ಲೋಕಾಪುರ: ನಮ್ಮ ನಾಡಿನ ಪರಂಪರೆಯ ಸಂಸ್ಕೃತಿ ಕಲೆ ಬಿಂಬಿಸುವ ಜಾನಪದ ಕಲಾ ಮಹೋತ್ಸವದಂತಹ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಭಂಟನೂರ ಗ್ರಾಪಂ ಅಧ್ಯಕ್ಷ ಪ್ರಕಾಶ ಚಿತ್ತರಗಿ ಹೇಳಿದರು.
ಚಿಕ್ಕೂರ ಪಾಂಡುರಂಗ ದೇವಸ್ಥಾನ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ| ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಸಾಂಸ್ಕೃತಿಕ ಕಲಾ ವೇದಿಕೆ ಸಹಯೋಗದಲ್ಲಿ ನಡೆದ ಜಾನಪದ ಕಲಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಆಧುನಿಕ ಜಗತ್ತಿನಲ್ಲಿ ಜಾನಪದ ಕಲೆಗಳು ನಶಿಸಿ ಹೋಗುತ್ತಿರುವುದು ದೊಡ್ಡ ದುರಂತವಾಗಿದೆ. ಆದ್ದರಿಂದ ಜಾನಪದ ಕಲೆ ಜೀವಂತಗೊಳಿಸಲು ಕಲಾವಿದರು ಹಗಲಿರುಳು ಶ್ರಮಿಸುತ್ತಿದ್ದಾರೆ. ಸಂಘದ ಅಧ್ಯಕ್ಷ ಕೃಷ್ಣಾ ರಂಗಣ್ಣವರ ಅವರು ಕಲಾವಿದರನ್ನು ಗುರುತಿಸಿ ಜಾನಪದಂತಹ ಅಭೂತಪೂರ್ವ ಕಾರ್ಯಕ್ರಮ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರು, ಕಲಾವಿದರು ಹಾಗೂ ಗಣ್ಯರನ್ನು ಡಾ| ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.
ಜಾನಪದ ಕಲಾ ಮಹೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ರಂಜಿಸಿದರು. ಸಿದ್ದಾರೂಢಮಠದ ಶ್ರೀ ಗುರುಪಾದೇಶ್ವರ ಸ್ವಾಮೀಜಿ ಹಾಗೂ ಶ್ರೀ ಬಸಯ್ಯ ಮಠಪತಿ ಸಾನ್ನಿಧ್ಯ ವಹಿಸಿದ್ದರು.
ಭಂಟನೂರ ಗ್ರಾಪಂ ಉಪಾಧ್ಯಕ್ಷೆ ಕಲ್ಲವ್ವ ತಳವಾರ, ಸದಸ್ಯರಾದ ಸುನಂದಾ ದಾಸನಗೌಡರ, ದ್ಯಾವಪ್ಪ ಬಡಿಗೇರ, ಯಲ್ಲವ್ವ ಪೂಜಾರ, ಮಾರುತಿ ಮಾಂಗ, ಸಂಜು ಮಾದರ, ಹೇಮ-ವೇಮ ಕಮೀಟಿ ಅಧ್ಯಕ್ಷ ವೈ.ಜಿ. ದಾಸರಡ್ಡಿ, ಸಂಜು ದಾಸರಡ್ಡಿ, ಕಜಾಪ ಅಧ್ಯಕ್ಷೆ ವನಜಾಕ್ಷಿ ಮಂಟೂರ, ಕೆ.ಪಿ. ಯಾದವಾಡ, ಚಂದ್ರಕಾಂತ ರಂಗಣ್ಣವರ, ಸಂಘದ ಅಧ್ಯಕ್ಷ ಕೃಷ್ಣಾ ರಂಗಣ್ಣವರ ಇದ್ದರು.
ಬಸವರಾಜ ನಾಯ್ಕರ ಪ್ರಾರ್ಥಿಸಿದರು. ಹಣಮಂತ ಮಾಚಾ ಹಾಗೂ ಸತೀಶ ದಾಸರಡ್ಡಿ ನಿರೂಪಿಸಿದರು. ಎಲ್.ಎಚ್. ಖಜ್ಜಿಡೋಣಿ ವಂದಿಸಿದರು.