Advertisement

ಲಾಲು ಶಿಕ್ಷೆ ಪ್ರಮಾಣ ಪ್ರಕಟನೆ ಮತ್ತೆ ಮುಂದಕ್ಕೆ, ಶುಕ್ರವಾರ

05:04 PM Jan 04, 2018 | udayavani editorial |

ರಾಂಚಿ : ಬಹುಕೋಟಿ ಮೇವು ಹಗರಣದಲ್ಲಿ ಅಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯದಿಂದ ಘೋಷಿಸಲ್ಪಟ್ಟಿರುವ ಬಿಹಾರ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ಮುಖ್ಯಸ್ಥ, ಲಾಲು ಪ್ರಸಾದ್‌ ಯಾದವ್‌ ಅವರಿಗೆ ಶಿಕ್ಷೆಯ ಪ್ರಮಾಣ ಪ್ರಕಟವಾಗುವುದನ್ನು ನಾಳೆ ಶುಕ್ರವಾರದ ವರೆಗೆ ಮುಂದೂಡಲಾಗಿದೆ.

Advertisement

21 ವರ್ಷಗಳ ಹಿಂದೆ ದೇವಗಢ ಸರಕಾರಿ ಖಜಾನೆಯಿಂದ 89.27 ಲಕ್ಷ ರೂ.ಗಳನ್ನು ಅಕ್ರಮವಾಗಿ ಪಡೆದುಕೊಂಡ ಆರೋಪಕ್ಕೆ ಸಂಬಂಧಿಸಿದ ಕೇಸಿನಲ್ಲಿ ಲಾಲು ದೋಷಿ ಎಂದು ಪರಿಗಣಿತರಾಗಿದ್ದಾರೆ. ಬಹುಕೋಟಿ ಮೇವು ಹಗರಣಗಳ ಪೈಕಿ ಈಗಾಗಲೇ ಒಂದರಲ್ಲಿ ಲಾಲುಗೆ ಜೈಲು ಶಿಕ್ಷೆಯಾಗಿದ್ದು ಬೇಲ್‌ನಲ್ಲಿ ಈ ತನಕ ಹೊರಗಿದ್ದರು. 

ನಿರಂತರ ಎರಡನೇ ದಿನವಾದ ಇಂದು ಗುರುವಾರ ಕೂಡ ಲಾಲು ಶಿಕ್ಷೆ ಪ್ರಮಾಣ ಪ್ರಕಟನೆಯನ್ನು ನಾಳೆಗೆ ಮುಂದೂಡಿದ ಸಿಬಿಐ ನ್ಯಾಯಾಧೀಶ ಶಿವ ಪಾಲ್‌ ಸಿಂಗ್‌ ಅವರು ಲಾಲು ಶಿಕ್ಷೆ ಪ್ರಮಾಣ ಪ್ರಕಟನೆಯನ್ನು ತಾವು ವಿಡಿಯೋ ಕಾನ್ಫರೆನ್ಸ್‌ ಮೂಲಕ ಅಥವಾ ತೆರೆದ ಕೋರ್ಟಿನಲ್ಲಿ ಪ್ರಕಟಿಸಬೇಕೇ ಎಂಬುದನ್ನು ನಾಳೆ ಶುಕ್ರವಾರವೇ ತೀರ್ಮಾನಿಸುವುದಾಗಿ ಹೇಳಿದರು. 

ಲಾಲು ಪ್ರಸಾದ್‌ ಯಾದವ್‌ ಹಿತೈಷಿಗಳಿಂದ ತಮಗೆ ಕೆಲ ಫೋನ್‌ ಕರೆಗಳು ಬಂದಿವೆ ಎಂದಷ್ಟೇ ತಿಳಿಸಿದ ನ್ಯಾಯಾಧೀಶರು ಆ ಫೋನ್‌ ಕರೆಗಳ ಸ್ವರೂಪ ಮತ್ತು ವಿವರಗಳನ್ನು ಬಹಿರಂಗಪಡಿಸಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next