Advertisement

ಜಾನಪದ ಶ್ರೀಮಂತ-ಸಂಸ್ಕಾರಯುತ ಸಂಸ್ಕೃತಿ: ಗೀತಾ

11:21 AM Sep 15, 2017 | Team Udayavani |

ಬೀದರ: ಭಾರತದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತ ಮತ್ತು ಸಂಸ್ಕಾರಯುತ ಸಂಸ್ಕೃತಿಯಾಗಿದೆ ಎಂದು ಸಾಂಸ್ಕೃತಿಕ ಸಂಪನ್ಮೂಲ ತರಬೇತಿ ಕೇಂದ್ರದ ಸದಸ್ಯೆ ವಿ.ಗೀತಾ ಹೇಳಿದರು.

Advertisement

ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಸಂಸ್ಕೃತಿ ಇಲಾಖೆ, ಅಕ್ಕಮಹಾದೇವಿ ಮಹಿಳಾ ಮಂಡಳದ ಆಶ್ರಯದಲ್ಲಿ ಡಾ|
ಮಧುರೈ ಷಣ್ಮುಗಪ್ಪ ಸುಬ್ಬಲಕ್ಷ್ಮೀ ಅವರ ಜನ್ಮ ಶತಮಾನೋತ್ಸವ ಹಾಗೂ ಕರ್ನಾಟಕ ಜಾನಪದ ಪರಿಷತ್‌ ಜಿಲ್ಲಾ ಮಹಿಳಾ ಘಟಕ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದು ಮಹಿಳೆಯರು ಪ್ರತಿ ಕ್ಷೇತ್ರದಲ್ಲಿ ಮುಂದಿದ್ದಾರೆ.

ಭಾರತದ ರಕ್ಷಣಾ ಸಚಿವೆಯಾಗುವ ಮೂಲಕ ನಿರ್ಮಲಾ ಸೀತಾರಾಮನ್‌ ಸ್ತ್ರೀಯರಿಗೆ ಮಾದರಿಯಾಗಿದ್ದಾರೆ. ಗ್ರಾಮೀಣ
ಮಹಿಳೆಯರು ಸಹ ಜಾನಪದ ಕ್ಷೇತ್ರದ ಮೂಲಕ ಮನೆಯಿಂದ ಹೊರಬಂದು ರಾಷ್ಟ್ರಮಟ್ಟದಲ್ಲಿ ಬೆಳೆಯಬೇಕು ಎಂದು ಕರೆ ನೀಡಿದರು.

ಬ್ರಹ್ಮಕುಮಾರಿ ಆಶ್ರಮದ ಪ್ರತಿಮಾ ಸಹೋದರಿ ಮಾತನಾಡಿ, ಮಹಿಳೆಯರಲ್ಲಿ ಅನೇಕ ಪ್ರಕಾರದ ಶಕ್ತಿ ಅಡಗಿದೆ. ಅದನ್ನು ಹೊರಹಾಕುವ ವ್ಯವಸ್ಥಿತ ಕಾರ್ಯವನ್ನು ಜಾನಪದ ಪರಿಷತ್ತು ಮಾಡುತ್ತಿದೆ.

ಮಹಿಳೆಯರು ಸ್ವಯಂ ಪ್ರೇರಣೆಯಿಂದ ಮನೆಯಿಂದ ಹೊರಬಂದು ತಮ್ಮ ಶಕ್ತಿ, ಜ್ಞಾನ ತೋರಿಸಬೇಕಾಗಿದೆ. ಮಮತೆ, ಕರುಣೆ, ಪ್ರೀತಿ ವಿಶ್ವಾಸಗಳನ್ನು ಮೈಗೂಡಿಸಿಕೊಂಡ ಮಹಿಳೆ ಮಕ್ಕಳನ್ನು ಸಂಸ್ಕಾರಯುತಳನ್ನಾಗಿ ಮಾಡಿ ದೇಶಕ್ಕೆ ಅರ್ಪಿಸುತ್ತಾಳೆ ಎಂದರು.

Advertisement

ರಾಷ್ಟ್ರೀಯ ಬುಡಕಟ್ಟು ಮತ್ತು ಜನಪದ ಕಲಾ ಪರಿಷತ್ತು ಕಾರ್ಯದರ್ಶಿ ರಾಜಕುಮಾರ ಹೆಬ್ಟಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಯುವಕರಿಗೆ ಸರ್ಕಾರ ಪ್ರತಿ ತಿಂಗಳು 5 ಸಾವಿರ ರೂ. ಶಿಷ್ಯ ವೇತನ ನೀಡಲು ಸಿದ್ಧವಿದೆ. ಆದರೆ, ಸರಿಯಾಗಿ ಜಾನಪದ ಹಾಡುಗಳನ್ನು ಹಾಡಲು ಪ್ರಯತ್ನಿಸಬೇಕು. ಜತೆಗೆ ಜಾನಪದ ಮೇಲೆ ಸಂಶೋಧನೆ ಮಾಡುವವರಿಗೆ 10 ಸಾವಿರ ರೂ. ನೀಡುಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮಹಿಳಾ ಘಟಕದ ಅಧ್ಯಕ್ಷ ಡಾ| ಧನಲಕ್ಷ್ಮೀ ಪಾಟೀಲ ಮಾತನಾಡಿದರು. ಪಶು ವಿವಿ ಆಡಳಿತ ಮಂಡಳಿ ಸದಸ್ಯೆ ಲುಂಬಿಣಿ ಗೌತಮ, ಜಾನಪದ ಪರಿಷತ್ತಿನ ಪ್ರಮುಖರಾದ ಎಸ್‌.ಬಿ. ಕುಚಬಾಳ, ಮಹಾರುದ್ರ ಡಾಕುಳಗಿ, ಸಂಜುಕುಮಾರ ಸ್ವಾಮಿ, ಪ್ರಕಾಶ ಕನ್ನಾಳೆ, ಶ್ರೀದೇವಿ ಹೂಗಾರ, ಮಲ್ಲಮ್ಮ ಸಂತಾಜಿ, ಸರ್ವಮಂಗಳಾ ಪರಶೆಟ್ಟಿ, ಮಹಾದೇವಿ ಬಿರಾದಾರ, ಸುನೀತಾ ದಾಡಗಿ, ಅಂಬಿಕಾ ಬಿರಾದಾರ. ಗೀತಾ ಮೂಲಗೆ ಇದ್ದರು. ನಿಲಗಂಗಾ ಹೆಬ್ಟಾಳೆ ಸ್ವಾಗತಿಸಿದರು.

ಮೀರಾ ಖೇಣಿ ನಿರೂಪಿಸಿದರು. ವಿಜಯಲಕ್ಷ್ಮೀ ಪರಶಾಣಿ ವಂದಿಸಿದರು. ಮಧ್ಯಾಹ್ನ ನಡೆದ ಸಂಗೀತ ಉತ್ಸವದಲ್ಲಿ ಖ್ಯಾತ ಕಲಾವಿದರು ಕಾರ್ಯಕ್ರಮ ನಡೆಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next