Advertisement
ನಗರದ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತು ನವದೆಹಲಿ, ಕರ್ನಾಟಕಬರಹಗಾರರ ಮತ್ತು ಕಲಾವಿದರ ಸಂಘ ಬೀದರ ಹಾಗೂ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಹಿರಿಯ ಸಾಹಿತಿ ಎಂ.ಜಿ. ದೇಶಪಾಂಡೆ ಮಾತನಾಡಿ, ಜಾನಪದದಲ್ಲಿ ಕುಟ್ಟುವ, ಬೀಸುವ, ಬುಲಾಯಿ, ಸೋಬಾನೆ, ಒಡಪು, ನೃತ್ಯ, ಊಟೋಪಚಾರ, ಜಾತ್ರೆಗಳು ಮತ್ತು ಉತ್ಸವಗಳು ಹೀಗೆ ಅನೇಕ ರೀತಿಯ ಹಾಡುಗಳು ಇದರಲ್ಲಿವೆ. ಇವುಗಳನ್ನು ಮತ್ತೆ ಸಮಾಜದಲ್ಲಿ ಬೆಳೆಸಲು ಸರ್ವರೂ ದುಡಿಯಬೇಕು ಎಂದರು.
ಪ್ರಾಚಾರ್ಯ ಪ್ರೊ| ಮಧುಕರರಾವ್ ದೇಶಪಾಂಡೆ, ಹಾರುದ್ರ ಡಾಕುಳಗಿ, ಲಕ್ಷ್ಮಣರಾವ್ ಕಾಂಚೆ, ಎಸ್.ಬಿ. ಕುಚಬಾಳ, ಪ್ರಕಾಶ ಕನ್ನಾಳೆ, ಪ್ರೊ| ಸುಂದರರಾಜ್, ಡಾ| ವಿದ್ಯಾ ಪಾಟೀಲ, ಡಾ| ಮಹಾನಂದ ಮಡಕಿ, ಲುಂಬಿಣಿ ಗೌತಮ್, ಮಲ್ಲಿಕಾರ್ಜುನ ಬಾವಗಿ, ಶಿವಶರಣಪ್ಪ ಗಣೇಶಪೂರ, ಕಾಶಿನಾಥ ಬಡಿಗೇರ್, ಮೋಹನ ಪಾಟೀಲ, ಸವಿತಾ, ಪೂಜಾ, ದೀಪಿಕಾ, ಅನುರಾಧಾ, ಸುಮಿತ್ರಾ, ಪ್ರಿಯಂಕಾ, ನಂದಿನಿ ಸೇರಿದಂತೆ ಅನೇಕರು ಇದ್ದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಬೀದರನಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪಿಸಲು 20 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಆದರೆ ಕೆಲವು ಕಾರಣಗಳಿಂದ ವಿಶ್ವವಿದ್ಯಾಲಯ ಹಾವೇರಿ ಜಿಲ್ಲೆ ಶಿಗ್ಗಾವಿಗೆ ವರ್ಗಗೊಂಡು ಅಲ್ಲಿಯೇ ಸ್ಥಾಪನೆಯಾಯಿತು. ಆದ್ದರಿಂದ ನಮ್ಮ ಭಾಗದ ಎಲ್ಲ ಜಾನಪದ ಕಲಾವಿದರ ಆಶಯದಂತೆ ಜಿಲ್ಲಾ ಪಂಚಾಯತ್ ವತಿಯಿಂದ 10 ಎಕರೆ ಸ್ಥಳ ನೀಡಿದರೆ ಕೂಡಲೇ ಜಾನಪದ ವಿಶ್ವವಿದ್ಯಾಲಯ ಕಟ್ಟಡ ಕಾರ್ಯ ಆರಂಭಿಸುತ್ತೇವೆ. ಡಾ| ಜಗನ್ನಾಥ ಹೆಬ್ಟಾಳೆ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