ಕಾಪು: ಕಾಪು ತಾಲೂಕಿನ ಗ್ರಾಮೀಣ ಭಾಗದಲ್ಲಿ ಸೋಮವಾರ ಮುಂಜಾನೆ ಮಂಜು ಮುಸುಕಿದ ವಾತಾವರಣ ಕಂಡು ಬಂದಿದೆ.
ಕಾಪು, ಮಲ್ಲಾರು, ಎಲ್ಲೂರು, ಕುಂಜೂರು, ಬೆಳಪು, ಉಚ್ಚಿಲ, ಮೂಳೂರು ಸಹಿತ ವಿವಿಧ ಗ್ರಾಮಗಳ ಬೈಲು ಪ್ರದೇಶಗಳಲ್ಲಿ ಮಂಜಿನ ಪ್ರಭಾವ ಹೆಚ್ಚಾಗಿ ಕಾಣಿಸಿದೆ.
ಸೂರ್ಯೋದಯದ ನಂತರದಲ್ಲಿ ಏಕಾಏಕಿಯಾಗಿ ಕಾಣಿಸಿಕೊಂಡ ಮಂಜು ಮುಸುಕಿದ ವಾತಾವರಣದಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರಕ್ಕೂ ಅಡತಡೆಯುಂಟಾಯಿತು.
ಇದನ್ನೂ ಓದಿ:ಕರೆಂಟ್ ಶಾಕ್ ಬೇಡ : ಮೂರನೇ ಬಾರಿ ವಿದ್ಯುತ್ ದರ ಏರಿಕೆ ಪ್ರಸ್ತಾವಕ್ಕೆ ಜನ ವಿರೋಧ
ಬೇಸಗೆಯ ಹೊತ್ತಲ್ಲಿ ಮಂಜು ಕಾಣಿಸಿಕೊಂಡಿರುವುದು ಮಾವು, ಹಲಸು, ಗೇರು ಸಹಿತ ವಿವಿಧ ಬೆಳೆಗಳಿಗೆ ಮಾರಕವಾಗಿದ್ದು, ಅನಿರೀಕ್ಷಿತ ಮಂಜು ಪ್ರಾಕೃತಿಕ ವೈಪರೀತ್ಯಕ್ಕೂ ಕಾರಣವಾಗಬಹುದು ಎಂಬ ಅಭಿಪ್ರಾಯ ಗ್ರಾಮೀಣ ಜನರಿಂದ ವ್ಯಕ್ತವಾಗಿದೆ.