Advertisement
ಸ್ವ ಹಿತಾಸಕ್ತಿ ಮತ್ತು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಶಿವಾನಂದ ದೊಡ್ಮನಿ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ದಸಂಸ, ಕರವೇ(ಪ್ರವೀಣ ಶೆಟ್ಟಿ ಬಣ) ಹಾಗೂ ಯುವಕರು ಆರೋಪಿಸಿದರು.
Related Articles
Advertisement
ಜಿಲ್ಲಾಸ್ಪತ್ರೆಯಲ್ಲಿ ಕಳೆದ 20 ವರ್ಷಗಳಿಂದ ವರ್ಗವಾಗದೇ, ರೋಗಿಗಳಿಂದ ಹಣ ಪಡೆದು ಚಿಕಿತ್ಸೆ ನೀಡುವ ವೈದ್ಯನಿದ್ದಾನೆ. ಅವರನ್ನು ಮೊದಲು ವರ್ಗಾಯಿಸಲಿ ಎಂದು ಸಹಾಯಕ ಕಮಿಷನರ್ ಅಭಿಜಿನ್ ಅವರಲ್ಲಿ ವಿನಂತಿಸಿಕೊಳ್ಳಲಾಯಿತು.
ಈಗ ಎಂಬಿಬಿಎಸ್ ಕಾಲೇಜಿನಲ್ಲಿ ಮೂರನೇ ಬ್ಯಾಚ್ ಅಧ್ಯಯನ ಮಾಡುತ್ತಿದೆ. ಒಂದು ಬ್ಯಾಚ್ ಈ ವರ್ಷ ಎಂಬಿಬಿಎಸ್ ಪೂರ್ಣಗೊಳಿಸಲಿದೆ. ಅಲ್ಲದೇ ಹೊಸದಾಗಿ ಎಂಬಿಬಿಎಸ್ ಕಲಿಕೆಯ ಬ್ಯಾಚ್ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಸರ್ಕಾರ 150 ಕೋಟಿ ರೂ, ಅನುದಾನ ನೀಡಿ ಹೊಸದಾಗಿ 450 ಬೆಡ್‌ನ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದೆ. ಮೆಡಿಕಲ್ ಕಾಲೇಜು ಬಂದ ನಂತರ ಪರೋಕ್ಷವಾಗಿ ಉದ್ಯೋಗ ಅವಕಾಶ ಹೆಚ್ಚಿವೆ. ವ್ಯಾಪಾರ ವಹಿವಾಟು, ಪ್ರವಾಸೋದ್ಯಮದ ಮೇಲೆ ಹೊಸ ಬೆಳಕು ಬಿದ್ದಿದೆ. ಟ್ರಾಮಾ ಸೆಂಟರ್, ಕ್ಯಾನ್ಸರ್ ಘಟಕ ಬರಲಿವೆ. ಸಿಟಿ ಸ್ಕ್ಯಾನರ್ ಎಲ್ಲಾ ವರ್ಗದ ಜನರಿಗೆ ಉಚಿತ ಸೇವೆ ನೀಡುತ್ತಿದೆ. ಡಯಾಲಿಸಿಸ್ ಘಟಕ, ಬ್ಲಿಡ್ ಬ್ಯಾಂಕ್ ಉತ್ತಮ ಸ್ಥಿತಿಯಲ್ಲಿವೆ. 60ಕ್ಕೂ ಹೆಚ್ಚು ವೈದ್ಯರ ಸೇವೆ ಜಿಲ್ಲೆಯ ಬಡ ರೋಗಿಗಳಿಗೆ ಸಿಗುತ್ತಿದೆ ಎಂದು ಕಿಮ್ಸ್ ಪರ ಸಂಘಟನೆಗಳು ಮನವಿಯಲ್ಲಿ ವಿವರಿಸಿವೆ.
ಕರವೇ, ದಸಂಸದವರು ಶಿವಾನಂದ ದೊಡ್ಮನಿ ವರ್ಗಾವಣೆ ವಿರೋಧಿಸಿ ಪ್ರತಿಭಟಿಸಿದರು. ಅಹವಾಲು ಆಲಿಸಿದ ಉಪ ವಿಭಾಗಾಧಿಕಾರಿ ಅಭಿಜಿನ್ ವಿವಿಧ ಸಂಘಟನೆಗಳು ಸಲ್ಲಿಸಿದ ಮನವಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.
ಮನವಿ ನೀಡಿದ ನಂತರ ಎಂಬಿಬಿಎಸ್ ಕಾಲೇಜಿಗೆ ತೆರಳಿದ ಸಂಘಟನೆಗಳು ನಿರ್ದೇಶಕರಿಗೆ ಹೂವಿನ ಹಾರ ಹಾಕಿ ನೈತಿಕ ಬೆಂಬಲ ಸೂಚಿಸಿದವು.