Advertisement

ಅಂಬೇಡ್ಕರ್‌ ವಿಚಾರಧಾರೆ ಅನುಸರಿಸಿ

02:45 PM Dec 07, 2019 | Suhan S |

ರಾಮನಗರ: ಸಂವಿಧಾನ ಶಿಲ್ಪಿ ಡಾ ಬಿ.ಆರ್‌ ಅಂಬೇಡ್ಕರ್‌ ಅವರ ವಿಚಾರಧಾರೆಗಳು ದಿನದ ಆಚರಣೆಗೆ ಸೀಮಿತವಾಗದೇ ವರ್ಷ ಪೂರ್ತಿ ಆಚರಣೆಯಾಗಲಿ ಎಂದು ಜಿಲ್ಲಾಧಿಕಾರಿ ಎಂ. ಎಸ್‌ ಅರ್ಚನಾ ಸಲಹೆ ನೀಡಿದರು.

Advertisement

ಜಿಲ್ಲಾ ಕಚೇರಿಗಳ ಸಂಕೀರ್ಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ನಗರಸಭೆ, ಸಮಾಜ ಕಲ್ಯಾಣ ಇಲಾಖೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಡಾ. ಬಿ.ಆರ್‌ ಅಂಬೇಡ್ಕರ್‌ ಅವರ 63ನೇ ಪರಿ ನಿರ್ವಾಣ ದಿನದಂದು ಅಂಬೇಡ್ಕರ್‌ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಸಂವಿಧಾನದ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಜನಸಾಮಾನ್ಯರು ಸೇರಿ ದಂತೆ ಎಲ್ಲರು ಬದ್ದರಾಗಬೇಕು ಎಂದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾಯಣ್ಣ ಗೌಡ ಮಾತನಾಡಿ ತಾಂತ್ರಿಕ ಸೌಲಭ್ಯಗಳು ಹಾಗೂ ಕಂಪ್ಯೂಟರ್‌ ಬಳಕೆ ಇಲ್ಲದ ಕಾಲದಲ್ಲಿ ಸಂವಿಧಾನವನ್ನು ಡಾ. ಬಿ.ಆರ್‌ಅಂಬೇಡ್ಕರ್‌ ಅವರು ರಚಿಸಿದರು. ಅವರ ಜ್ಙಾನ ಮತ್ತು ಶ್ರಮ ಶ್ಲಾಘನೀಯ ಎಂದರು.

ಕಾನೂನಿನ ಮೂಲ ಸಂವಿಧಾನ: ಕಾಯ್ದೆಗಳು, ಕಾನೂನು, ಸರ್ಕಾರದ ಆದೇಶ, ಸುತ್ತೋಲೆ ಯಾವುದೇ ಇರಲಿ ಅದರ ಮೂಲ ಹುಡುಕುತ್ತಾ ಹೋದರೆ ಸಿಗುವುದು ಸಂವಿಧಾನ. ಇಂದು ದೇಶಸಂವಿಧಾನದಡಿಯಲ್ಲೇ ಕಾರ್ಯನಿರ್ವಹಿಸುತ್ತಿದೆ. ಸಂವಿಧಾನವನ್ನು ಸಾರ್ವಕಾಲಿಕವಾಗಿ ಸರ್ವರೂ ಒಪ್ಪುವಂತೆ ರಚಿಸಲಾಗಿದೆ ಎಂದರು. ನ್ಯಾಯಾಲಯದಲ್ಲಿ ನೀಡಲಾಗುವ ತೀರ್ಪು ಗಳಲ್ಲಿ ಸಂವಿಧಾನದ ಆಶಯಗಳ ಉಲ್ಲೇಖರುತ್ತದೆ. ದೇಶ, ರಾಜ್ಯ ಹಾಗೂ ಜಿಲ್ಲೆಯ ಅಭಿವೃದ್ಧಿಯಲ್ಲೂ ಸಂವಿಧಾನದ ಕೊಡುಗೆ ಇದೆ. ಸಂವಿಧಾನದಲ್ಲಿ ಆಶಯಗಳನ್ನು ಪಾಲಿಸಲು ಎಲ್ಲರೂ ಪಾರದರ್ಶಕವಾಗಿ ಕಾರ್ಯ ನಿರ್ವಸಬೇಕು ಎಂದರು.

ಕಾರ್ಯಕ್ರಮದಲ್ಲಿ ಎಸ್ಪಿ ಅನುಪ್‌ ಶೆಟ್ಟಿ, ಜಿಪಂ ಸಿಇಒ ಇಕ್ರಂ, ಅಪರ ಜಿಲ್ಲಾಧಿಕಾರಿ ಬಿ.ಪಿ. ವಿಜಯ್‌, ಉಪವಿಭಾಗಾಧಿಕಾರಿ ದಾಕ್ಷಾಯಿಣಿ, ತಾಪಂ ಅಧ್ಯಕ್ಷ ಗಾಣಕಲ್‌ ನಟರಾಜ್‌, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಚನ್ನಕೇಶವ, ಮುಖಂಡಾದ ಶಿವಶಂಕರ್‌, ಚಲುವರಾಜು, ಗೋವಿಂದರಾಜು, ಸೋಮಶೇಖರ್‌, ಶಿವ ಲಿಂಗಯ್ಯ, ಕೇಶವಮೂರ್ತಿ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next