Advertisement

ರಸ್ತೆ ಸಂಚಾರಿ ನಿಯಮ ಪಾಲಿಸಿ: ಮುರನಾಳ

02:46 PM Nov 28, 2020 | Suhan S |

ಮೂಡಲಗಿ: ರಸ್ತೆ ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸುವ ಮೂಲಕ ಅಪಘಾತಗಳಿಂದ ಮುಕ್ತರಾಗಬೇಕು ಎಂದು ಸಿಪಿಐ ವೆಂಕಟೇಶ ಮುರನಾಳ ಹೇಳಿದರು.

Advertisement

ಇಲ್ಲಿಯ ಲಯನ್ಸ್‌ ಕ್ಲಬ್‌ ಮೂಡಲಗಿ ಪರಿವಾರ ಹಾಗೂ ಪೊಲೀಸ್‌ ಇಲಾಖೆಯ ಸಹಯೋಗದಲ್ಲಿ ರಸ್ತೆ ಸುರಕ್ಷಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಾಹನ ಚಲಾಯಿಸುವಾಗ ತಾಳ್ಮೆ ಮತ್ತು ಜವಾಬ್ದಾರಿ ಇರಬೇಕು ಎಂದರು.

ಪ್ರತಿ ವರ್ಷ ದೇಶದಲ್ಲಿ ವಾಹನ ಅಪಘಾತಗಲ್ಲಿ 1.5 ಲಕ್ಷ ಜನರು ಸಾವನ್ನಪ್ಪುತ್ತಿದ್ದು, ಅದರಲ್ಲಿ ಯುವಕರಪ್ರಮಾಣ ಅ ಕವಾಗಿದೆ. ಮೊಬೈಲ್‌ ಬಳಕೆ, ಮದ್ಯ ಸೇವನೆ, ವಾಹನ ಚಲಾಯಿಸುವಾಗ ಸಂಭಾಷಣೆ ಮತ್ತು ರಸ್ತೆ ಚಿನ್ಹೆಗಳನ್ನು ಪಾಲಿಸಿದೆ ಇರುವುದು ಆಗಿದೆ ಎಂದರು. ಪಿಎಸ್‌ಐ ಮಲ್ಲಿಕಾರ್ಜುನ ಸಿಂಧೂರ ಮಾತನಾಡಿ, ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಿ ಅಪಘಾರ ರಹಿತ ಸಮಾಜವನ್ನು ನಿರ್ಮಿಸಲು ಮುಂದಾಗಬೇಕು ಎಂದರು.

ಲಯನ್ಸ್‌ ಕ್ಲಬ್‌ ಅಧ್ಯಕ್ಷ ಪುಲಕೇಶಿ ಸೋನವಾಲಕರ ಮಾತನಾಡಿ, ರಸ್ತೆ ಸರಕ್ಷತಾ ಅಭಿಯಾನದ ಉದ್ದೇಶ ಜನರಲ್ಲಿ ಮತ್ತು ವಾಹನ ಚಾಲಕರಲ್ಲಿ ಸಂಚಾರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ ಎಂದರು.

ನೂರಕ್ಕೂ ಅಧಿಕ ವಾಹನಗಳ ಹಿಂಬದಿಗೆ ರೇಡಿಯಂ ಪಟ್ಟಿ ಅಂಟಿಸಿ, ವಾಹನ ಚಾಲಕರಿಗೆಸಂಚಾರ ಜಾಗೃತಿ ಮೂಡಿಸಲಾಯಿತು. ಲಯನ್ಸ್‌ ಕ್ಲಬ್‌ ವಲಯ ಅಧ್ಯಕ್ಷ ವೆಂಕಟೇಶಸೋನವಾಲಕರ, ಲಯನ್ಸ್‌ ಡಿಸಿಗಳಾದ ಶ್ರೀಶೈಲ ಲೋಕನ್ನವರ, ಈರಣ್ಣ ಕೊಣ್ಣೂರ, ಮಲ್ಲಿನಾಥ ಶೆಟ್ಟಿ,ಸಂಜಯ ಮೋಕಾಸಿ, ಸಂಜಯ ಮಂದ್ರೋಳಿ, ಡಾ|ಎಸ್‌.ಎಸ್‌. ಪಾಟೀಲ, ಡಾ| ಪ್ರಕಾಶ ನಿಡಗುಂದಿ, ಡಾ| ಸಂಜಯ ಶಿಂ ಹಟ್ಟಿ, ಶಿವಾನಂದ ಕಿತ್ತೂರ, ವೆಂಕಟೇಶ ಪಾಟೀಲ, ಗಿರೀಶ ಆಸಂಗಿ, ಸಂದೀಪ ಸೋನವಾಲಕರ, ಮಹಾವೀರ ಸಲ್ಲಾಗೋಳ, ಸೋಮಶೇಖರ ಹಿರೇಮಠ, ವಿಶಾಲ ಶೀಲವಂತ, ಸುಪ್ರೀತ ಸೋನವಾಲಕರ, ಶಿವಬೋಧ ಯರಝರವಿ, ಪ್ರಮೋದ ಪಾಟೀಲ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next