Advertisement

ಜಾನಪದ ಕಲೆಗಳಿಗೆ ನಾಡಿನಾದ್ಯಂತ ಮನ್ನಣೆ

12:48 PM Apr 13, 2018 | |

ಮಾಗಡಿ: ಜನಪದ ಕಲೆಗಳು ನಾಡಿನಾದ್ಯಂತ ಜನಮನ್ನಣೆಗಳಿಸಿದೆ ಎಂದು ಕನ್ನಡ ಸಂಸ್ಕೃತಿ ಇಲಾಖೆ ನಿವೃತ್ತ ಸಹಾಯಕ ನಿರ್ದೆಶಕ ತ್ಯಾಗರಾಜು ತಿಳಿಸಿದರು. ಕುದೂರು ಹೋಬಳಿ ಕಣ್ಣೂರಿನಲ್ಲಿ ಏರ್ಪಡಿಸಿದ್ದ ಆದಿಶಕ್ತಿ ಗ್ರಾಮದೇವತಾ ಜಾತ್ರಾ ಮಹೋತ್ಸವ ಹಾಗೂ ಅದ್ಧೂರು ಜಾನಪದ ಕಲಾಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಅಧುನಿಕ ತಂತ್ರಜ್ಞಾನದ ಭರಾಟೆಯ ನಡುವೆಯೂ ಜನಪದ ಕಲೆ ಜೀವಂತವಾಗಿರುವುದಕ್ಕೆ ಕಣ್ಣೂರು ಗ್ರಾಮ ಸಾಕ್ಷಿಯಾಗಿದೆ. ಎಂದರು.

Advertisement

ಜನಪದ ಕಲೆ, ಯಕ್ಷಗಾನ, ವೀರಗಾಸೆ, ಜವಳಿಕುಣಿತ, ಪೂಜಾ ಕುಣಿತ, ಪಟದ ಕುಣಿತ ಸೇರಿದಂತೆ ಅನೇಕ ಕಲೆಗಳು ಜನಸಾಮಾನ್ಯರಲ್ಲಿ ಹಾಸುಹೊಕ್ಕಾಗಿದೆ. ಸ್ನೇಹ, ವಿಶ್ವಾಸ, ಸೌಹಾರ್ದತೆ ಸಹಬಾಳ್ವೆ ಅಭಿರುಚಿಯ ಚಿಲುಮೆಯಾಗಿದೆ ಎಂದು ಹೇಳಿದರು.

ಗ್ರಾಮದ ಹಿರಿಯ ಮುಖಂಡ ಕಣ್ಣೂರು ಚಂದ್ರಶೇಖರ್‌ ಮಾತನಾಡಿ, ಪ್ರತಿವರ್ಷವೂ ನಡೆಯುವ ಮಾರಮ್ಮದೇವಿ, ಪಟ್ಟಲದಮ್ಮ ದೇವಿ ಜಾತ್ರೆ ಮಹೋತ್ಸವಗಳಲ್ಲಿ ಜನಪದ ಕಲಾ ಉತ್ಸವಗಳನ್ನು ಅದ್ಧೂರಿಯಾಗಿ ನಡೆಸಲಾಗುತ್ತಿದೆ. ವೀರಗಾಸೆ ನೃತ್ಯ ಗ್ರಾಮಸ್ಥರ ಕಣ್ಮನಸೆಳೆದಿದೆ. ಅದರಲ್ಲೂ ನಾಗಮಂಗಲದ ಲಿಂಗದ ವೀರ ಮಹದೇವಪ್ಪನವರ ವೀರಗಾಸೆ ನೃತ್ಯ ಜನರ ಹೊಗಳಿಕೆ ಪಾತ್ರವಾಗಿದೆ ಎಂದರು.

ಕಾಂಗ್ರೆಸ್‌ ಮುಖಂಡ ಕಣ್ಣೂರು ಜಯಶಂಕರ್‌ ಮಾತನಾಡಿ, ಇತ್ತೀಚಗೆ ಜನರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ಟಿ.ವಿ. ಮೊಬೈಲ್‌ಗ‌ಳಿಗೆ ಬಲಿಯಾಗಿ ಜನಪದ ಕಲೆಯನ್ನು ಮರೆಯುತ್ತಿದ್ದಾರೆ. ಸರ್ಕಾರ ಜನಪದ ಕಲೆಗೆ ಹೆಚ್ಚು ಒತ್ತು ನೀಡಬೇಕು. ಜೀವಂತ ಜನಪದ ಕಲೆಯನ್ನು ರಾಷ್ಟ್ರ ವ್ಯಾಪ್ತಿಯಲ್ಲಿ ಜಾಗೃತಗೊಳಿಸುವಂತ ಕಾರ್ಯಕ್ರಮವನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು. 

