Advertisement
ಪಟ್ಟಣದ ಪ್ರವಾಸಿಗೃಹದಲ್ಲಿ ನಡೆಸಿದ ಸಂಘದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಜಾನಪದವನ್ನು ಗ್ರಾಮೀಣ ಅಬಿವೃದ್ಧಿ ಇಲಾಖೆ, ಪಾರಂಪರಿಕ ಕೌಶಲ್ಯ ಅಭಿವೃದ್ಧಿ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಜಾನಪದ ಪದವೀಧರರಿಗೆ ಅವಕಾಶ ಕಲ್ಪಿಸಬೇಕು ಎಂದು ಸಂಬಂಧಿಸಿದ ಇಲಾಖಾ ಸಚಿವರಲ್ಲಿ ಬೇಡಿಕೆ ಸಲ್ಲಿಸಬೇಕು ಎಂದು ನಿರ್ಧರಿಸಲಾಯಿತು. ಕರ್ನಾಟಕದಲ್ಲಿ ಹಲವು ದಶಕಗಳಿಂದ ಜಾನಪದ ಪದವೀಧರರಿಗೆ ಅನ್ಯಾಯ ಆಗುತ್ತಲೇ ಇದೆ. ಈ ಪದವಿ ಮುಗಿಸಿದವರಿಗೆ ಸರಕಾರದಲ್ಲಿ ವೃತ್ತಿ ಅವಕಾಶಗಳು ಅತಿ ಕಡಿಮೆಯಾಗಿದ್ದು,ಇರುವ ಕೆಲವೇ ಕೆಲವು ಅವಕಾಶಗಳನ್ನು ವಿವಿಧ ಪದವೀಧರರು ಕಿತ್ತುಕೊಳ್ಳುತ್ತಿದ್ದಾರೆ. ಇದನ್ನು ತಡೆಯಬೇಕು. ಜಾನಪದ ಪದವೀಧರರಿಗೆ ಹೊಸ ಹುದ್ದೆಗಳನ್ನು ಸೃಷ್ಟಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಸಭೆಯಲ್ಲಿ ಚರ್ಚಿಸಲಾಯಿತು.
Advertisement
ಹೋರಾಟಕ್ಕೆ ಜಾನಪದ ಪದವೀಧರರ ತೀರ್ಮಾನ
12:56 PM Dec 23, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.