Advertisement

ಶತಾಯುಷಿ ಕೊರಗ ಡೋಲು ವಾದಕರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ

10:32 AM Dec 12, 2017 | |

ಉಡುಪಿ: ಕೊರಗ ಸಮುದಾಯದವರು ನುಡಿಸುವ ವಾದ್ಯ ಕಡ್ಡಾಯಿ (ಡೋಲು) ಕಲಾವಿದ ಹಿರಿಯಡಕ -ಗುಡ್ಡೆಅಂಗಡಿಯ ಗುರುವ ಅವರು ಜನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರು ಕೊರಗ ಬುಡಕಟ್ಟು ಸಮಾಜಕ್ಕೆ ಸೇರಿದವರು. 

Advertisement

 102 ವರ್ಷ ವಯಸ್ಸು ದಾಟಿರುವ ಗುರುವ 12ನೇ ವಯಸ್ಸಿನಲ್ಲಿಂದಲೂ ಡೋಲು ವಾದನ ಮತ್ತು ಬುಟ್ಟಿ ಹೆಣೆಯುವ ಕಾಯಕದಲ್ಲಿ ತೊಡಗಿಕೊಂಡವರು. ಸಾಂಪ್ರದಾಯಿಕ ಡೋಲು ಬಾರಿಸುವಿಕೆಯಲ್ಲಿ ಅಪ್ರತಿಮ ಪ್ರತಿಭೆ ಇವರದು. 

ಶ್ರೀಕೃಷ್ಣ ಮಠದಲ್ಲಿ ಕಳೆದ ವರ್ಷ ನಡೆದ ಸಂಸ್ಕೃತ ಸಮ್ಮೇಳನದ ಅಂಗವಾಗಿ ಗುಡ್ಡೆಅಂಗಡಿಯಲ್ಲಿ ನಡೆದ ಸಂಸ್ಕೃತ ಸಂಭಷಣಾ ಶಿಬಿರದಲ್ಲಿ ಇವರು ಪಾಲ್ಗೊಂಡಿದ್ದರು. ಉಡುಪಿಯ ವಿದ್ಯೋದಯ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಇವರು ಇವರು ಪೇಜಾವರ ಶ್ರೀಗಳ ಜತೆ “ಮಮ ನಾಮ ಗೊರವಃ’ ಎಂದು ಹೇಳಿ ಸಭೆಯಲ್ಲಿ ರೋಮಾಂಚನ ಉಂಟು ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.