ಜನಪದ ಸಮಿತಿ ಅಧ್ಯಕ್ಷ ಕೆ.ಎಸ್‌.ಗುರುಮೂರ್ತಿ, ನಿವೃತ್ತ ಪೊಲೀಸ್‌ ಅಧಿಕಾರಿ ಕೆ. ನಾಗರಾಜು, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶಿವರುದ್ರಪ್ಪ, ರಾಷ್ಟ್ರ ಪ್ರಶಸ್ತಿ ವಿಜೇತ ಕುಮಾರಯ್ಯ, ಚಿಕ್ಕ ಸಿದ್ದಪ್ಪ, ಕೆ.ಆರ್‌. ಶರತ್‌ ಚಂದ್ರ, ನಿವೃತ್ತ ಶಿಕ್ಷಕ ಪ್ರಭುದೇವರ್‌, ಅಶ್ವತ್‌ ನಾರಾಯಣ್‌ ಸಿಂಗ್‌, ತಾಪಂ ಸದಸ್ಯ ಎಂ.ಜಿ.ನರಸಿಂಹಮೂರ್ತಿ, ವೆಂಕಟಾಚಲಯ್ಯ, ಎಲ್‌ಐಸಿ ಮಂಜುನಾಥ್‌, ಕಾಂಗ್ರೆಸ್‌ ಮುಖಂಡ ಕೆ.ಎನ್‌.ರವೀಂದ್ರ, ವೀರಣ್ಣ, ವಸಂತ ಕುಮಾರ್‌, ಕೃಷ್ಣಪ್ಪ, ಬುಡ್ಡಯ್ಯ, ಅನಿತಾ, ಕವಿತಾ, ಕುಸುಮಾ, ಜಯಶ್ರೀ ಇತರರು ಇದ್ದರು.

Advertisement

ಗಮನ ಸೆಳೆದ ಕಲಾತಂಡಗಳು: ಕಣ್ಣೂರು ಗ್ರಾಮದಲ್ಲಿ ಇಡೀ ರಾತ್ರಿ ಪಟ್ಟಲದಮ್ಮ ಮುತ್ತಿನ ಪಲ್ಲಕಿ ಉತ್ಸವ ನಡೆಯಿತು. ಚಿತ್ರದುರ್ಗ ಶಿವಕುಮಾರ್‌ ಅವರಿಂದ ಉರುಮೆ ಮತ್ತು ಕಹಳೆ ವಾದ್ಯ. ಕೋಲಾರದ ಮಂಜುನಾಥ್‌ ತಂಡದಿಂದ ತಮಟೆ ವಾದನ, ಕನಕಪುರ ಹನುಮಂತನಾಯಕ್‌ ಕಲಾ ತಂಡದಿಂದ ಪೂಜಾ ಕುಣಿತ, ಹಾಗೂ ಮಹಿಳಾ ತಂಡಗಳಿಂದ ಲಂಬಾಣಿ ನೃತ್ಯ,

ಮಾಗಡಿ ತಾಲೂಕಿನ ಪಿ.ಸಿ.ಪಾಳ್ಯದ ರವಿ ತಂಡದಿಂದ ಚಿಲಿಪಿಲಿ ಗೊಂಬೆ, ಹಾಸನದ ಅಂತಾರಾಷ್ಟ್ರೀಯ ಕಲಾವಿದ ಕುಮಾರಯ್ಯ ಮತ್ತು ಕಲಾ ತಂಡಗಳಿಂದ ಚಿಟ್ಟಿಮೇಳ, ಸ್ಥಳೀಯ ಕಲಾವಿದ  ಈರಣ್ಣ ಮತ್ತು ವಸಂತಕುಮಾರ್‌ ತಂಡದವರಿಂದು ಉರುಮೆ ಮತ್ತು ತಮಟೆ ವಾದನ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಿಕ್ಕನರಸಪ್ಪ ಮತ್ತು ತಂಡದಿಂದ ತಮಟೆ ವಾದನ,ದೊಡ್ಡಬಳ್ಳಾಪುರದ ಜಯರಾಮು ತಂಡದ ನೃತ್ಯಗಳು ಕಣ್ಮನ ಸೆಳೆದವು.

Advertisement

Udayavani is now on Telegram. Click here to join our channel and stay updated with the latest news.

Next