Advertisement
ಕಳೆದ ಎರಡು ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ ಅಧಿಕ ಚಳಿ ಆವರಿಸಿದ್ದು, ಬುಧವಾರವಂತೂ ಕಳೆದ ಮೂರು ವರ್ಷಗಳಲ್ಲೇ ಪ್ರಸಕ್ತ ವರ್ಷ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿದೆ. ಡಿ. 18ರಂದು 13 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದ ತಾಪಮಾನ, ಡಿ. 19ರಂದು 9.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ನಸುನಿಂದಲೇ ಅತ್ಯಧಿಕ ಮಂಜು ಆವರಿಸಿದ ಕಾರಣ ಇಡಿ ದಿನ ವಿಜಯಪುರದ ಬಹುತೇಕ ಭಾಗದಲ್ಲಿ ಸೂರ್ಯ ದರ್ಶನವೇ ಇಲ್ಲವಾಗಿತ್ತು.
ಕಟ್ಟಡಗಳೆಲ್ಲ ಭಾರಿ ಪ್ರಮಾಣದ ಮಂಜು ಅವರಿಸಿ, ಸಂಪೂರ್ಣ ಮಂಜಿನಲ್ಲೇ ಮುಳುಗಿದ್ದರಿಂದ ಮಧ್ಯಾಹ್ನದವರೆಗೂ ಚಳಿಗೆ ನಡುಗುವಂತಾಗಿದ್ದವು. ನಿತ್ಯವೂ ಸೂರ್ಯೋದಯಕ್ಕೆ ಮುನ್ನವೇ ಗೋಲಗುಮ್ಮಟ ಆವರಣಕ್ಕೆ ವಾಯು ವಿಹಾರಕ್ಕೆ ಬರುತ್ತಿದ್ದ ಸಾರ್ವಜನಿಕರು ಬುಧವಾರ ಕಡಿಮೆ ತಾಪಮಾನ ಹಾಗೂ ಚಳಿ ಅಧಿಕ ಇದ್ದ ಕಾರಣ ಬೆಳಗ್ಗೆ 9ಕ್ಕೆ ಮನೆಯಿಂದ ಹೊರಬಂದರೂ ಮಂಜಿನಿಂದ ಆವರಿಸಿದ್ದ ಮೋಡದ ಹೊದಿಕೆ ಹೊದ್ದಿದ್ದ ಗೋಲಗುಮ್ಮಟ ಕಾಣೆಯಾದ ಅಪರೂಪದ ದೃಶ್ಯ ಸೃಷ್ಟಿಯಾಗಿತ್ತು.
Related Articles
Advertisement
ಇನ್ನು ಇದೇ ಕೇಂದ್ರದ ಹವಾಮಾನ ತಾಂತ್ರಿಕ ಅಧಿಕಾರಿ ಡಾ| ಶಂಕರ ಕುಲಕರ್ಣಿ ಅವರ ಪ್ರಕಾರ ಕಳೆದ ಮೂರ್ನಾಲ್ಕುವರ್ಷಗಳಿಂದ ಕಡಿಮೆ ಮಳೆಯಾಗಿದ್ದು, ಪ್ರಸಕ್ತ ವರ್ಷವೂ ಅತ್ಯಂತ ಕಡಿಮೆ ಮಳೆಯಾಗಿದೆ. ಇದರಿಂದ ಕಪ್ಪು ಮಣ್ಣಿನ
ಈ ಪ್ರದೇಶದಲ್ಲಿ ತೇವಾಂಶ ಪ್ರಮಾಣ ಕಡಿಮೆಯಗುವ ಕಾರಣ ಇಂಥ ವಾತಾವಣರ ಸೃಷ್ಟಿಯಾಗುತ್ತದೆ.