Advertisement

ರೇಷ್ಮೆಗೆ ಬೆಂಬಲ ಬೆಲೆ ಘೋಷಿಸಲು ಪಟ್ಟು

06:45 AM Jul 09, 2020 | Lakshmi GovindaRaj |

ಕನಕಪುರ: ಕೋವಿಡ್‌ 19 ಆರ್ಭಟದಿಂದ ರೇಷ್ಮೆ ಬೆಲೆ ಕುಸಿದಿದ್ದು ಕಂಗಾಲಾಗಿರುವ ಬೆಳೆಗಾರರಿಗೆ ಕೂಡಲೇ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಕಬ್ಟಾಳೆಗೌಡ ಸರ್ಕಾರವನ್ನು  ಒತ್ತಾಯಿಸಿದರು. ನಗರದ ರೇಷ್ಮೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಖಂಡಿಸಿ ಪ್ರತಿಭಟನೆ ನಡೆಸಿ ಮಾರುಕಟ್ಟೆ ಉಪನಿರ್ದೇಶಕ ಬಿ.ವಿ. ವೆಂಕಟರಾಮು ಅವರ ಮೂಲಕ ಸರ್ಕಾ ರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು.

Advertisement

ರಾಜ್ಯದಲ್ಲಿ ರೇಷ್ಮೆ ಬೆಳೆ  ನಂಬಿಕೊಂಡು ಅನೇಕ ರೈತ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಆದರೆ ಕೋವಿಡ್‌ 19ದಿಂದ ಇತ್ತೀಚೆಗೆ ಬೆಲೆ ಪಾತಾಳ ಸೇರಿದೆ. ಮಾರಾಟಕ್ಕಿಂತ ಉತ್ಪಾದನಾ ವೆಚ್ಚವೇ ಅಧಿಕವಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಹೊರರಾಜ್ಯಗಳಲ್ಲಿ  ಕೋವಿಡ್‌ 19ದಿಂದ ನೇಕಾರಿಕೆ ಸ್ಥಗಿತಗೊಂಡಿದ್ದು ರಫ್ತಾಗುತ್ತಿದ್ದ 20ಟನ್‌ ರೇಷ್ಮೆ ನೂಲು ಬಳಕೆಯಾಗುತ್ತಿಲ್ಲ.

ನೂಲು ಬಿಚ್ಚಾಣಿಕೆದಾರರ ಬಳಿ ಹಣ ವಿಲ್ಲದೆ ಒಂದು ಕೆ.ಜಿ.ಗೂಡನ್ನು 100.200 ರೂ. ಗಳಿಗೆ ಮಾರಾಟ ಮಾಡುವ  ಅನಿವಾರ್ಯ ಎದುರಾಗಿದೆ. ಹೀಗಾಗಿ ಸರ್ಕಾರ ರೈತರ ಹಿತ ಕಾಯಲು ಕೃಷಿ ತಜ್ಞ ಸ್ವಾಮಿನಾಥನ್‌ ವರದಿ ಪ್ರಕಾರ ರೇಷ್ಮೆ ಪ್ರತಿ ಕೆ.ಜಿ.ಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಚೀನಾ ರೇಷ್ಮೆ ಆಮದನ್ನು ನಿರ್ಬಂಧಿಸಬೇಕು.  ಹೈನೋದ್ಯಮಕ್ಕೆ ಪ್ರೋತ್ಸಾಹ ಧನ ನೀಡಬೇಕು.

ರಾಜ್ಯದ ಪ್ರತಿ ಆಯವ್ಯಯದಲ್ಲಿ 500 ಕೋಟಿ ರೂಗಳ ಅನುದಾನ ನೀಡಬೇಕು. ರೇಷ್ಮೆ ತೋಟಗಳ ನಿರ್ವಹಣೆಗೆ ನರೇಗಾದಲ್ಲಿ ಪ್ರತಿ ಎಕರೆಗೆ 50.ಸಾವಿರ ಕೂಲಿ ಮತ್ತು ಇತರೆ ವೆಚ್ಚ ಸಿಗುವ ರೀತಿಯಲ್ಲಿ ಯೋಜನೆ  ರೂಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಸಂಘದ ಉಪಾಧ್ಯಕ್ಷ ಜೈರಾಮೇಗೌಡ, ರೀಲರ್‌ ಅಸೋಷಿಯೇಷನ್‌ ನಿರ್ದೇಶಕ ಬಸವರಾಜು, ರೇಷ್ಮೆ ಬೆಳೆಗಾರರಾದ ರಾಮ ಕೃಷ್ಣ, ಶಿವಣ್ಣ, ವೆಂಕಟೇಶ್‌, ಪುಟ್ಟಸ್ವಾಮೇ ಗೌಡ, ರಾಜಣ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next