Advertisement

ಜಾನಪದ ಅಕಾಡೆಮಿ: 2021ನೇ ಸಾಲಿನ ಪ್ರಶಸ್ತಿ ಪ್ರಕಟ

11:51 PM Jan 21, 2022 | Team Udayavani |

ಬೆಂಗಳೂರು: ಜಾನಪದ ಅಕಾಡೆಮಿಯ 2021ನೇ ಸಾಲಿನ ಪ್ರಶಸ್ತಿ ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕರಗ ನೃತ್ಯ ಕಲಾವಿದ ವೆಂಕಟೇಶ ಬಂಗೇರ, ಉಡುಪಿಯ ನಾಟಿ ವೈದ್ಯೆ ಪದ್ಮಾವತಿ ಆಚಾರ್ಯ, ಕೊಡಗು ಪೊನ್ನಂಪೇಟೆಯ ಜೆ.ಕೆ. ಮರಿ ಸಹಿತ 30 ಸಾಧಕರು ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

Advertisement

ಹಾಸನದ ಡಾ| ಚಂದ್ರು ಕಾಳೆನಹಳ್ಳಿ ಹಾಗೂ ಉತ್ತರ ಕನ್ನಡದ ಡಾ| ಶ್ರೀಪಾದ ಶೆಟ್ಟಿ ಅವರನ್ನು ತಜ್ಞ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಶುಕ್ರವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ ಅವರು ಪಟ್ಟಿಯನ್ನು ಬಿಡುಗಡೆಗೊಳಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾರ್ಚ್‌ ತಿಂಗಳಲ್ಲಿ ವಿಜಯನಗರದಲ್ಲಿ ಹಮ್ಮಿಕೊಳ್ಳುವ ಚಿಂತನೆಯಿದೆ. ಗೌರವ ಪ್ರಶಸ್ತಿಯು 25 ಸಾ. ರೂ. ಹಾಗೂ ತಜ್ಞ ಪ್ರಶಸ್ತಿಯು 50 ಸಾ. ರೂ. ಸಹಿತ ಸ್ಮರಣಿಕೆ, ಫ‌ಲಕ, ಶಾಲು ಮುಂತಾದವುಗಳನ್ನು ಒಳಗೊಂಡಿದೆ ಎಂದು ಹೇಳಿದರು.

ಗೌರವ ಪ್ರಶಸ್ತಿ ಪುರಸ್ಕೃತರು
ಬೆಂಗಳೂರು ನಗರ (ಯಲಹಂಕ): ಗಂಗಮ್ಮ (ಸೋಬಾನೆ ಪದ),ಬೆಂಗಳೂರು ಗ್ರಾಮಾಂತರ ( ನೆಲಮಂಗಲ): ತಿಮ್ಮಯ್ಯ- ಜಾನಪದ ಕಥೆಗಾರ,ರಾಮನಗರ (ಕನಕಪುರ): ಚಿಕ್ಕಮ್ಮ-ಸೋಬಾನೆ ಪದ,ತುಮಕೂರು- ಕಡಬ ಶ್ರೀನಿವಾಸ: ಜಾನಪದ ಹಾಸ್ಯ ಜಾದೂಗಾರ,ಚಿಕ್ಕಬಳ್ಳಾಪುರ- ಗ.ನ. ಅಶ್ವತ್ಥ: ಜಾನಪದ ಗಾಯಕ, ಕೋಲಾರ- ನಾರಾಯಣ ಸ್ವಾಮಿ: ತತ್ವಪದ, ಶಿವಮೊಗ್ಗ (ಸಾಗರ ) : ಲಕ್ಷ್ಮೀ ರಾಮಪ್ಪ- ಹಸೆ ಚಿತ್ತಾರ,ಚಿತ್ರದುರ್ಗ(ಹೊಸದುರ್ಗ): ಚಂದ್ರಮ್ಮ- ಮದುವೆ ಹಾಡು, ದಾವಣಗೆರೆ (ಜಗಳೂರು ): ರಂಗಮ್ಮ- ಜಾನಪದ ಗಾಯಕಿ , ಮಂಡ್ಯ- ಮಹಾದೇವಸ್ವಾಮಿ: ನೀಲಗಾರರ ಪದ.

