುಡಿಯಲು ಸೀrಲ್‌ ತಟ್ಟೆ, ಸೀrಲ್‌ ಲೋಟಗಳನ್ನು ಬಳಸಿ ತ್ಯಾಜ್ಯ ವಸ್ತುಗಳ ಪ್ರಮಾಣಗಳನ್ನು ಕಡಿಮೆ ಮಾಡುವುದು ಹಾಗೂ ಪ್ಲಾಸ್ಟಿಕ್‌ ರಹಿತ ಹೂಗುತ್ಛ, ಬಟ್ಟೆಯ ಬ್ಯಾನರ್‌ ಕಡ್ಡಾಯವಾಗಿ ಬಳಸುವಂತೆ ನಿರ್ದೇಶನ ನೀಡಲಾಗಿದೆ.

ಇದರಿಂದ ಸ್ವತ್ಛ ಅಭಿಯಾನಕ್ಕೆ ತಮ್ಮ ಅಮೂಲ್ಯ ಕೊಡುಗೆ ನೀಡಿದಂತಾಗುತ್ತದೆ. ಈ ಕ್ರಮಗಳನ್ನು ಅನುಸರಿಸುವುದರಿಂದ ಕಸವನ್ನು ಕಡಿಮೆ ಉತ್ಪತ್ತಿ ಹಾಗೂ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಲು ಸುಲಭವಾಗುತ್ತದೆ. ಈ ನಿಯಮವನ್ನು ಅನುಸರಿಸುವ ಪ್ರತಿ ಮದುವೆ ಮನೆಯವರಿಗೆ ಜಿಲ್ಲಾಧಿಕಾರಿಯವರಿಂದ ದೃಢಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದೆಂದು ಕಾಪು ಪುರಸಭಾ ಮುಖ್ಯಾಧಿಕಾರಿ ರಾಯಪ್ಪ ವಿನಂತಿಸಿದ್ದಾರೆ.

ಈ ಬಗ್ಗೆ ಸೆ. 9ರಂದು ನಡೆಯಲಿರುವ ವಿವಾಹ ಸಮಾರಂಭದ ಮನೆಯವರಾದ ಮಹಮ್ಮದ್‌ ಫಜಲುಲ್ಲಾ ಖಾಜಿ ಮತ್ತು ಕೌವರ್‌ ಖಾಜಿ ಅವರ ಮನೆಗೆ ಭೇಟಿ ನೀಡಿದ ಪುರಸಭಾ ಮುಖ್ಯಾಧಿಕಾರಿ ರಾಯಪ್ಪ ಅವರು ಮದುವೆ ಇನ್ನಿತರ ಸಮಾರಂಭಗಳಲ್ಲಿ ಪ್ಲಾಸ್ಟಿಕ್‌ ಸಹಿತ ಇನ್ನಿತರ ಪರಿಸರ ವಿನಾಶಕ ತ್ಯಾಜ್ಯ ವಸ್ತುಗಳನ್ನು ಬಳಸದಿರುವಂತೆ ಒತ್ತಾಯಿಸಿ, ಮಾಹಿತಿ ನೀಡಿ ಮನೆಯವರ ಸಹಕಾರ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next