Advertisement

ಜಾನಪದ ಸಂಸ್ಕೃತಿಯ ಜೀವಾಳ

03:09 PM Mar 31, 2019 | pallavi |

ಸಿಂದಗಿ: ಜಾನಪದ ಕಲೆ ದೇಶಿಯ ಸಂಸ್ಕೃತಿಯ ಜೀವಾಳವಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ ಬಿ.ಎನ್‌. ಪಾಟೀಲ ಇಬ್ರಾಹಿಂಪುರ ಹೇಳಿದರು. ತಾಲೂಕಿನ ತಿಳಗೂಳ ಗ್ರಾಮದಲ್ಲಿ ಕರ್ನಾಟಕ ಜಾನಪದ ಪರಿಷತ್‌ ಜಿಲ್ಲಾ ಮತ್ತು ತಾಲೂಕು ಘಟಕದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಜಾನಪದ ಜಾತ್ರೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ನಮ್ಮ ದೇಶಿ ಸಂಸ್ಕೃತಿಯನ್ನು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಪ್ರಸಾರ ಮಾಡುವಲ್ಲಿ ಜಾನಪದ ಕಲೆ ಅತ್ಯಂತ ಮಹತ್ವ ಪಾತ್ರ ನಿರ್ವಹಿಸುತ್ತಿದೆ. ಜಾನಪದ ಕಲೆ ಕೇವಲ ಒಂದು ಮನರಂಜನೆ ನೀಡುವ ಕಲೆಯಾಗಿರದೆ ದೇಶಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲೆಯಾಗಿದೆ. ಇಂಥ ಕಲೆಯನ್ನು ಅರಿತು, ಭಾಗವಹಿಸಿ ಉಳಿಸಿಕೊಂಡು ಹೋಗುವಲ್ಲಿ ಯುವಕ-ಯುವತಿಯರ ಪಾತ್ರ ಮಹತ್ವದ್ದಾಗಿದೆ ಎಂದರು.

ಸರಕಾರದ ಯೋಜನೆಗಳಲ್ಲಿ ಜಾನಪದ ಕಲಾವಿದರಿಗೆ ಮೀಸಲಾತಿ ಸೌಲಭ್ಯ ನೀಡಬೇಕು. ಜಾನಪದ ಕಲೆಗಳು ಮುಂದಿನ ಪೀಳಿಗಳಿಗೆ ಉಳಿಯಬೇಕಾದರೆ ಸರಕಾರದ ಪಾತ್ರ ಪ್ರಮುಖವಾಗಿದೆ. ಮರೆಯಾಗುತ್ತಿರುವ ಜಾನಪದ ಕಲಾವಿದರಿಗೆ ಪ್ರೋತ್ಸಾಹದ ಜೊತೆಗೆ ಆರ್ಥಿಕ ನೆರವು ಅಗತ್ಯ. ಯುವ ಜಾನಪದ ಕಲಾವಿದರಿಗೆ ಹಾಗೂ ಜಾನಪದ ಕಲಾವಿದರ ಕುಟುಂಬದ ಮಕ್ಕಳಿಗೆ ಸರಕಾರಿ ಉದ್ಯೋಗ ಹಾಗೂ ಸರಕಾರಿ ಸೌಲಭ್ಯಗಳಲ್ಲಿ ಮೀಸಲಾತಿ ನೀಡುವುದು ಅಗತ್ಯ. ಜೊತೆಗೆ ಸಂಘ-ಸಂಸ್ಥೆಗಳ ಸಹಕಾರವು ಅಗತ್ಯವಿದೆ. ಜಾನಪದ ಸಾಹಿತ್ಯ ಉಳಿಸುವಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಕಜಾಪ ಜಿಲ್ಲಾ ಸಂಘಟನಾಕಾರ್ಯದರ್ಶಿ ಈರನಗೌಡ ಹಂದಿಗನೂರ ಮಾತನಾಡಿ, ಜಾನಪದ ಕಲಾವಿದರಿಗೆ ಸೂಕ್ತ ವೇದಿಕೆ ಸಿಗದೆ ಅವರು ಎಲೆ ಮರೆ ಕಾಯಿಯಂತಾಗಿದ್ದಾರೆ. ಅಂಥ ಜಾನಪದ ಕಲಾವಿದರನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಒದಗಿಸಿಕೊಡುವುದರ ಜೊತೆಗೆ ಅವರ ಜಾನಪದ
ಕಲೆ ಪ್ರೋತ್ಸಾಹಿಸುವ ಕೆಲಸ ಕರ್ನಾಟಕ ಜಾನಪದ ಪರಿಷತ್‌ ವಿಜಯಪುರ ಜಿಲ್ಲಾಧ್ಯಕ್ಷ ಪ್ರಾಧ್ಯಾಪಕ ಬಿ.ಎನ್‌. ಪಾಟೀಲ ಇಬ್ರಾಹಿಂಪುರ ಅವರು ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯಕ್ಕೆ ನಾವೇಲ್ಲರೂ ಕೈಜೊಡಿಸೋಣ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ 8 ತಂಡಗಳು ತಮ್ಮ ಕಲೆಯನ್ನು ಪ್ರದರ್ಶನ ಮಾಡಿದರು. ಕಲೆಯನ್ನು ಪ್ರದರ್ಶನ ಮಾಡಿದ ಜಾನಪದ ಕಲಾವಿದರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ರಮೇಶ ಪೂಜಾರ, ಮಹಾಂತೇಶ ನಾಗೋಜಿ, ಎಂ.ಬಿ. ಅಲ್ದಿ, ಶಂಕರ ಕಟ್ಟಿ, ಶ್ರೀಕಾಂತ ಕುಂಬಾರ, ಮಹೇಶ ತೆಗ್ಗೇಳ್ಳಿ, ಬಾಗೇಶ ಶಾಬಾದಿ, ಎ.ಬಿ. ಶೇಖ್‌ ಸೇರಿದಂತೆ ಕಲಾವಿದರು,
ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next