Advertisement

ಮೈಸೂರು (ನಂಜನಗೂಡು): ಮಹದೇವು-ಬೀಸು ಕಂಸಾಳೆ, ಹಾಸನ (ಅರಕಲಗೂಡು): ಎಚ್‌.ಎನ್‌. ರಾಮಯ್ಯ- ಕೀಲು ಕುದುರೆ, ದಕ್ಷಿಣ ಕನ್ನಡ (ಮೂಡಬಿದರೆ): ವೆಂಕಟೇಶ ಬಂಗೇರ- ಕರಗ ನೃತ್ಯ, ಚಾಮರಾಜ ನಗರ- ಆರ್‌.ಎಂ. ಶಿಮಲ್ಲೇಗೌಡ: ಗೊರವರ ಕುಣಿತ, ಚಿಕ್ಕಮಗಳೂರು (ಅಜ್ಜಂಪುರ)- ಹನುಮಕ್ಕ: ಅಂಧ ಕಲಾವಿದೆ (ತತ್ವಪದ), ಕೊಡಗು(ಪೊನ್ನಂಪೇಟೆ): ಜೆ.ಕೆ. ಮರಿ- ಜೇನುಕುರುಬರ ನೃತ್ಯ ಮತ್ತು ಹಾಡು, ಉಡುಪಿ- ಪದ್ಮಾವತಿ ಆಚಾರ್ಯ – ನಾಟಿ ವೈದ್ಯೆ, ಧಾರವಾಡ(ಕಲಘಟಗಿ ): ಕುಬೇರಗೌಡ ಮುರಳ್ಳಿ-ಜಗ್ಗಲಿಗೆ, ಗದಗ (ನರಗುಂದ): ರಾಮಚಂದ್ರಪ್ಪ ಸಿದ್ದಪ್ಪ- ಕರಡಿ ಮಜಲು, ವಿಜಯಪುರ (ತಾಳಿಕೋಟೆ): ನಾಗಲಿಂಗಪ್ಪ ಸಿದ್ರಾಮಪ- ಭಜನೆ.

ಬಾಗಲಕೋಟೆ (ಬೀಳಗಿ): ರಂಗಪ್ಪ ಬಾಲಪ್ಪ ಹಲಕುರ್ಕಿ- ಶಿವಭಜನೆ, ಹಾವೇರಿ (ಶಿಗ್ಗಾಂವ): ಸಿದ್ದಲಿಂಗಪ್ಪ ಚನ್ನಬಸಪ್ಪ- ತತ್ವಪದ, ಬೆಳಗಾವಿ- ರುದ್ರಾಂಬಿಕಾ ಮಹಾತೇಂಶ: ಲಾವಣಿ ಪದ, ಉತ್ತರ ಕನ್ನಡ (ಹಳಿಯಾಳ ): ಭೂಗೂಧಾಕೂ ಕೊಳಾಪ್ಪೆ- ಹೋಳಿ ಸಿಗ್ಮಾ ಕುಣಿತ, ಬಳ್ಳಾರಿ (ಕಂಪ್ಲಿ ) : ಪೆದ್ದ ಮಾರೆಕ್ಕ- ಬುರ್ರ ಕಥಾ, ರಾಯಚೂರು(ಸಿಂಧನೂರು): ಮರಿಯಪ್ಪ-ಭಜನೆ ಪದ, ಕೊಪ್ಪಳ (ಕಾರಟಗಿ): ಶಿವಲಿಂಗಪ್ಪ- ಹಗಲು ವೇಷ, ಕಲಬುರಗಿ- ಶಕುಂತಲಾ: ಗೀಗೀ ಪದ, ಬೀದರ್‌ ( ಹುಮನಾಬಾದ): ಸಿದ್ರಾಮ- ಗೋಂದಳಿ ಪದ, ಯಾದಗಿರಿ (ಸುರಪುರ): ಭೂಮ್ಮಣ್ಣ ಬಸಪ್ಪ ಲಾಠಿ- ಡೊಳ್ಳು ಕುಣಿತ ತಜ್ಞ ಪ್ರಶಸ್ತಿ ಪುರಸ್ಕೃತರು: ಹಾಸನದ ಚನ್ನರಾಯಪಟ್ಟಣದ ಡಾ| ಚಂದ್ರು ಕಾಳೆನಹಳ್ಳಿ (ಡಾ| ಜಿ.ಶಂ.ಪ ಪ್ರಶಸ್ತಿ ಪುರಸ್ಕೃತರು) ಹಾಗೂ ಉತ್ತರ ಕನ್ನಡ ಹೊನ್ನಾವರದ ಡಾ| ಶ್ರೀಪಾದ ಶೆಟ್ಟಿ (ಡಾ| ಬಿ.ಎಸ್‌. ಗದ್ದಿಗಿಮಠ ಪ್ರಶಸ್ತಿ ಪುರಸ್ಕೃತರು)

Advertisement

Udayavani is now on Telegram. Click here to join our channel and stay updated with the latest news.

Next