ಚಿಂತಾಮಣಿ: ಎರಡು ವರ್ಷ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಮಾಡಿದ್ರೆ ಕೋವಿಡ್ ಸೋಂಕು ಹರಡುವುದನ್ನು ನಿಯಂತ್ರಿಸಬಹುದು ಎಂದು ವಿಶ್ವ ಹಿಂದೂ ಪರಿಷತ್‌ನ ಅವಳಿ ಜಿಲ್ಲೆಯ ಅಧ್ಯಕ್ಷ ಡಾ.ಸಿ.ಕೆ.ಶಿವಣ್ಣ ನುಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 7 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿ, ವಿಶ್ವ ಹಿಂದೂ ಪರಿಷತ್, ಪಂಡಿತ್‌ದೀನದಯಾಳ್ ಗ್ರಾಮೀಣಾಭಿ ವೃದ್ಧಿ ಸೇವಾ ಸಂಸ್ಥೆ ಸಹಕಾರದಿಂದ ತಾಲೂಕಿನ ಬಟ್ಲಹಳ್ಳಿ ಗ್ರಾಮದಲ್ಲಿ ನಿರ್ಗ ತಿಕರಿಗೆ, ಆಹಾರ, ಮಾಸ್ಕ್, ಸ್ಯಾನಿಟೈಸರ್ ನೀಡುವ ಕಾರ್ಯಕ್ಕೆ ಚಾಲನೆ ಮಾತನಾಡಿದರು.
ಬಡವ, ಶ್ರೀಮಂತ ಎನ್ನದೇ, ಎಲ್ಲರಿಗೂ ಸೋಂಕು ಹರಡುತ್ತದೆ. ಅದನ್ನು ತಡೆಯಬೇಕಾದರೆ ಪ್ರತಿಯೊಬ್ಬರೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಜೊತೆಗೆ ಅಂತರ ಕಾಯ್ದುಕೊಳ್ಳುಬೇಕು. ಸಾಬೂನಿಂದ ಕೈ ತೊಳೆದುಕೊಳ್ಳಬೇಕು ಎಂದರು.
ಕೈಲಾದ ಸೇವೆ: ಬಿಜೆಪಿ ತಾಲೂಕು ಅಧ್ಯಕ್ಷ ಶಿವಾರೆಡ್ಡಿ ಮಾತನಾಡಿ, ದೇಶ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದೆ. ಜನರನ್ನು ಜಾಗೃತಿ ಮೂಡಿಸುವ ಜೊತೆಗೆ ಸಂಕಷ್ಟದಲ್ಲಿರುವವರಿಗೆ ನಮ್ಮ ಕೈಲಾದ ಸಹಾಯ ಮಾಡುತ್ತಿದ್ದೇವೆ ಎಂದು ಹೇಳಿದರು.
ಬಟ್ಲಹಳ್ಳಿ ಗ್ರಾಮದಲ್ಲಿ ಆಶಾ, ಅಂಗನ ವಾಡಿ, ಆರೋಗ್ಯ ಕಾರ್ಯಕರ್ತರು ಸೇರಿ ಬಡವರಿಗೆ ಊಟದ ವ್ಯವಸ್ಥೆ ಮಾಡಿದರು. ಡಾ.ಶಿವಣ್ಣ ಅವರು ಗುಡಿಸಲಿನಲ್ಲಿಇರುವವರಿಗೆಊಟದಜೊತೆಗೆಮಾಸ್ಕ್,ಸ್ಯಾನಿಟೈಸರ್ ಆಹಾರ ಜೊತೆಗೆ ಹಣ ನೀಡುವ ಮೂಲಕ ಮಾನವೀಯತೆ ಮೆರೆದರು.
ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆಭಾಗ್ಯಮ್ಮ,ಮುಖಂಡಪಾರ್ಥನ್ನ, ಅಸಂಘಟಿತಕಾರ್ಮಿಕರ ಸಹಸಂಚಾಲಕ ವೆಂಕಟೇಶ, ಯುವ ಮುಖಂಡ ಎ.ಬಿ. ಮನೋಹರ್, ರಘು, ಬಿ.ಸಿ.ಮನೋಹರ್,ರಘುಸ್ವಾಮಿ,ಆಶಾ,ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.