Advertisement

ಜನಪದ ಸಾಹಿತ್ಯ ಆಕಾಶದಷ್ಟು ವಿಶಾಲ

06:48 PM Apr 24, 2021 | Team Udayavani |

ಹಿರಿಯೂರು: ಬಾಯಿಯಿಂದ ಬಾಯಿಗೆತಲೆಮಾರಿಗೆ ಸಾಗುತ್ತಿರುವ ಸಾಹಿತ್ಯದ ತಾಯಿಬೇರು ಜನಪದ. ಜನಪದ ಸಾಹಿತ್ಯದಲ್ಲಿಜೀವನದ ಮೌಲ್ಯಗಳು ಅಡಕವಾಗಿವೆ. ಅದುಮನುಷ್ಯನಿಗೆ ಬದುಕುವ ದಾರಿ ತೋರಿಸುತ್ತದೆ.ಜನಪದ ಸಾಹಿತ್ಯವು ಆಕಾಶದಷ್ಟು ವಿಶಾಲಹಾಗೂ ಸಾಗರದಷ್ಟು ಆಳವಾಗಿದೆ ಎಂದುವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಧರಣೇಂದ್ರಯ್ಯ ಹೇಳಿದರು.

Advertisement

ನಗರದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿಮಂಜುನಾಥ ಸ್ವಾಮಿ ಉರುಮೆ ಕಲಾ ಸಂಘಚೀಳಂಗಿ, ಚಿಕ್ಕಬೆನ್ನೂರು ಅಂಚೆ, ಚಿತ್ರದುರ್ಗಜಿಲ್ಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದಜನಪದ ಉತ್ಸವ-2021 ಕಾರ್ಯಕ್ರಮಉದ್ಘಾಟಿಸಿ ಮಾತನಾಡಿದ ಅವರು,ಜಾನಪದ ಸಾಹಿತ್ಯ ಉಳಿಸಿ ಬೆಳೆಸಿ ಮುಂದಿನಪೀಳಿಗೆಗೆ ಮೌಲ್ಯ ತಿಳಿಸಿಕೊಡುವ ಕಾರ್ಯಮಾಡಬೇಕಿದೆ ಎಂದು ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷ ಮಹಾಸ್ವಾಮಿಯವರು ಮಾತನಾಡಿ,ಹಳ್ಳಿಗಳಲ್ಲಿ ಮಾತ್ರ ಜಾನಪದ ಕಲೆಗಳುಇಂದಿಗೂ ಪ್ರಸ್ತುತವಾಗಿದ್ದು, ನಗರಪ್ರದೇಶದಲ್ಲಿ ಜಾನಪದ ಕಲೆಗಳು ನಶಿಸಿಹೋಗುತ್ತಿವೆ. ಕೊರೊನಾ ಕಲಾವಿದರಜೀವನವನ್ನು ಸಂಕಷ್ಟಕ್ಕೆ ಗುರಿ ಮಾಡಿದೆಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದಹಿರಿಯೂರು ಶಾಖೆಯ ಸಹ ಕಾರ್ಯದರ್ಶಿಬಿ.ಆರ್‌ಪಿ ಶ್ರೀನಿವಾಸ್‌ ಬಿ.ಆರ್‌. ಮಾತನಾಡಿ,ಜಾನಪದ ಕಲೆಯೆನ್ನುವುದು ಪುರಾತನಕಲೆ ಇದು ಜನರ ಸಂಸ್ಕೃತಿಯ ಪ್ರತೀಕಹಾಗೂ ಗ್ರಾಮೀಣ ಸೊಗಡಿನ ದೇಶೀಯಕಲೆ. ಜಾನಪದ ಎನ್ನುವುದು ಕಡಿಮೆಯಾಗಿಇಂದು ಡಿ.ಜೆ./ಆರ್ಕೆಸ್ಟ್ರಾಕ್ಕೆ ಜನರು ಮಾರುಹೋಗಿರುತ್ತಾರೆ. ಇದರಿಂದ ಹೊರಬರಬೇಕೆಂದು ತಿಳಿಸಿದರು.

ಮಂಜುನಾಥ ಸ್ವಾಮಿ ಉರುಮೆ ಸಂಘದಅಧ್ಯಕ್ಷ ಹನುಮಂತಪ್ಪನವರು ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಚ್‌.ಶಿವಮೂರ್ತಿ ಸಾಹಿತಿಗಳು, ಶಿಕ್ಷಕರುಹಾಗೂ ಜಿಲ್ಲಾ ಸಹಕಾರ್ಯದರ್ಶಿ ಕ.ಪ್ರಾ.ಶಾ.ಶಿ.ಸಂಘ, ಚಿತ್ರದುರ್ಗ, ಸೋಮಶೇಖರ್‌,ಶಿಕ್ಷಕರಾದ ರಾಘವೇಂದ್ರಾಚಾರ್‌, ಈರಣ್ಣಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next