Advertisement
ವಾಡಿಕೆಯಂತೆ ಸಾಮಾನ್ಯವಾಗಿ ಅಕ್ಟೋಬರ್ ಎರಡನೇ ವಾರದಲ್ಲಿ ಹಿಂಗಾರು ಮಾರುತ ಅಪ್ಪಳಿಸುತ್ತದೆ. ಕಳೆದ 5 ವರ್ಷಗಳಿಗೆ ಹೋಲಿಸಿದರೆ 2016ರಲ್ಲಿ ಅ. 28 ರಂದು, 2017ರಲ್ಲಿ ಅ. 11ರಂದು, 2018ರಲ್ಲಿ ಅ. 21ರಂದು, 2019ರಲ್ಲಿ ಅ. 16ರಂದು ಹಿಂಗಾರು ಪ್ರವೇಶಿಸಿತ್ತು. ನಾಲ್ಕು ವರ್ಷದ ಬಳಿಕ ಈ ಬಾರಿ ಅ. 28ರಂದು ಹಿಂಗಾರು ಕಾಲಿಟ್ಟಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿಂಗಾರು ಮೇಲೆ ಪರಿಣಾಮ ಬೀರಿತ್ತು. ಇದೇ ಕಾರಣಕ್ಕೆ ತುಸು ತಡವಾಗಿ ಹಿಂಗಾರು ಅಪ್ಪಳಿಸಿದೆ.
ಕರಾವಳಿ ಪ್ರದೇಶಗಳು ಮಾತ್ರವಲ್ಲದೇ ಬಯಲು ಪ್ರದೇಶಗಳಲ್ಲೂ ಮಂಜು ಮುಸುಕಿದ ವಾತಾರಣ ಇದ್ದು ಇದು ಮಳೆಯ ಮುನ್ಸೂಚನೆಯೋ ಅಥವಾ ಮಳೆ ದೂರವಾಗಿ ಚಳಿಗಾಲ ಆರಂಭವಾಗುವುದರ ಮುನ್ಸೂಚನೆಯೋ ಎಂಬ ಆತಂಕ ಜನರನ್ನು ಕಾಡತೊಡಗಿದೆ. ಸುಳ್ಯದ ವಿವಿಧೆಡೆ ಮಳೆ
ಸುಳ್ಯ: ತಾಲೂಕಿನ ವಿವಿಧೆಡೆ ಮಂಗಳವಾರ ರಾತ್ರಿ ಗುಡುಗು ಸಹಿತ ಸ್ವಾತಿ ಮಳೆ ಸುರಿದಿದೆ. ಮಡಪ್ಪಾಡಿಯಲ್ಲಿ ಗರಿಷ್ಠ 33 ಮಿ.ಮೀ. ಮಳೆಯಾಗಿದೆ.
Related Articles
ಹವಾಮಾನ ಇಲಾಖೆ ಅಧಿಕಾರಿಗಳು ಹೇಳುವಂತೆ ರಾಜ್ಯದಲ್ಲಿ ಈ ಬಾರಿ ವಾಡಿಕೆಯಂತೆ ಹಿಂಗಾರು ಮಳೆ ಸುರಿಯುವ ಸಾಧ್ಯತೆ ಇದೆ. ಹಿಂಗಾರು ಸಮಯದಲ್ಲಿ ಅಂದರೆ ಅಕ್ಟೋಬರ್ 1 ರಿಂದ ಡಿಸೆಂಬರ್ ಅಂತ್ಯದವರೆಗೆ ಕಳೆದ ವರ್ಷ ರಾಜ್ಯದಲ್ಲಿಯೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.157ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.74 ಮತ್ತು ಉಡುಪಿ ಜಿಲ್ಲೆಯಲ್ಲಿ ಶೇ. 136ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿತ್ತು. ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಕರಾವಳಿ ಭಾಗದಲ್ಲಿ ಇಷ್ಟೊಂದು ಪ್ರಮಾಣದ ಮಳೆ ಸುರಿದಿದ್ದು, ಕಳೆದ ವರ್ಷ.
Advertisement